For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಕೆವೈಸಿ: ಮೇ 31ರೊಳಗೆ ಅಪ್‌ಡೇಟ್‌ ಮಾಡಿ!

|

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರಿಗೆ ಮಹತ್ವದ ಸುದ್ದಿ ಇಲ್ಲಿದೆ. ಇದುವರೆಗೂ ತಮ್ಮ ಎಸ್‌ಬಿಐ ಖಾತೆಗೆ ಕೆವೈಸಿ ಅಪ್‌ಡೇಟ್‌ ಮಾಡಿಲ್ಲದವರು ಮೇ 31ರೊಳಗೆ ಕೆವೈಸಿ ಅಪ್‌ಡೇಟ್‌ ಮಾಡುವಂತೆ ಬ್ಯಾಂಕ್ ತಿಳಿಸಿದೆ.

ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌: ಠೇವಣಿ ಮೇಲಿನ ಬಡ್ಡಿದರ ಹೆಚ್ಚಳಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌: ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

ಅಂತಿಮ ದಿನಾಂಕದೊಳಗೆ ಕೆವೈಸಿ ಮಾಡದೇ ಹೋದರೆ, ಖಾತೆ ನಿಷ್ಕ್ರಿಯವಾಗುತ್ತದೆ. ಕೋವಿಡ್‌ ಹಿನ್ನೆಲೆಯ ಲಾಕ್‌ಡೌನ್‌ ಮತ್ತು ಇತರ ನಿರ್ಬಂಧಗಳಿಂದ ಬ್ಯಾಂಕಿಗೆ ಬರಲು ಅನೇಕ ಗ್ರಾಹಕರಿಗೆ ಕಷ್ಟವಾಗುತ್ತಿದೆ. ಹೀಗಾಗಿ, ಅಂಚೆ ಅಥವಾ ಇಮೇಲ್‌ ಮೂಲಕವೂ ಗ್ರಾಹಕರು ತಮ್ಮ ಖಾತೆಗಳಿಗೆ ಕೆವೈಸಿಯನ್ನು ಅಪ್‌ಡೇಟ್‌ ಮಾಡಬಹುದು.

ಎಸ್‌ಬಿಐ ಕೆವೈಸಿ: ಮೇ 31ರೊಳಗೆ ಅಪ್‌ಡೇಟ್‌ ಮಾಡಿ!

ಇನ್ನು ನೀವು ಬ್ಯಾಂಕ್‌ಗೆ ನೇರವಾಗಿ ಭೇಟಿ ನೀಡಿ ಅಗತ್ಯವಿಲ್ಲ. ಆನ್‌ಲೈನ್ ಮೂಲಕವೇ ಗುರುತು, ವಿಳಾಸ, ಫೋನ್ ನಂಬರ್ ಸೇರಿದಂತೆ ಕೆವೈಸಿಯನ್ನು ಪೂರ್ಣಗೊಳಿಸದ ಗ್ರಾಹಕರು ಕೂಡಲೇ ಅಪ್‌ಡೇಟ್‌ ಮಾಡುವಂತೆ ಸೂಚಿಸಿದೆ. ಕೆವೈಸಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಬ್ಯಾಂಕ್‌ ಶಾಖೆಗೆ ಅಂಚೆ ಮೂಲಕ ತಲುಪಿಸಬಹುದು.

ಇಲ್ಲವೇ, ಇ-ಮೇಲ್‌ ಮೂಲಕ ಸಾಫ್ಟ್‌ ಕಾಪಿಗಳನ್ನು ಕಳಿಸಬಹುದು. ಇವುಗಳನ್ನು ಅಂಗೀಕರಿಸುವಂತೆ ಎಸ್‌ಬಿಐ, ತನ್ನ ಅಧಿಕಾರಿಗಳಿಗೆ ಸಲಹೆ ನೀಡಿದೆ. ತಕ್ಷಣದಿಂದಲೇ ಇದು ಅನ್ವಯವಾಗಿದೆ.

ಎಸ್‌ಬಿಐ ಗ್ರಾಹಕರು ತಮ್ಮ ಕೆವೈಸಿ ದಾಖಲೆಗಳನ್ನು ನವೀಕರಿಸಲು ಈ ಕೆಳಗಿನ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿದೆ:
1) ಪಾಸ್‌ಪೋರ್ಟ್, 2) ಮತದಾರರ ಗುರುತಿನ ಚೀಟಿ, 3) ಚಾಲನಾ ಪರವಾನಗಿ, 4) ಆಧಾರ್ ಕಾರ್ಡ್, 5) ಎನ್‌ಆರ್‌ಇಜಿಎ ಕಾರ್ಡ್, 6) ಪ್ಯಾನ್ ಕಾರ್ಡ್.

English summary

SBI KYC Update: Customers Dont Need To Visit Bank Anymore

State Bank of India customers during the pandemic, the bank has asked them to update Know Your Customer (KYC) details until May 31
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X