ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಪ್ರಮುಖ ಸರ್ಕಾರಿ ವಲಯದ ಬ್ಯಾಂಕ್‌ಗಳ ಪೈಕಿ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' ಕೂಡ ಒಂದಾಗಿದೆ. ಲಾಭದ ವಿಚಾರದಲ್ಲೂ ಮುಂದೆ ಇರುವ ಎಸ್‌ಬಿಐ, ಈಗ ಷೇರು ಮಾರುಕಟ್ಟೆಯಲ್ಲಿ ಕೂಡ ತನ್ನ ಹವಾ ಎಬ್ಬಿಸಿದೆ. ಹೂಡಿಕೆದಾರರ ಕೈಗೂ ಸಖತ್ ಲಾಭ ನೀಡುತ್ತಿರುವ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' (State Bank Of India) ಮತ್ತೊಂದು ಮೈಲಿಗಲ್ಲು ತಲುಪಿದೆ.
ಸರ್ಕಾರಿ ವಲಯದ ಬ್ಯಾಂಕ್ ಎಸ್‌ಬಿಐ ಷೇರುಗಳು ಟಾಪ್ ಆಗಿವೆ. ಅದರಲ್ಲೂ ದೇಶ, ವಿದೇಶದ ಹೂಡಿಕೆದಾರರಿಗೆ ಎಸ್‌ಬಿಐ ಷೇರುಗಳೇ ಫೇವರಿಟ್. ಹೀಗೆ ಹೂಡಿಕೆದಾರರನ್ನು ಸೆಳೆಯುತ್ತಿರುವ ಎಸ್‌ಬಿಐ ಷೇರುಗಳು ಮತ್ತೊಂದು ಮೈಲಿಗಲ್ಲು ತಲುಪಿವೆ. ಕಳೆದ ವಾರದ ಷೇರು ವಹಿವಾಟಿನಲ್ಲಿ ದೇಶದ ಪ್ರಮುಖ 10 ಕಂಪನಿ ಪೈಕಿ ಆರು ಕಂಪನಿಗಳ ಮಾರುಕಟ್ಟೆ ಮೌಲ್ಯ ಎಂದರೆ, ಎಂ-ಕ್ಯಾಪ್ ₹1.30 ಲಕ್ಷ ಕೋಟಿ ರೂಪಾಯಿ ಏರಿಕೆ ಕಂಡಿದೆ. ಹೀಗೆ ಎಸ್‌ಬಿಐ ಕೂಡ ಹೊಸ ಇತಿಹಾಸ ನಿರ್ಮಿಸಿದೆ.

ಯಾವ ಯಾವ ಕಂಪನಿಗೆ ಲಾಭ?
ಕಳೆದ ವಾರದಲ್ಲಿ ಉಂಟಾದ ಬದಲಾವಣೆಯ ಪರಿಣಾಮ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಸ್ಥೆಯ ಮಾರುಕಟ್ಟೆ ಮೌಲ್ಯಕ್ಕೆ ಸುಮಾರು 45,158 ಕೋಟಿ ರೂಪಾಯಿ ಮೌಲ್ಯ ಸೇರ್ಪಡೆ ಆಗಿದೆ. ಎಸ್‌ಬಿಐ ಬ್ಯಾಂಕ್‌ನ ಒಟ್ಟು ಎಂ-ಕ್ಯಾಪ್ ₹7.15 ಲಕ್ಷ ಕೋಟಿ ರೂಪಾಯಿಗೆ ಈ ಮೂಲಕ ಎಂಟ್ರಿ ಕೊಟ್ಟಂತಾಗಿದೆ. ಐಸಿಐಸಿಐ ಬ್ಯಾಂಕ್, 28,726 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಏರಿಸಿಕೊಂಡಿದ್ದರೆ. ಇನ್ನೊಂದು ಕಡೆ ಭಾರ್ತಿ ಏರ್‌ಟೆಲ್ 20,747 ಕೋಟಿ ರೂಪಾಯಿ & ಐಟಿಸಿ 18,914 ಕೋಟಿ ರೂಪಾಯಿ, ಎಲ್‌ಐಸಿ ₹9,487 ಕೋಟಿ ರೂಪಾಯಿ & ಇನ್ಫೊಸಿಸ್ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ 7,699 ಕೋಟಿ ರೂಪಾಯಿ ಸೇರ್ಪಡೆ ಆಗಿದೆ.
ಇಳಿಕೆ ಕಂಡ ಕಂಪನಿಗಳು
ಈ ವಿಚಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳಲ್ಲಿ ಎಂ-ಕ್ಯಾಪ್ ಇಳಿಕೆ ಕಂಡಿದೆ. ಈ ಹಿನ್ನೆಲೆ ರಿಲಯನ್ಸ್ ಇಂಡಸ್ಟ್ರೀಸ್ 26,115 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಇಳಿಕೆ ಮಾಡಿಕೊಂಡಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್ ₹16,371 ಕೋಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 5,282 ಕೋಟಿ ರೂಪಾಯಿ ಎಂ-ಕ್ಯಾಪ್ ಇಳಿಕೆ ಮಾಡಿಕೊಂಡಿದ್ದು, ಹೀಗೆ ಹಿಂದುಸ್ತಾನ್ ಯೂನಿಲಿವರ್ ಕಂಪನಿ ಎಂ-ಕ್ಯಾಪ್ 2,525 ಕೋಟಿ ಇಳಿಕೆ ಆಗಿದ್ದು, ಈ ಮೂಲಕ ದೊಡ್ಡ ಮಟ್ಟದಲ್ಲಿ ವ್ಯತ್ಯಾಸ ಆಗಿದೆ.


Click it and Unblock the Notifications