ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಖುಷಿಸುದ್ದಿ ನೀಡುತ್ತಿದೆ. ಅದೇನೆಂದರೆ ಬಹುನಿರೀಕ್ಷಿತ ಆಫಿಸರ್ ಹುದ್ದೆಗಳ ನೇಮಕಾತಿಗಾಗಿ, ಅಧಿಕೃತ ಅಧಿಸೂಚನೆಯನ್ನು ಜಾರಿ ಮಾಡಿದೆ. ದೇಶಾದ್ಯಂತ ಉದ್ಯೋಗ ಆಸಕ್ತರಿಗೆ ಒಳ್ಳೆಯ ಅವಕಾಶ ನೀಡಿದೆ. ಈ ಬಾರಿ ಒಟ್ಟಾಗಿ 541 ಹುದ್ದೆಗಳು ಪ್ರಕಟವಾಗಿದ್ದು, ಇವುಗಳಲ್ಲಿ ನಿಯಮಿತ ಮತ್ತು ಬ್ಯಾಕ್‌ಲಾಗ್ ಹುದ್ದೆಗಳೆರಡೂ ಸೇರಿವೆ.

2025ರ ಜೂನ್ 24ರಂದು ಅಧಿಸೂಚನೆ ಬಿಡುಗಡೆ ಆಗಿದ್ದು, ಈಗಾಗಲೇ sbi.co.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 7, 2025.
ಹುದ್ದೆಯ ಪ್ರಮುಖ ವಿವರಗಳು:
ನಿಯೋಜಕ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಯ ಹೆಸರು: ಪ್ರೊಬೇಷನರಿ ಅಧಿಕಾರಿ (SBI PO)
ಒಟ್ಟು ಹುದ್ದೆಗಳು: 541 (ಸಾಮಾನ್ಯ + ಬ್ಯಾಕ್‌ಲಾಗ್)
ಅರ್ಜಿ ವಿಧಾನ: ಆನ್‌ಲೈನ್
ಅರ್ಜಿ ಶುಲ್ಕ: ₹750 (ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್), ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿಗೆ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ:
ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿದಾರರು ಮೊದಲು ಪೂರ್ವಭಾವಿ ಪರೀಕ್ಷೆ ಎದುರಿಸಬೇಕಾಗುತ್ತದೆ. ನಂತರ ಮುಖ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ. ಇದಾದ ಬಳಿಕೆ ಗ್ರೂಪ್ ಆಕ್ಟಿವಿಟೀಸ್ ಮುಗಿಸಿ, ಸಂದರ್ಶನದಲ್ಲಿ ಭಾಗಿಯಾಗಬೇಕಾಗುತ್ತದೆ.
ಆರಂಭಿಕ ವೇತನ: ₹48,480/- (ಜೋತೆಗೆ ವಿವಿಧ ಭತ್ಯೆಗಳು)
ಉದ್ಯೋಗ ಸ್ಥಳ: ಭಾರತಾದ್ಯಂತ SBI ಶಾಖೆಗಳಲ್ಲಿ
ಅಧಿಕೃತ ವೆಬ್‌ಸೈಟ್: www.sbi.co.in
ಅರ್ಹತಾ ಮಾನದಂಡಗಳು:
ವಯೋಮಿತಿ: ಅರ್ಜಿದಾರರ ವಯಸ್ಸು 21 ರಿಂದ 30 ವರ್ಷಗಳ ನಡುವೆ ಇರಬೇಕು (ಆರ್ಜಿ ಸಲ್ಲಿಸಲು ಜುಲೈ 1, 2025ರ ಮಾಹಿತಿಯಂತೆ).
ವಿದ್ಯಾರ್ಹತೆ: ಮಾನ್ಯತಾಪ್ರಾಪ್ತ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು.
ವಿಸ್ತೃತ ಅಧಿಸೂಚನೆ PDF ಮತ್ತು ಮಾಹಿತಿ:
ಪರೀಕ್ಷಾ ಮಾದರಿ, ವೇತನದ ರಚನೆ, ಮೀಸಲಾತಿ ನಿಯಮಗಳು, ವಿದ್ಯಾರ್ಹತೆ ಸಂಬಂಧಿತ ಷರತ್ತುಗಳು ಹಾಗೂ ಇನ್ನಿತರ ನಿಖರ ಮಾಹಿತಿಗಾಗಿ SBI PO 2025 ಅಧಿಸೂಚನೆಯ PDF ಡೌನ್‌ಲೋಡ್ ಮಾಡುವುದು ಅತ್ಯಂತ ಅಗತ್ಯ. ಅಧಿಸೂಚನೆ ಫೈಲ್ sbi.co.in ವೆಬ್‌ಸೈಟ್‌ನಲ್ಲಿದೆ.
SBI PO 2025ಗೆ ಅರ್ಜಿ ಸಲ್ಲಿಸುವ ವಿಧಾನ:
ಹಂತ 1: www.sbi.co.in ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ "Careers" ವಿಭಾಗವನ್ನು ಕ್ಲಿಕ್ ಮಾಡಿ
ಹಂತ 3: "Current Openings" ವಿಭಾಗದಲ್ಲಿ "SBI PO 2025" ಲಿಂಕ್ ಪತ್ತೆ ಮಾಡಿ
ಹಂತ 4: "Apply Online" ಕ್ಲಿಕ್ ಮಾಡಿ
ಹಂತ 5: ಮೊದಲು ನೊಂದಣಿ ಮಾಡಿ - ಹೊಸ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಸೃಜಿಸಿ
ಹಂತ 6: ನೋಂದಣಿ ನಂತರ ಲಾಗಿನ್ ಮಾಡಿ ಮತ್ತು ಅರ್ಜಿ ನಮೂದಿಸಿ
ಹಂತ 7: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಶುಲ್ಕ ಪಾವತಿ ಮಾಡಿ
ಹಂತ 8: ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಮುಖ್ಯ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: ಜೂನ್ 24, 2025
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 7, 2025
ಪೂರ್ವಭಾವಿ ಪರೀಕ್ಷೆ ನಿರೀಕ್ಷಿತ ದಿನಾಂಕ: ಆಗಸ್ಟ್ ಅಥವಾ ಸೆಪ್ಟೆಂಬರ್ 2025 (ಅಂತಿಮ ದಿನಾಂಕ ಶೀಘ್ರ ಪ್ರಕಟವಾಗಲಿದೆ)
SBI PO ಹುದ್ದೆಗಳು ಬುದ್ಧಿವಂತಿಕೆ, ಸಕ್ರಿಯತೆ ಮತ್ತು ನೇತೃತ್ವ ಕೌಶಲಗಳನ್ನು ಹೊಂದಿರುವ ಯುವಕರಿಗೆ ಅತ್ಯುತ್ತಮ ವೇದಿಕೆ. ಸ್ಪರ್ಧಾತ್ಮಕ ವೇತನ, ವಿವಿಧ ತರಬೇತಿಗಳು ಹಾಗೂ ಬೆಳೆವ cast ನೀತಿಗಳನ್ನು ಹೊಂದಿರುವ SBI ನಂತಹ ಸಂಸ್ಥೆಯೊಂದಿಗೆ ನಿಮ್ಮ ವೃತ್ತಿ ಜೀವನವನ್ನು ಆರಂಭಿಸುವುದೇ ನಿಮ್ಮ ಮುಂದಿನ ದೊಡ್ಡ ಹೆಜ್ಜೆಯಾಗಬಹುದು.


Click it and Unblock the Notifications