For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ Q2 ಫಲಿತಾಂಶ: ನಿರೀಕ್ಷೆಗೂ ಮೀರಿದ ಲಾಭ ಗಳಿಕೆ

|

ಮುಂಬೈ, ನವೆಂಬರ್ 3: ಸರ್ಕಾರಿ ಸ್ವಾಮ್ಯ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಇಂದು ಪ್ರಕಟಿಸಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆಗೂ ಮೀರಿದ ಲಾಭವನ್ನು ಸಂಸ್ಥೆ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಶೇ 67ರಷ್ಟು ನಿವ್ವಳ ಲಾಭ ಗಳಿಸಿದ್ದು, 7,626.6 ಕೋಟಿ ರು ಗಳಿಸಿದೆ.

2021ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ 7,626.6 ಕೋಟಿ ರು ನಿವ್ವಳ ಲಾಭ ದಾಖಲಾಗಿದ್ದು, ಮಾರುಕಟ್ಟೆ ತಜ್ಞರು 7,450 ಕೋಟಿ ರು ಲಾಭದ ನಿರೀಕ್ಷೆ ಹೊಂದಿದ್ದರು.

ಉದ್ಯೋಗಿಗಳ ಕೌಟುಂಬಿಕ ಪಿಂಚಣಿ ಪರಿಷ್ಕರಣೆಯಿಂದ ಸಂಸ್ಥೆಗೆ 7,418.4 ಕೋಟಿ ರು ನಷ್ಟು ಒಮ್ಮೆಗೆ ನಷ್ಟ ಅನುಭವಿಸಿದರೂ ಈ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರಹಾಕಿದೆ.

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಅನುತ್ಪಾದಕ ಸಾಲ ಅನುಪಾತ ನಿವ್ವಳ ಪ್ರಮಾಣ ಶೇ 5.32ರಿಂದ ಶೇ 4.90ಕ್ಕೆ ಇಳಿಕೆಯಾಗಿದೆ. ನಿವ್ವಳ ಎನ್ ಪಿ ಅನುಪಾತ ಕಳೆದ ತ್ರೈಮಾಸಿಕದಲ್ಲಿ ಶೇ 1.77ರಷ್ಟಿತ್ತು ಈ ತ್ರೈಮಾಸಿಕದಲ್ಲಿ ಶೇ 1.52ರಷ್ಟಾಗಿದೆ.

ನಿವ್ವಳ ಬಡ್ಡಿ ಆದಾಯ (NII) ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 29ರಷ್ಟು 31, 183.9 ಕೋಟಿ ರುಗೇರಿದ್ದು, ಮಾರುಕಟ್ಟೆ ತಜ್ಞರ ನಿರೀಕ್ಷೆ 28, 912 ಕೋಟಿ ರು ನಷ್ಟಿತ್ತು.

ಈ ತ್ರೈಮಾಸಿಕದಲ್ಲಿ ಸಾಲದ ನಷ್ಟದ ನಿಬಂಧನೆಗಳು 2,699 ಕೋಟಿ ರೂ ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 52 ಪ್ರತಿಶತದಷ್ಟು ಕುಸಿದಿದೆ ಮತ್ತು ಅನುಕ್ರಮ ಆಧಾರದ ಮೇಲೆ 46.3 ಶೇಕಡಾ ಕಡಿಮೆಯಾಗಿದೆ ಎಂದು ಎಸ್ ಬಿ ಐ ಹೇಳಿದೆ. Q2FY22 ರಲ್ಲಿ ಪ್ರಾವಿಷನ್ ಕವರೇಜ್ ಅನುಪಾತ (PCR) ಶೇ 87.68ತಲುಪಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಶೇ 85.93ರಷ್ಟಿತ್ತು.

ಎಸ್‌ಬಿಐ Q2 ಫಲಿತಾಂಶ: ನಿರೀಕ್ಷೆಗೂ ಮೀರಿದ ಲಾಭ ಗಳಿಕೆ
State Bank of India: Quotes, News
BSE 773.00BSE Quote0.15 (0.02%)
NSE 773.10NSE Quote0.1 (0.01%)

ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಒಟ್ಟಾರೆ ಜಮೆ ಶೇ 9.77 ರಷ್ಟು ಏರಿಕೆಯಾಗಿದೆ. ಚಾಲ್ತಿ ಖಾತೆ ಜಮೆ ವರ್ಷದಿಂದ ವರ್ಷಕ್ಕೆ ಶೇ 19.20 ರಷ್ಟು ಏರಿಕೆ ಕಂಡಿದೆ. ಉಳಿತಾಯ ಖಾತೆ ಜಮೆ ಕಳೆದ ವರ್ಷಕೆಕ್ ಹೋಲಿಸಿದರೆ ಶೇ 10.55 ರಷ್ಟು ಪ್ರಗತಿ ಕಂಡಿದೆ. ಗೃಹ ಸಾಲ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10.74ರಷ್ಟು ಏರಿಕೆಯಾಗಿದೆ.

ಷೇರುಗಳು ಜಿಗಿತ: ಬಿಎಸ್ಇಯಲ್ಲಿ ದಿನದ ವಹಿವಾಟು ಆರಂಭದಲ್ಲಿ 515. 40 ರು ನಂತೆ ಆರಂಭಗೊಂಡು 527.65 ರು ಗೆ ಏರಿದ್ದು, ಶೇ 1.14ರಷ್ಟು ಹೆಚ್ಚಳ ಕಂಡಿದೆ. ಇದೇ ವೇಳೆ ಎನ್ಎಸ್ಇಯಲ್ಲೂ ಇದೇ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮೌಲ್ಯ 4,70,907 ಕೋಟಿ ರು ನಷ್ಟಿದೆ.

ಆರಂಭಿಕ ವಹಿವಾಟಿನಲ್ಲೇ ಎಸ್ ಬಿಐ ಷೇರುಗಳು ಉತ್ತಮ ಸ್ಥಿತಿಯಲ್ಲಿತ್ತು.ಮುಂಬೈ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಷೇರುಗಳು ಹಸಿರು ಟ್ಯಾಗ್ ಪಡೆದು ಸುಸ್ಥಿತಿಯಲ್ಲಿವೆ. ಪ್ರಮುಖವಾಗಿ ಸ್ಟೇಟ್ ಆಫ್ ಇಂಡಿಯಾ ಹಾಗೂ ಭಾರ್ತಿ ಏರ್ಟೆಲ್ ಷೇರುಗಳು ಉತ್ತಮ ಆರಂಭ ಪಡೆದುಕೊಂಡಿವೆ. ಹಿಂದೂಸ್ತಾನ್ ಯೂನಿಲಿವರ್ ಹೊರತುಪಡಿಸಿ ಬಹುತೇಕ ಎಲ್ಲಾ ಸಂಸ್ಥೆಗಳು ಆರಂಭಿಕ ಮುನ್ನಡೆ ಪಡೆದುಕೊಂಡಿವೆ. ಮುಖ್ಯವಾಗಿ ಐಟಿ, ಟೆಕ್ ಷೇರುಗಳು ಚೇತರಿಕೆ ಕಂಡಿವೆ.

ಮಿಕ್ಕಂತೆ ಭಾರ್ತಿ ಏರ್ ಟೆಲ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ವೋಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್ ಟೆಲ್ ಲಿಮಿಟೆಡ್, ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಲಿಮಿಟೆಡ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಮೇಲಕ್ಕೇರಿವೆ. ಟಾಟಾ ಪವರ್, ಟಾಟಾ ಮೋಟರ್ಸ್ ಇಳಿಕೆ ಕಂಡಿವೆ.

ಎಸ್ ಬಿಐ ಅಲ್ಲದೆ, ಐಷರ್ ಮೋಟರ್ಸ್, ಬಾಟಾ ಇಂಡಿಯಾ, ಎಬಿಎಫ್ ಆರ್ ಎಲ್, ಫೈಜರ್, ಗುಜರಾತ್ ಸ್ಟೇಟ್ ಪೆಟ್ರೋನೆಟ್, ಯುಫೆಕ್ಸ್, ಗ್ರಿಂಡ್ ವೆಲ್ ನಾರ್ಟನ್, ಗುಜರಾತ್ ಅಲ್ಕಾಲಿಸ್ ಅಂಡ್ ಕೆಮಿಕಲ್ಸ್ ತ್ರೈಮಾಸಿಕ ವರದಿ ಹೊರ ಬರಲಿದೆ.

English summary

SBI Q2 results: Net profit surges 67% YoY to Rs 7,627 crore, beats estimate

State Bank of India on Wednesday reported a 66.7 per cent year-on-year (YoY) rise in net profit to Rs 7,626.6 crore for the quarter ended September 2021, which was higher than analysts’ estimate of Rs 7,450 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X