For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ನಾಲ್ಕನೇ ತ್ರೈಮಾಸಿಕ ವರದಿ: ನಿವ್ವಳ ಲಾಭ 6,451 ಕೋಟಿ ರೂಪಾಯಿ

|

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರೀ ಲಾಭವನ್ನು ವರದಿ ಮಾಡಿದೆ. 2021 ರ ಮಾರ್ಚ್ 31 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ, ಬ್ಯಾಂಕ್ ಸುಮಾರು ಶೇಕಡಾ 80ರಷ್ಟು ಲಾಭವನ್ನು ವರದಿ ಮಾಡಿದೆ.

ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ 3,580.8 ಕೋಟಿ ರೂ.ಗಳ ಲಾಭವನ್ನು ಹೊಂದಿದ್ದು, ಈ ಬಾರಿ 6,450.7 ಕೋಟಿ ರೂ.ಗೆ ಏರಿದೆ. ಎಸ್‌ಬಿಐ ಹೂಡಿಕೆದಾರರಿಗೆ ಪ್ರತಿ ಷೇರಿಗೆ 4 ರೂ.ಗಳ ಡಿವಿಡೆಂಡ್ ಘೋಷಿಸಿದೆ. ಮೇ 2017 ರ ನಂತರ ಬ್ಯಾಂಕ್ ಘೋಷಣೆ ಮಾಡಿದ ಮೊದಲ ಡಿವಿಡೆಂಡ್ ಇದಾಗಿದೆ.

ಎಸ್‌ಬಿಐ ನಿವ್ವಳ ಲಾಭ ಶೇ. 80ರಷ್ಟು ಏರಿಕೆ: 6,451 ಕೋಟಿ ರೂಪಾಯಿ

ಮೇ 2017 ರಲ್ಲಿ ಬ್ಯಾಂಕ್ ಪ್ರತಿ ಷೇರಿಗೆ 2.6 ರೂ.ಗಳ ಡಿವಿಡೆಂಡ್ ಪಾವತಿಸಿದೆ. ಈ ಬಾರಿ ಲಾಭಾಂಶವನ್ನು ಪಾವತಿಸುವ ದಿನಾಂಕವನ್ನು ಜೂನ್ 18, 2021 ಎಂದು ನಿಗದಿಪಡಿಸಲಾಗಿದೆ. ಅಂದರೆ, ಈ ದಿನಾಂಕದ ಮೊದಲು ಯಾರು ಬ್ಯಾಂಕಿನ ಪಾಲನ್ನು ಖರೀದಿಸುತ್ತಾರೋ ಅವರಿಗೆ ಈ ಲಾಭಾಂಶ ಸಿಗುತ್ತದೆ.

ಇನ್ನು ಎಸ್‌ಬಿಐನ ಬಡ್ಡಿ ಆದಾಯವೂ ಶೇಕಡಾ 18.9 ರಷ್ಟು ಏರಿಕೆಯಾಗಿ 27,067 ಕೋಟಿ ರೂ. ತಲುಪಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಈ ಆದಾಯ 22,767 ಕೋಟಿ ರೂ. ನಷ್ಟಿತ್ತು. ಎಸ್‌ಬಿಐನ ಒಟ್ಟು ಎನ್‌ಪಿಎ ತ್ರೈಮಾಸಿಕ ಆಧಾರದ ಮೇಲೆ ಶೇ 5.44 ರಿಂದ ಶೇ 4.98 ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 1.81 ರಿಂದ ಶೇ 1.50 ಕ್ಕೆ ಇಳಿದಿದೆ. ಎಸ್‌ಬಿಐನ ಒಟ್ಟು ಎನ್‌ಪಿಎ ತ್ರೈಮಾಸಿಕ ಆಧಾರದ ಮೇಲೆ ತ್ರೈಮಾಸಿಕ ಆಧಾರದ ಮೇಲೆ 1.34 ಲಕ್ಷ ಕೋಟಿಯಿಂದ 1.26 ಲಕ್ಷ ಕೋಟಿ ರೂ.ಗೆ ಇಳಿದಿದೆ. ನಿವ್ವಳ ಎನ್‌ಪಿಎ ಹಿಂದಿನ ತ್ರೈಮಾಸಿಕದಲ್ಲಿ 42,797 ಕೋಟಿ ರೂ.ಗಳಿಂದ 36,810 ಕೋಟಿ ರೂ.ಗೆ ಇಳಿದಿದೆ.

English summary

SBI Q4 Profit Jumps 80 Percent: Rs 6451 Crore

State Bank of India (SBI) on Friday reported a net profit of Rs6,451 crore for the three months to March, a jump of 80% year
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X