ಕೋವಿಡ್-19 ಸಾಂಕ್ರಾಮಿಕ ರೋಗದ ಹೆಚ್ಚಳವು ದೇಶದಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ. ಇದರ ನಡುವೆ ಮನೆ ಕಟ್ಟುವವರಿಗೆ ಗುಡ್‌ನ್ಯೂಸ್ ಇಲ್ಲಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲ ಬಡ್ಡಿ ದರ ಇಳಿಕೆ ಮಾಡಿದೆ.
ಶನಿವಾರ ಹೊಸ ಬಡ್ಡಿದರಗಳನ್ನು ಪ್ರಕಟಿಸಿದ ಎಸ್‌ಬಿಐ, ಗೃಹ ಸಾಲ ಬಡ್ಡಿದರವನ್ನು ಶೇಕಡಾ 6.70ಕ್ಕೆ ಇಳಿಸಿದೆ. ಅಲ್ಲದೆ ಮಹಿಳಾ ಸಾಲಗಾರರಿಗೆ 5 ಬಿಪಿಎಸ್ ವಿಶೇಷ ರಿಯಾಯಿತಿ ಸಿಗಲಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಬಡ್ಡಿದರ ಕಡಿತದೊಂದಿಗೆ, ಎಸ್‌ಬಿಐ ಗೃಹ ಸಾಲ ಬಡ್ಡಿದರಗಳು ಈಗ 30 ಲಕ್ಷ ರೂ.ವರೆಗಿನ ಸಾಲಗಳಿಗೆ ಶೇಕಡಾ 6.70ರಷ್ಟು, 30 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ ಮತ್ತು 75 ಲಕ್ಷದವರೆಗಿನ ಸಾಲಗಳಿಗೆ ಶೇಕಡಾ 6.95ರಿಂದ ಪ್ರಾರಂಭವಾಗುತ್ತವೆ. ಇನ್ನು 75 ಲಕ್ಷ ರೂ.ಗಿಂತ ಹೆಚ್ಚಿನ ದೊಡ್ಡ ಸಾಲಗಳಿಗೆ ಶೇಕಡಾ 7.05 ರಷ್ಟು ಬಡ್ಡಿದರ ಎಂದು ಬ್ಯಾಂಕ್ ತಿಳಿಸಿದೆ.
5 ಬಿಪಿಎಸ್ ಹೆಚ್ಚುವರಿ ಬಡ್ಡಿ ರಿಯಾಯಿತಿ ಪಡೆಯಲು ಗ್ರಾಹಕರು ತಮ್ಮ ಮನೆಯಿಂದಲೇ ಸುಲಭವಾಗಿ ಯೋನೊ ಆ್ಯಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಎಸ್‌ಬಿಐ ತಿಳಿಸಿದೆ.
ಈ ಮೊದಲು ಎಸ್‌ಬಿಐ ಗೃಹ ಸಾಲ ಬಡ್ಡಿ ದರವನ್ನು ಮಾರ್ಚ್ 31 ರವರೆಗೆ ಶೇಕಡಾ 6.7ಕ್ಕೆ ಇಳಿಸಿತ್ತು. ನಂತರದಲ್ಲಿ ಏಪ್ರಿಲ್ 1 ರಿಂದ ದರಗಳನ್ನು 6.95ಕ್ಕೆ ಏರಿಸಲಾಗಿತ್ತು. ಇದೀಗ ಮತ್ತೆ ಗೃಹ ಸಾಲ ಬಡ್ಡಿದರ ಇಳಿಕೆಗೊಂಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications