ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಆಯ್ಸ ಅವಧಿಗೆ ನಿಶ್ಚಿತ ಠೇವಣಿ (ಎಫ್.ಡಿ.) ಮೇಲಿನ ಬಡ್ಡಿ ದರವನ್ನು ಸೆಪ್ಟೆಂಬರ್ 10ರಿಂದ ಅನ್ವಯ ಆಗುವಂತೆ ಕಡಿತ ಮಾಡಿದೆ. ಈ ದರವು ಹೊಸದಾಗಿ ಠೇವಣಿ ಮಾಡುವವರಿಗೆ ಹಾಗೂ ಮೆಚ್ಯೂರಿಟಿಯ ನಂತರ ರಿನೀವಲ್ ಮಾಡಿಸುವವರಿಗೆ ಅನ್ವಯ ಆಗುತ್ತದೆ.
ಈ ಹಿಂದೆ ಮೇ 27ನೇ ತಾರೀಕಿನಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರದ ಪರಿಷ್ಕರಣೆ ಮಾಡಿತ್ತು, ಈ ಹೊಸ ಪರಿಷ್ಕರಣೆ ನಂತರ ಎಫ್.ಡಿ. ಅವಧಿ ಹಾಗೂ ಬಡ್ಡಿ ದರ ಹೀಗಿದೆ:
7 ದಿನದಿಂದ 45 ದಿನದ ತನಕ - 2.9%
46 ದಿನದಿಂದ 179 ದಿನ - 3.9%
180 ದಿನದಿಂದ 210 ದಿನ - 4.4%
211 ದಿನದಿಂದ 1 ವರ್ಷದೊಳಗೆ - 4.4%
1 ವರ್ಷದಿಂದ 2 ವರ್ಷದೊಳಗೆ - 4.9%
2 ವರ್ಷದಿಂದ 3 ವರ್ಷದೊಳಗೆ - 5.1%
3 ವರ್ಷದಿಂದ 5 ವರ್ಷದೊಳಗೆ - 5.3%
5 ವರ್ಷ ಮತ್ತು 10 ವರ್ಷದೊಳಗೆ - 5.4%

ಎಲ್ಲ ಅವಧಿಯ ಎಫ್.ಡಿ. ಮೇಲೆ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತದೆ. ಅದು ಕೂಡ ಸೆಪ್ಟೆಂಬರ್ 10ರಿಂದ ಅನ್ವಯ ಆಗುವಂತೆ ಬದಲಾಗಿದೆ. ಹಾಗಿದ್ದರೆ ಬಡ್ಡಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ.
7 ದಿನದಿಂದ 45 ದಿನದ ತನಕ - 3.4%
46 ದಿನದಿಂದ 179 ದಿನ - 4.4%
180 ದಿನದಿಂದ 210 ದಿನ - 4.9%
211 ದಿನದಿಂದ 1 ವರ್ಷದೊಳಗೆ - 4.9%
1 ವರ್ಷದಿಂದ 2 ವರ್ಷದೊಳಗೆ - 5.4%
2 ವರ್ಷದಿಂದ 3 ವರ್ಷದೊಳಗೆ - 5.6%
3 ವರ್ಷದಿಂದ 5 ವರ್ಷದೊಳಗೆ - 5.8%
5 ವರ್ಷ ಮತ್ತು 10 ವರ್ಷದೊಳಗೆ - 6.2%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ವಿಶೇಷವಾದ "ಎಸ್ ಬಿಐ ವೆಲ್ ಫೇರ್" ಎಂಬುದನ್ನು ಪರಿಚಯಿಸಿದೆ. ಈ ಸ್ಕೀಮ್ ಅಡಿಯಲ್ಲಿ ಹಿರಿಯ ನಾಗರಿಕರಿಗೆ ನೀಡುವ ಹೆಚ್ಚುವರಿ 50 bps ಜತೆಗೆ 30 bps ಮತ್ತೂ ಹೆಚ್ಚು ಬಡ್ಡಿ ನೀಡಲಾಗಿತ್ತದೆ. ಐದು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಅವಧಿಗೆ ಇದು ಅನ್ವಯ ಆಗುತ್ತದೆ. ಈ ಡೆಪಾಸಿಟ್ ಸ್ಕೀಮ್ ಅನ್ನು ಡಿಸೆಂಬರ್ 31, 2020ರ ತನಕ ವಿಸ್ತರಣೆ ಮಾಡಲಾಗಿದೆ.


Click it and Unblock the Notifications