SBIನಿಂದ 7.25% ಬಡ್ಡಿಗೆ ಸಾಲ; ಯಾರಿಗೆ, ಏಕೆ ಇಲ್ಲಿದೆ ಮಾಹಿತಿ

ಕೊರೊನಾ ವೈರಾಣು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆಯೊಂದನ್ನು ಮಾಡಿದೆ. COVID-19 ಎಮರ್ಜೆನ್ಸಿ ಕ್ರೆಡಿಟ್ ಲೈನ್ (CECL) ಎಂದು ಇದನ್ನು ಕರೆಯಲಾಗಿದ್ದು, ಈಗಾಗಲೇ ಎಸ್ ಬಿಐನಿಂದ ಸಾಲ ಪಡೆದಿರುವ ಅರ್ಹರಿಗೆ ಹೆಚ್ಚುವರಿ ಸಾಲ ಸೌಲಭ್ಯ ನೀಡಲಿದೆ. ಸದ್ಯದ ಬಿಕ್ಕಟ್ಟಿನ ಸ್ಥಿತಿಗೆ ನೆರವಾಗುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ.

ಎಸ್ ಬಿಐನಿಂದ ಸಾಲ ಪಡೆದವರಾಗಿದ್ದು, ಕೊರೊನಾದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಜೂನ್ 30, 2020ರ ತನಕ ಸಿಇಸಿಎಲ್ ಆಯ್ಕೆ ಮಾಡಿಕೊಂಡು, ಸ್ಟ್ಯಾಂಡ್ ಬೈ ಲೆಟರ್ ಆಫ್ ಕ್ರೆಡಿಟ್ (ಎಸ್ ಎಲ್ ಸಿ) ಮೂಲಕ ಸಾಲ ಪಡೆಯಬಹುದು. ಸಾಲದ ಅರ್ಹತಾ ಮಾನದಂಡ ಮತ್ತಿತರ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಎಸ್ ಬಿಐ ಶಾಖೆಗೆ ಭೇಟಿ ನೀಡಬಹುದು.

SBIನಿಂದ 7.25% ಬಡ್ಡಿಗೆ ಸಾಲ; ಯಾರಿಗೆ, ಏಕೆ ಇಲ್ಲಿದೆ ಮಾಹಿತಿ

ಒಂದೇ ಸಲಕ್ಕೆ ಬ್ಯಾಂಕ್ ನಿಂದ ಸಾಲದ ಮೊತ್ತವನ್ನು ನೀಡಲಾಗುತ್ತದೆ. ಸಾಲ ಪಡೆದವರು ಆರು ಇಎಂಐಗಳಲ್ಲಿ ಮರುಪಾವತಿ ಮಾಡಬಹುದು. ಇದಕ್ಕೆ ಬಡ್ಡಿ ದರವು ವಾರ್ಷಿಕ 7.25 ಪರ್ಸೆಂಟ್ ಇರುತ್ತದೆ. ಈ ದರವನ್ನು ಬ್ಯಾಖ್ ನಿಂದ ಗ್ರಾಹಕರಿಗೆ ಸಾಲ ನೀಡುವ ವೇಳೆ ತೀರ್ಮಾನ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+