ಕೊರೊನಾವೈರಸ್‌ನಿಂದ ತತ್ತರಿಸಿರುವ ಸಣ್ಣ ವ್ಯವಹಾರಗಳಿಗೆ ವಿಶೇಷ ಸಾಲ ನೀಡಲಿರುವ SBI

ದೇಶದಲ್ಲಿ ಕೊರೊನಾವೈರಸ್ ಹರಡುವಿಕೆಯಿಂದ ದೇಶದ ಬಹುತೇಕ ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು, 50 ಪರ್ಸೆಂಟ್‌ಗೂ ಅಧಿಕ ಕಂಪನಿಗಳ ಧಕ್ಕೆಗೆಯಾಗಿದೆ. ಜೊತೆಗೆ 80 ಪರ್ಸೆಂಟ್ ಕಂಪನಿಗಳು ನಗದು ಹರಿವಿನ ಸಮಸ್ಯೆ ಎದುರಿಸುತ್ತಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ತಿಳಿಸಿದೆ.

ಕಂಪನಿಗಳು ಅಷ್ಟೇ ಅಲ್ಲದೆ ದೇಶದ ಸಣ್ಣ-ಪುಟ್ಟ ವ್ಯಾಪಾರ ಹಾಗೂ ವ್ಯವಹಾರಗಳು ಕೂಡ ಕೋವಿಡ್-19 ಪರಿಣಾಮ ಎದುರಿಸುತ್ತಿವೆ. ಹೀಗಾಗಿ ಸಣ್ಣ ವ್ಯವಹಾರಗಳಿಗೆ ವಿಶೇಷ ಸಾಲ ಸೌಲಭ್ಯವನ್ನು ತೆರೆಯಲು ಎಸ್‌ಬಿಐ ಮುಂದಾಗಿದೆ ಎಂದು ಎಸ್‌ಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಬ್ಲೂಮ್‌ಬರ್ಗ್‌ಕ್ವಿಂಟ್ ವರದಿ ಮಾಡಿದೆ.

ಕೊರೊನಾವೈರಸ್‌ನಿಂದ ತತ್ತರಿಸಿರುವ ಸಣ್ಣ ವ್ಯವಹಾರಗಳಿಗೆ ವಿಶೇಷ ಸಾಲ:SBI

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಅಡೆತಡೆಗಳು ಎದುರಾಗಿವೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಸಾಲವನ್ನು ನೀಡಲು ಉದ್ದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 30ರೊಳಗೆ, ಸಾಲಗಾರರು 12 ತಿಂಗಳವರೆಗೆ 7.25 ಪರ್ಸೆಂಟ್ ಬಡ್ಡಿ ದರದಲ್ಲಿ 200 ಕೋಟಿ ರುಪಾಯಿಗಳವರೆಗೆ ಸಾಲ ಪಡೆಯಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸೌಲಭ್ಯದ ಅಡಿಯಲ್ಲಿ ಪಡೆದ ಸಾಲಗಳಿಗೆ ಅವರು ಯಾವುದೇ ಸಂಸ್ಕರಣಾ ಶುಲ್ಕ(ಪ್ರೊಸೆಸಿಂಗ್ ಫೀ) ಅಥವಾ ಪೂರ್ವಪಾವತಿ ದಂಡವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+