ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಖಾತೆಯನ್ನು ಹೊಂದಿದ್ದರೆ ಹಾಗಿದ್ದರೆ ತಪ್ಪದೇ ಈ ಸುದ್ದಿಯನ್ನು ನೀವು ಓದಲೇಬೇಕು.. ಹೌದು, ನೀವು ಪ್ರತಿದಿನ ಯುಪಿಐ ಬಳಕೆ ಮಾಡಿಕೊಂಡು ಹಣವನ್ನು ಪಾವತಿ ಮಾಡುತ್ತಿದ್ದರೆ ನೀವು ಈ ವಿಷಯವನ್ನು ತಿಳಿಕೊಳ್ಳವುದು ತುಂಬಾನೇ ಮುಖ್ಯವಾಗುತ್ತದೆ. ಯಾಕೆಂದರೆ ನಾಳೆ (ಜುಲೈ 22, 2025) ರಂದು, SBI ಯ UPI ಸೇವೆಯು ಸ್ವಲ್ಪ ಸಮಯದವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಈ ಕೆಲಸವನ್ನು ಮಾಡುವುದರ ಹಿಂದಿನ ಕಾರಣ ಸೇವಾ ನಿರ್ವಹಣೆ ಎಂದು ಬ್ಯಾಂಕ್ ಹೇಳಿದೆ. ಈ ಸಮಯದಲ್ಲಿ, ಯಾವುದೇ ಗ್ರಾಹಕರು ಯಾವುದೇ ರೀತಿಯ UPI ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.
ಈ ಸಮಯದಲ್ಲಿ ಸೇವೆ ಕ್ಲೋಸ್ ಇರುತ್ತದೆ.

ಜುಲೈ 22, 2025 ರಂದು ತನ್ನ ಯುಪಿಐ ಸೇವೆಯನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿದೆ.ಈ ಸ್ಥಗಿತಗೊಳಿಸುವಿಕೆಯು ಮಧ್ಯಾಹ್ನ 12.15 ರಿಂದ ಬೆಳಿಗ್ಗೆ 1.00 ವರೆಗೆ ಇರಉತ್ತದೆ. ಈ ಸಮಯದಲ್ಲಿ ಯಾವುದೇ ಹಣಕಾಸಿನ ವಾಹಿವಾಟುವನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಈ ಸಮಯವು ಒಟ್ಟು 45 ನಿಮಿಷಗಳು ಆಗಿದೆ. ಆದರೆ ನೀವು UPI ಲೈಟ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ ಎಂದು ನೀವು ತಿಳಿದಿರಬೇಕು.
ನೀವು ನಿರ್ವಹಣಾ ಕಾರ್ಯ ಪೂರ್ಣಗೊಳ್ಳುವವರೆಗೆ, ನೀವು ಯುಪಿಐ ಲೈಟ್ ಸಹಾಯವನ್ನು ತೆಗೆದುಕೊಳ್ಳಬಹುದು ಎಂದು SBI ಗ್ರಾಹಕರಿಗೆ ತಿಳಿಸಿದೆ. ಅದೇ ಸಮಯದಲ್ಲಿ, ಈ ಅನಾನುಕೂಲತೆಗಾಗಿ SBI ಗ್ರಾಹಕರಿಗೆ ವಿಷಾದ ವ್ಯಕ್ತಪಡಿಸಿದೆ ಮತ್ತು ಶೀಘ್ರದಲ್ಲೇ ಸೇವೆಯನ್ನು ಮತ್ತೆ ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದೆ.
UPI ಲೈಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?
ನಿಮ್ಮ ಮೊಬೈಲ್‌ನಲ್ಲಿ BHIM SBI Pay ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.ನಂತರ ಅಪ್ಲಿಕೇಶನ್ ತೆರೆಯಿರಿ ಮತ್ತು UPI ಲೈಟ್ ವಿಭಾಗಕ್ಕೆ ಹೋಗಿ. ಅಲ್ಲಿಂದ ನಿಮ್ಮ UPI ಲೈಟ್ ಖಾತೆಗೆ ಹಣವನ್ನು ಸೇರಿಸಿ. ಹಣವನ್ನು ಸೇರಿಸಿದ ನಂತರ, ಈ ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ನೀವು ಅದನ್ನು ಬಳಕೆಯನ್ನು ಮಾಡಲಾಗಿದೆ.
UPI ಲೈಟ್‌ನಲ್ಲಿ ಮಿತಿ ಎಷ್ಟು?
ನೀವು ಒಂದು ಬಾರಿಗೆ 2,000 ವರೆಗೆ ಲೋಡ್ ಮಾಡಬಹುದು. ನೀವು ಒಂದೇ ವಹಿವಾಟಿನಲ್ಲಿ ಗರಿಷ್ಠ 500 ಖರ್ಚು ಮಾಡಬಹುದು. ಒಂದು ದಿನದಲ್ಲಿ ಒಟ್ಟು 4,000 ವರೆಗೆ ವಹಿವಾಟು ನಡೆಸಬಹುದು. ನಿಮ್ಮ ಖಾತೆಯಲ್ಲಿ 2,000 ಕ್ಕಿಂತ ಹೆಚ್ಚು ಹಣವನ್ನು ಎಂದಿಗೂ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಸೌಲಭ್ಯವು ವಿಶೇಷವಾಗಿ ಸಣ್ಣ ವೆಚ್ಚಗಳಿಗೆ ಬಹಳ ಅನುಕೂಲವಾಗಲಿದೆ.
ಗ್ರಾಹಕರಿಗೆ ಸಲಹೆ
ಎಸ್‌ಬಿಐ ಎಲ್ಲಾ ಗ್ರಾಹಕರಿಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಂಡು ನಿರ್ವಹಣೆಯ ಸಮಯದಲ್ಲಿ ಯುಪಿಐ ಲೈಟ್‌ನಂತಹ ಆಯ್ಕೆಗಳನ್ನು ಬಳಸುವಂತೆ ಮನವಿ ಮಾಡಿದೆ. ಉಂಟಾದ ಅನಾನುಕೂಲತೆಗಾಗಿ ಬ್ಯಾಂಕ್ ಕ್ಷಮೆಯಾಚಿಸಿದೆ ಮತ್ತು ಸೇವೆ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಎಂದು ಭರವಸೆ ನೀಡಿದೆ. ಅದರ ನಂತರ ಗ್ರಾಹಕರು ಮೊದಲಿನಂತೆ ಯುಪಿಐ ವಹಿವಾಟುಗಳನ್ನು ಮತ್ತೆ ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications