ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿಶೇಷವಾದ ಬಡ್ಡಿ ದರಗಳೊಂದಿಗೆ ವಿವಿಧ ಸೀಮಿತ ಅವಧಿಯ ನಿಶ್ಚಿತ ಠೇವಣಿ (ಎಫ್‌ಡಿ) ಹೂಡಿಕೆ ಯೋಜನೆಗಳನ್ನು ನೀಡುತ್ತದೆ. ಈ ಬಗ್ಗೆ ನಿಮಗೆ ಮಾಹಿತಿ ತಿಳಿದಿದೆಯೇ? ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ ಇಲ್ಲಿ ಅವುಗಳ ವಿವರಗಳಿವೆ ತಿಳಿದುಕೊಳ್ಳಿ.
ಸೀಮಿತ ಅವಧಿಯ ನಿಶ್ಚಿತ ಠೇವಣಿ ಯೋಜನೆಗೆ 'SBI We-care' FD ಹೆಸರಿಸಲಾಗಿದ್ದು, ಈ ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ಬಡ್ಡಿ ದರವನ್ನು ನೀಡುವ ಮೂಲಕ ಈ ಯೋಜನೆ ಉತ್ತಮ ಆದಾಯವನ್ನು ಗಳಿಸಲು ಅನುಕೂಲ ಮಾಡಿಕೊಡುತ್ತದೆ. ಅದರ ಕಾರ್ಪೊರೇಟ್ ವೆಬ್‌ಸೈಟ್ ಪ್ರಕಾರ ಈ ಯೋಜನೆಯೂ ಪ್ರಸ್ತುತ ಹಿರಿಯ ನಾಗರಿಕರಿಗೆ 7.5 ಶೇಕಡಾ ವಾರ್ಷಿಕ ಆದಾಯವನ್ನು ಒದಗಿಸುತ್ತದೆ. (sbi.co.in ನಲ್ಲಿ ಪ್ರಸ್ತುತ ದರವನ್ನು ಡಬಲ್ ಚೆಕ್ ಮಾಡಿಕೊಳ್ಳಬಹುದು).

SBI We-care FD ಯೋಜನೆ ಎಂದರೇನು? ಇದು ಯಾರಿಗಾಗಿ?
2020ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪರಿಚಯಿಸಿದ ಎಸ್‌ಬಿಐ ವೀ-ಕೇರ್ ಎಫ್‌ಡಿ ಯೋಜನೆಯು ಹಿರಿಯ ನಾಗರಿಕರಿಗೆ ಅನುಗುಣವಾಗಿ ಮೀಸಲಾದ ಸ್ಥಿರ ಠೇವಣಿ ಆಯ್ಕೆಯಾಗಿದೆ. ಈ ಯೋಜನೆಯೂ ನಿವೃತ್ತರು ಮತ್ತು ಹಿರಿಯ ನಾಗರೀಕರಿಗೆ ಉತ್ತಮ ಆದಾಯದ ಖಚಿತತೆಯನ್ನು ನೀಡುತ್ತದೆ. ಈ ಯೋಜನೆ COVID-19 ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭಿಸಲಾಯಿತು.
We-care FD ಯೋಜನೆಯನ್ನು ಕೋವಿಡ್‌ನ ಸಾಂಕ್ರಮಿಕ ರೋಗದ ಅತ್ಯಂತ ಕಷ್ಟದ ಸಮಯದಲ್ಲಿ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಮತ್ತು ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಇದರ ಜಾರಿ ಬಳಿಕ ಈ ಯೋಜನೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ಅಗತ್ಯತೆಗಳನ್ನು ಪರಿಹರಿಸಲು ತನಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಹೆಚ್ಚಿನ ಬಡ್ಡಿಯನ್ನು ಗಳಿಸುವ ಮೂಲಕ ತಮ್ಮ ಉಳಿತಾಯವನ್ನು ಭದ್ರಪಡಿಸಿಕೊಳ್ಳಲು, ತಮ್ಮ ಖರ್ಚುಗಳನ್ನು ನಿರ್ವಹಿಸಲು ಮತ್ತು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಹಿರಿಯರಿಗೆ ಈ ಯೋಜನೆಯು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಈ ಯೋಜನೆ ಹಿರಿಯ ನಾಗರಿಕರ ಮನಸ್ಸಿನ ಶಾಂತಿ ಮತ್ತು ಆದಾಯದ ವಿಶ್ವಾಸಾರ್ಹ ಮೂಲವನ್ನು ನೀಡುವ ಗುರಿಯನ್ನು ಹೊಂದಿದೆ.
SBI We-care FDಯ ಠೇವಣಿ ಅವಧಿ ಎಷ್ಟು?
SBI We-care FD ಯೋಜನೆಯು 5 ವರ್ಷಗಳು ಮತ್ತು 10 ವರ್ಷಗಳ ಎರಡು ಮೆಚ್ಯೂರಿಟಿ ಆಯ್ಕೆಗಳನ್ನು ನೀಡುತ್ತದೆ. ಇದು ಹಿರಿಯ ನಾಗರಿಕರಿಗೆ ತಮ್ಮ ಹಣಕಾಸಿನ ಗುರಿಗಳು ಮತ್ತು ಆರ್ಥಿಕ ಅಗತ್ಯತೆಗಳಿಗೆ ಅನುಗುಣವಾಗಿ ಠೇವಣಿ ಅವಧಿಯನ್ನು ಆಯ್ಕೆ ಮಾಡಲು ಅನುಕೂಲ ಕಲ್ಪಿಸುತ್ತದೆ. ಈ ಮೂಲಕ ಭವಿಷ್ಯಕ್ಕಾಗಿ ಅವರು ತಮ್ಮ ಹಣಕಾಸುಗಳನ್ನು ಪರಿಣಾಮಕಾರಿಯಾಗಿ ಯೋಜಿಸಬಹುದಾಗಿದೆ.
SBI We-care ಅಡಿಯಲ್ಲಿ ಎರಡು ಮಧ್ಯಂತರ ಬಡ್ಡಿ ಪಾವತಿ ಆಯ್ಕೆ ಅವಕಾಶ
ಹಿರಿಯ ನಾಗರಿಕ ಠೇವಣಿದಾರರು SBI We-care ಅಡಿಯಲ್ಲಿ ಎರಡು ಮಧ್ಯಂತರ ಬಡ್ಡಿ ಪಾವತಿಗಳನ್ನು ಆಯ್ಕೆ ಮಾಡಬಹುದಾಗಿದೆ. ಮಾಸಿಕ ಮತ್ತು ತ್ರೈಮಾಸಿಕವಾಗಿ ಬಡ್ದಿ ಪಾವತಿ ಆಯ್ಕೆಗಳಿದ್ದು, ಮುಕ್ತಾಯದ ನಂತರ, ಎಫ್‌ಡಿ ಖಾತೆಯು ಕಾರ್ಪಸ್ ಅನ್ನು ಎಸ್‌ಬಿಐ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.
SBI We-care FD ಖಾತೆ ತೆರೆಯುವುದು ಹೇಗೆ?
ವಿಶೇಷ ಎಫ್.ಡಿ ಖಾತೆಯು SBIನ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರೊಂದಿಗೆ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು SBIನ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ಲಭ್ಯವಿದೆ.
ಬಡ್ದಿ ಲೆಕ್ಕಾಚಾರ ಹೀಗಿದೆ: ಎಸ್‌ಬಿಐ ವೀ-ಕೇರ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್‌ನಲ್ಲಿ 5 ಲಕ್ಷ ರೂ., 7 ಲಕ್ಷ ರೂಪಾಯಿ ಮತ್ತು 10 ಲಕ್ಷ ರೂಪಾಯಿಗಳ ಹೂಡಿಕೆಗಳಿಗೆ ಮೆಚ್ಯೂರಿಟಿ ಮೊತ್ತಗಳು.
ಪ್ರಸ್ತುತ ಬಡ್ಡಿದರದಲ್ಲಿ, ಎಸ್‌ಬಿಐ ವೀ-ಕೇರ್ ಯೋಜನೆಯಲ್ಲಿ 5 ಲಕ್ಷ ರೂಪಾಯಿಗಳ ಒಟ್ಟು ಮೊತ್ತವು ಅಂದಾಜು 2,24,974 ರೂಪಾಯಿಗಳ ಬಡ್ಡಿಯನ್ನು ನೀಡುತ್ತದೆ. ಅಂದರೆ 5 ವರ್ಷಗಳ ಕನಿಷ್ಠ ಲಾಕ್-ಇನ್ ಅವಧಿಯ ಕೊನೆಯಲ್ಲಿ ಬಡ್ದಿ ಸೇರಿ ಒಟ್ಟು ಮೊತ್ತ ರೂ 7,24,974 ಆಗಿರುತ್ತದೆ .
ಅದೇ ರೀತಿ, 7 ಲಕ್ಷ ರೂಪಾಯಿಗಳ ಒಟ್ಟು ಮೊತ್ತದ ಹೂಡಿಕೆಯು 5 ವರ್ಷಗಳಲ್ಲಿ 10,14,964 ರೂ ಆಗಿ ಬೆಳೆಯುತ್ತದೆ (ರೂ. 7 ಲಕ್ಷದ ಅಸಲು ಮತ್ತು ರೂ. 3,14,964 ಬಡ್ಡಿಯೊಂದಿಗೆ).
ಅದೇ ರೀತಿ, ಎಸ್‌ಬಿಐ ವೀ-ಕೇರ್ ಯೋಜನೆಯಲ್ಲಿ ರೂ 10 ಲಕ್ಷ ಹೂಡಿಕೆ ಮಾಡಿದ್ರೆ 5 ವರ್ಷದ ಆಯ್ಕೆಯಲ್ಲಿ 4,49,948 ಬಡ್ಡಿಯನ್ನು ನೀಡುತ್ತದೆ, ಕೊನೆಯಲ್ಲಿ ಬಡ್ದಿ ಸೇರಿ ಒಟ್ಟು ಮೊತ್ತ 14,49,948 ಅಂದಾಜು ಆಗಿರುತ್ತದೆ. ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ 10 ವರ್ಷಗಳ ಗರಿಷ್ಠ ಮೆಚ್ಯೂರಿಟಿ ಅವಧಿಯಲ್ಲಿ (5,51,175 ರೂಪಾಯಿ ಬಡ್ಡಿ ಸೇರಿದಂತೆ) ಅಂದಾಜು 10,51,175 ರೂಪಾಯಿ ಲಭಿಸುತ್ತದೆ.
ಅದೇ ರೀತಿ, 10 ವರ್ಷಗಳ ಮೆಚ್ಯೂರಿಟಿ ಆಯ್ಕೆ ಮಾಡಿಕೊಂಡರೆ (7,71,644 ರೂಪಾಯಿ ಬಡ್ಡಿ ಸೇರಿದಂತೆ) 7 ಲಕ್ಷದ ಹೂಡಿಕೆಯು ಅಂದಾಜು 14,71,644 ರೂಪಾಯಿ ಮೊತ್ತವಾಗುತ್ತದೆ. ಅದೇ ರೀತಿ, ಯೋಜನೆಯಲ್ಲಿ ರೂ 10 ಲಕ್ಷದ ಒಟ್ಟು ಮೊತ್ತದ ಹೂಡಿಕೆಯು 10 ವರ್ಷಗಳಲ್ಲಿ ಅಂದಾಜು ರೂ 21,02,349 ಆಗಿ ಬೆಳೆಯುತ್ತದೆ (11,02,349 ರೂಪಾಯಿ ಬಡ್ಡಿ ಸೇರಿ).
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರಸ್ತುತ ಬಡ್ಡಿ ದರ ಮತ್ತು ಸಂಯುಕ್ತ ಆವರ್ತನದ ಆಧಾರದ ಮೇಲೆ ಇವುಗಳು ಅಂದಾಜು ಲೆಕ್ಕಾಚಾರದ ಆದಾಯಗಳಾಗಿವೆ. ಅಲ್ಲದೇ, ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ TDS ಅನ್ನು ಕಡಿತಗೊಳಿಸಿದ ನಂತರ ಮೆಚ್ಯೂರಿಟಿ ಮೊತ್ತವನ್ನು ಖಾತೆದಾರರಿಗೆ ವರ್ಗಾಯಿಸಲಾಗುತ್ತದೆ.


Click it and Unblock the Notifications