For Quick Alerts
ALLOW NOTIFICATIONS  
For Daily Alerts

ಕೋಕಾ ಕೋಲಾ, ಥಮ್ಸ್ ಅಪ್ ಮಾರಾಟ ನಿಷೇಧಕ್ಕೆ PIL: ಅರ್ಜಿದಾರರಿಗೆ 5 ಲಕ್ಷ ದಂಡ

|

ಕೋಕಾ ಕೋಲಾ ಹಾಗೂ ಥಮ್ಸ್ ಅಪ್ ಮಾರಾಟದ ಮೇಲೆ ನಿಷೇಧ ಹೇರಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ 5 ಲಕ್ಷ ರುಪಾಯಿ ಜುಲ್ಮಾನೆ ವಿಧಿಸಿದೆ. ಈ ಸಾಫ್ಟ್ ಡ್ರಿಂಕ್ ಗಳು ಆರೋಗ್ಯಕ್ಕೆ ಹಾನಿಕರ ಅದರ ಆಧಾರದಲ್ಲಿ ಇವೆರಡನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

 

"ಈ ಎರಡು ನಿರ್ದಿಷ್ಟ ಬ್ರ್ಯಾಂಡ್ ಅನ್ನೇ ಗುರಿ ಮಾಡಿಕೊಂಡು ಅರ್ಜಿ ಹಾಕಿದ್ದು ಹಾಗೂ ಅವುಗಳ ಬಗ್ಗೆ ಇಂಥ ನಿರ್ಧಾರಕ್ಕೆ ಬರುವುದಕ್ಕೆ ಏನು ಆಧಾರ? ಎಂಬುದನ್ನು ಸ್ಪಷ್ಟಪಡಿಸುವುದಕ್ಕೆ ಅರ್ಜಿದಾರರ ಪರ ವಕೀಲರು ವಿಫಲರಾಗಿದ್ದಾರೆ" ಎಂದಿರುವ ಸರ್ವೋಚ್ಚ ನ್ಯಾಯಾಲಯವು, ಐದು ಲಕ್ಷ ರುಪಾಯಿ ದಂಡ ಹಾಕಿದೆ.

ಒಂದು ತಿಂಗಳೊಳಗೆ ಐದು ಲಕ್ಷ ಠೇವಣಿ

ಒಂದು ತಿಂಗಳೊಳಗೆ ಐದು ಲಕ್ಷ ಠೇವಣಿ

ಈ ಮೊತ್ತವನ್ನು ಒಂದು ತಿಂಗಳೊಳಗೆ ಸುಪ್ರೀಂ ಕೋರ್ಟ್ ರಿಜಸ್ಟ್ರಿಯಲ್ಲಿ ಠೇವಣಿ ಮಾಡಬೇಕು ಹಾಗೂ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್- ಆನ್ ರೆಕಾರ್ಡ್ ಅಸೋಸಿಯೇಷನ್ (SCAORA) ವಿತರಿಸಬೇಕು ಎಂದು ತಿಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಉಮೇದ್ ಸಿಂಗ್ ಪಿ. ಚವಡಾ ಹಾಕಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದಲ್ಲಿ ನ್ಯಾ. ಹೇಮಂತ್ ಗುಪ್ತಾ ಹಾಗೂ ಅಜಯ್ ರಸ್ತೋಗಿ ಒಳಗೊಂಡ ಪೀಠವು ವಿಚಾರಣೆ ನಡೆಸಿತ್ತು.

ಜನರು ಕುಡಿಯದಿರಲು ಅಧಿಸೂಚನೆ ಹೊರಡಿಸಬೇಕು

ಜನರು ಕುಡಿಯದಿರಲು ಅಧಿಸೂಚನೆ ಹೊರಡಿಸಬೇಕು

ಚವಡಾ ಅವರು ಕೋಕಾ ಕೋಲಾ- ಥಮ್ಸ್ ಅಪ್ ಮಾರಾಟದ ನಿಷೇಧಕ್ಕಷ್ಟೇ ಕೇಳಿರಲಿಲ್ಲ. ಜತೆಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಬೇಕು. ಜನರು ಅವುಗಳನ್ನು ಕುಡಿಯಬಾರದು ಹಾಗೂ ಕುಡಿಯಬಾರದು ಎಂದು ಸೂಚಿಸಬೇಕು. ಜನರ ಆರೋಗ್ಯಕ್ಕೆ ಹಾನಿ ಮಾಡುವ ಕಾರಣಕ್ಕೆ ಈ ಅಧಿಸೂಚನೆ ಹೊರಡಿಸಬೇಕು ಎಂದು ಕೇಳಿದ್ದರು.

ಸಂಪೂರ್ಣ ವಿಶ್ಲೇಷಣಾ ವರದಿ ಸಲ್ಲಿಸಬೇಕು
 

ಸಂಪೂರ್ಣ ವಿಶ್ಲೇಷಣಾ ವರದಿ ಸಲ್ಲಿಸಬೇಕು

ಕೋಕಾ ಕೋಲಾ ಹಾಗೂ ಥಮ್ಸ್ ಅಪ್ ನಂಥ ದ್ರವಗಳ ಬಳಕೆ ಹಾಗೂ ಮಾರಾಟಕ್ಕೆ ಲೈಸೆನ್ಸ್ ನೀಡುವ ಮುನ್ನ ವಿಜ್ಞಾನಿಗಳಿಂದ ವೈಜ್ಞಾನಿಕ ಅನುಮತಿ ಹಾಗೂ ಸಂಪೂರ್ಣ ವಿಶ್ಲೇಷಣಾ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಬಳಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

English summary

SC Fines 5 Lakhs To PIL Petitioner Who Seeks Ban On Coca Cola Sale

Supreme Court fines man 5 lakhs, who files PIL to ban Coca- Cola and Thumbs Up.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X