ಭಾರತದ ದೈತ್ಯ ಉದ್ಯಮ ಸಂಸ್ಥೆ ರಿಲಯನ್ಸ್ ಹಾಗೂ ಫ್ಯೂಚರ್ ರಿಟೇಲ್ ನಡುವಿನ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಮೂರು ಕಂಪನಿಗಳ ನಡುವೆ ನಡೆಯುತ್ತಿದ್ದ ಜಿದ್ದಾಜಿದ್ದಿ ಅಂತ್ಯಗೊಂಡಿದೆ.
ರಿಲಯನ್ಸ್ ರೀಟೇಲ್ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವೆ 24,713 ಕೋಟಿ ಮೊತ್ತದ ಒಪ್ಪಂದದ ವಿರುದ್ಧವಾಗಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ರಿಲಯನ್ಸ್ ಹಾಗೂ ಫ್ಯೂಚರ್ ನಡುವಿನ ಒಪ್ಪಂದ ಕುರಿತಾಗಿ ದೆಹಲಿ ಹೈಕೋರ್ಟ್ ನೀಡಿದ್ದ ತುರ್ತು ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ (ಆಗಸ್ಟ್ 06) ಎತ್ತಿ ಹಿಡಿದಿದೆ. ಈ ಮೂಲಕ ಅಮೆಜಾನ್‌ಗೆ ಮಹತ್ವದ ಗೆಲುವು ಲಭಿಸಿದೆ.
ಫ್ಯೂಚರ್ ರಿಟೇಲ್ ಸ್ವತ್ತುಗಳು ರಿಲಯನ್ಸ್‌ನೊಂದಿಗೆ ವಿಲೀನಗೊಳ್ಳಲು ವಿಫಲವಾದಾಗ ಮಧ್ಯಸ್ಥಿಕೆ ವಹಿಸುವಂತೆ ಅಮೆಜಾನ್ ಈ ಹಿಂದೆ ಸಿಂಗಾಪುರ ನ್ಯಾಯಾಲಯವನ್ನು ಕೇಳಿದೆ. ಆದಾಗ್ಯೂ, ಪ್ಯೂಚರ್ ರೀಟೇಲ್ ವ್ಯಾಪಾರದೊಂದಿಗೆ ಪಾಲುದಾರಿಕೆ ಮಾಡುವುದು ಮತ್ತು ಸ್ವತ್ತುಗಳನ್ನು ಮತ್ತೊಂದು ಕಂಪನಿಯೊಂದಿಗೆ ವಿಲೀನಗೊಳಿಸುವುದು ಸರಿಯಲ್ಲ ಎಂದು ಅಮೆಜಾನ್ ಹೇಳುತ್ತದೆ. ಆದಾಗ್ಯೂ, ಸಿಂಗಾಪುರದ ಮಧ್ಯಸ್ಥಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಹೇಳುತ್ತಾ ಅಮೆಜಾನ್ ಪರವಾಗಿ ತೀರ್ಪು ನೀಡಿತು.
ಸಿಂಗಾಪುರದ ಮಧ್ಯಸ್ಥರ ತುರ್ತು ಆದೇಶ ಸೆಕ್ಷನ್ 17(1) ಹಾಗೂ ಸೆಕ್ಷನ್ 17 (2) ಅನ್ವಯ ಆದೇಶವನ್ನು ಭಾರತೀಯ ಕಾನೂನಿನ ಅನ್ವಯ ಜಾರಿಗೊಳಿಸಲು ಸಾಧ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಫ್ಯೂಚರ್ ರೀಟೇಲ್ ಷೇರುಗಳ ಭಾರೀ ಕುಸಿತ
ಸುಪ್ರೀಂಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಫ್ಯೂಚರ್ ರೀಟೆಲ್ ಷೇರುಗಳು ಎನ್‌ಎಸ್‌ಇನಲ್ಲಿ ಶೇಕಡಾ 9.94ರಷ್ಟು ಅಥವಾ 5.80 ರೂಪಾಯಿ ಇಳಿಕೆಗೊಂಡು 52.55 ರೂಪಾಯಿಗೆ ತಲುಪಿದೆ.
ರಿಲಯನ್ಸ್ ಹಾಗೂ ಫ್ಯೂಚರ್ ರಿಟೇಲ್ ಡೀಲ್‌ಗೆ ಸಿಸಿಐ ಅನುಮೋದನೆ ನೀಡಿತ್ತು
ರಿಲಯನ್ಸ್ ಹಾಗೂ ಫ್ಯೂಚರ್ ರಿಟೇಲ್ ನಡುವೆ 24,713 ಕೋಟಿ ರೂಪಾಯಿ ಮೊತ್ತದ ಒಪ್ಪಂದವಾಗಿತ್ತು. ಜೊತೆಗೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮತ್ತು ಫ್ಯೂಚರ್ಸ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅನುಮೋದನೆ ಕೂಡ ನೀಡಿತ್ತು.
ಭಾರತದ ರೀಟೇಲ್ ವಲಯದ ಬಹುದೊಡ್ಡ ಒಪ್ಪಂದ
ಫ್ಯೂಚರ್ ರಿಟೇಲ್ ಹಾಗೂ ರಿಲಯನ್ಸ್ ರೀಟೇಲ್ ನಡುವಿನ 24,713 ಕೋಟಿ ರೂಪಾಯಿ ಮೊತ್ತದ ಒಪ್ಪಂದವು ಭಾರತದ ರೀಟೇಲ್ ವಲಯದಲ್ಲಿ ಅತಿದೊಡ್ಡ ಒಪ್ಪಂದವಾಗಿದೆ. ಈ ಮೂಲಕ ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಪ್ರಮುಖ ಚಿಲ್ಲರೆ ವ್ಯಾಪಾರ ಮಳಿಗೆಗಳನ್ನು ಆರ್‌ಆರ್‌ವಿಎಲ್ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಈ ಒಪ್ಪಂದದ ಭಾಗವಾಗಿ ಫ್ಯೂಚರ್ ಸಮೂಹದಿಂದ ನಡೆಸುತ್ತಿರುವ ಕೆಲವು ಕಂಪನಿಗಳ ವ್ಯವಹಾರವನ್ನು ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ (FEL)ನಲ್ಲಿ ವಿಲೀನ ಮಾಡಿತ್ತು. ಈ ಒಪ್ಪಂದು ಸೆಬಿ, ಸಿಸಿಐ, ಎನ್‌ಸಿಎಲ್‌ಟಿ, ಷೇರುದಾರರು ಮತ್ತು ಇತರ ಅಗತ್ಯ ಅನುಮತಿಗಳ ನಿಬಂಧನೆಗಳಿಗೆ ಒಳಪಟ್ಟಿತ್ತು.
ಅಮೆಜಾನ್ ತಕರಾರು ಏನು?
ಫ್ಯೂಚರ್ ರೀಟೇಲ್‌ನ ಶೇಕಡಾ 49ರಷ್ಟು ಪಾಲನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಿಗೆ ಮತ್ತು ಅನುಮತಿ ಇಲ್ಲದೆಯೇ ಫ್ಯೂಚರ್ ಕೂಪನ್ಸ್ ಲಿಮಿಟೆಡ್ ಜೊತೆಗೆ ರಿಲಯನ್ಸ್ ರೀಟೇಲ್ ಒಪ್ಪಂದ ಮಾಡಿಕೊಂಡಿದ್ದನ್ನು ಅಮೆಜಾನ್ ಪ್ರಶ್ನಿಸಿತ್ತು. ಈ ಕುರಿತಾಗಿ ನ್ಯಾಯಾಲಯದ ಮೆಟ್ಟಿಲೇರಿ, draft scheme of arrangement ಮಾದರಿ ಪ್ರಸ್ತಾವಿಕ ವ್ಯವಹಾರವನ್ನು ಪರಿಗಣಿಸುವಂತೆ ನ್ಯಾಯಾಲಯದಲ್ಲಿ ಅಮೆಜಾನ್ ವಾದಿಸಿತ್ತು. ಜೊತೆಗೆ ಈ ಹಿಂದಿನ ಡೀಲ್‌ನಂತೆ ಫ್ಯೂಚರ್ ಕೂಪನ್ಸ್ ಮೇಲೆ ಅಮೆಜಾನ್ ಪಾಲು ಶೇಕಡಾ 49ರಷ್ಟಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನ್ ಹಾಗೂ ಕುಟಂಬದ ಬಳಿಕ ಶೇಕಡಾ 49ರಷ್ಟು ಪಾಲಿದೆ.


Click it and Unblock the Notifications