ನೀವು ಎಂದಾದರೂ ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಯ ಪ್ರವಾಸಕ್ಕೆಂದು ಕರೆದೊಯ್ಯುವುದನ್ನು ನೋಡಿದ್ದೀರಾ..? ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇ ಬೇಕು...
ನಾವು ಸಾಮಾನ್ಯವಾಗಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆಂದು ಯಾವುದಾದರೂ ಪ್ರಸಿದ್ದ ಸ್ಥಳಗಳಿಗೆ ಕರೆದುಕೊಂಡು ಹೋಗಿರುವುದನ್ನು ನೋಡಿರುತ್ತಾವೆ. ಆದ್ರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಪ್ರವಾಸಕ್ಕೆ ಕರೆದಕೊಂಡು ಹೋಗಿರುವ ಘಟನೆ ನಡೆದಿದೆ ಹಾಗಿದ್ರೆ ಶಾಲೆ ಬಿಟ್ಟು ಮಕ್ಕಳು ಪೊಲೀಸ್ ಠಾಣೆಗೆ ಬಂದಿದ್ಯಾಕೆ..? ಇಲ್ಲಿದೆ ಹೆಚ್ಚಿನ ಮಾಹಿತಿ

ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಂಡುವಂತಹ ಹಾಗೂ ಇತರರಿಗೂ ಮಾದರಿಯಾಗುವಂತಹ ಒಳ್ಳೆಯ ಕೆಲಸವನ್ನು ಶಿಕ್ಷಕಿ ಕಾಂಚನ್ ಮಾಡಿದ್ದಾರೆ.
ಹೌದು,ಇವರು ವಿದ್ಯಾರ್ಥಿಗಳಿಗೆ ತನ್ನ ತಂದೆಯ ಸಾಧನೆ ಹಾಗೂ ಅದರ ಹಿಂದೆ ಇದ್ದ ಶ್ರಮದ ಬಗ್ಗೆ ಪರಿಚಯ ಮಾಡಿಕೊಂಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಅವರು ತಮ್ಮ ತಂದೆ ಸಾದನೆಯ ಮೂಲಕ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಕಾಂಚನ್ ತಂದೆ
ಶ್ರೀನಿವಾಸ್ ಮೂರ್ತಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಅವರು ಸೇವೆ ಸಲ್ಲಿಸಿದ್ದರು. ಇವರು ಸೇವೆಯಿಂದ ನಿವೃತ್ತರಾದ ಬಳಿಕ ಅವರು ಹಿರಿಯೂರು ತಾಲೂಕಿನಲ್ಲಿ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಶುರುಮಾಡಿದ್ದರು. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕಾಂಚನ್ ವಿದ್ಯಾರ್ಥಿಗಳನ್ನು ತನ್ನ ತಂದೆ ಕೆಲಸ ಮಾಡಿದ ಪೊಲೀಸ್ ಠಾಣೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮಾಹಿತಿಯನ್ನು ತಿಳಿಸಿಕೊಂಡಿದ್ದರು.
ಶ್ರೀನಿವಾಸ್ ಮೂರ್ತಿ ಸೇವೆಯ ನಿಷ್ಠೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು
ಶ್ರೀನಿವಾಸ್ ಮೂರ್ತಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾಗ ಹೇಗೆ ಸೇವೆ ಸಲ್ಲಿಸಿದ್ದರು ಇದರ ಜೊತೆಗೆ ಬೈಲುಕುಪ್ಪೆ ಠಾಣೆಯಲ್ಲಿ ಸೇವೆ ಸಲ್ಲಿಸಿದಂತಹ ಅಧಿಕಾರಿಗಳ ನಾಮಫಲಕ ಪಟ್ಟಿಯಲ್ಲಿ ಅವರ ತಂದೆಯವರ ಹೆಸರನ್ನು ತೋರಿಸುವ ಮೂಲಕ ಕರ್ತವ್ಯದ ಮೇಲೆ ತಮ್ಮ ತಂದೆಗಿದ್ದ ಗೌರವವನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಪೊಲೀಸ್ ಸಿಬ್ಬಂದಿಯಿಂದ ಸ್ವಾಗತ
ಪೊಲೀಸ್ ಠಾಣೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಸಿಬ್ಬಂದಿಗಳಾದ ಮಂಜು ಒಡೆನೂರ್, ಮಹೇಶ್, ಅಶ್ವಿತಾ ಸ್ವಾಗತ ಮಾಡಿದ್ದರು. ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ದೈನಂದಿನ ಕರ್ತವ್ಯ, ಜನಸಾಮಾನ್ಯರ ಹಿತರಕ್ಷಣೆ, ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸುವ ಮೂಲಕ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ.
ಇಂದಿನ ವಿದ್ಯಾರ್ಥಿಗಳು ಪೊಲೀಸರ ಜೊತೆಗೆ ಯಾವುದೇ ಸಂಕೋಚ ಇಲ್ಲದೇ ಧೈರ್ಯದಿಂದ ಮಾತನಾಡಬೇಕು. ನಿಮ್ಮಗೆ ಯಾವುದೇ ಅನುಮಾನಗಳು ಇದ್ದರೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಿ ಎಂದು ಹೇಳಿದ್ದರು.ಇಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವುದು ವಿಶೇಷವಾಗಿತ್ತು.
ತಾವು ಓದುತ್ತಿರುವ ಶಾಲೆಯನ್ನು ಆರಂಭಿಸಿದ ವ್ಯಕ್ತಿಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವಂತೆ ಮಾಡಿದ ಶಿಕ್ಷಕಿ ಕಾಂಚನ್ ಅವರು ಇತರರಿಗೂ ಮಾದರಿಯಾಗುವಂತಹ ಕೆಲಸವನ್ನು ಮಾಡಿ ಉತ್ತಮವಾದ ಸಂದೇಶವನ್ನು ತಿಳಿಸಿಕೊಂಡಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications