ಬೆಂಗಳೂರು, ಮಾರ್ಚ್ 12: ದಿನ ಬೆಳಗಾದ್ರೆ ಆಫೀಸ್‌ಗೆ ಹೊರಟು, ದಿನ ಪೂರ್ತಿ ಕಛೇರಿಯಲ್ಲೇ ದುಡಿದು ಕತ್ತಲಾದ್ಮಲೆ ಮನೆ ಸೇರಿಕೊಳ್ಳೋ ಪ್ರತಿಯೊಬ್ಬ ಉದ್ಯೋಗಿಗೂ ತನ್ನ ಕೆಲಸ ಮತ್ತು ಜೀವನದ ಮೇಲೆ ಜಿಗುಪ್ಪೆ ಬಂದು ಬದುಕೇ ರೋಸಿಹೋಗಿರುತ್ತದೆ. ಇಷ್ಟೆಲ್ಲಾ ದುಡಿದ ಮೇಲೂ ಕೈ ಸೇರುವ ಸಂಬಳದ ಬಗ್ಗೆ ಸಂತೃಪ್ತಿಯೂ ಇರೋದಿಲ್ಲ. ಹೀಗಾಗಿ ಸುಲಭ ಕೆಲಸ, ಕೈತುಂಬಾ ಸಂಬಳ ಸಿಗುವ ಕೆಲಸ ಸಿಕ್ರೆ ಸಾಕಪ್ಪ ಅನ್ನೋದು ಎಲ್ಲಾ ಉದ್ಯೋಗಿಗಳ ಕನಸು ಅಂಥದ್ದೇ ಒಂದು ಕೆಲಸ ಇಲ್ಲಿದೆ ನೋಡಿ. ಈ ಕೆಲಸಕ್ಕೆ ಕೊಡೋ ಸಂಬಳ ಕೇಳದ್ರೆ ಯಾವುದಪ್ಪಾ ಈ ಕೆಲಸ ಅಂತಾ ನೀವು ಶಾಕ್ ಆಗ್ತಿರಾ !
ಹಗಲು ರಾತ್ರಿ ದುಡಿದ್ರೂ ವರ್ಷಕ್ಕೆ 10ರಿಂದ 15 ಲಕ್ಷ ದುಡಿಯೋದಕ್ಕೆ ಹರಸಹಾಸ ಪಡಬೇಕು. ಸಮಯದ ಹಂಗು ತೊರೆದು ಕೆಲಸ ಮಾಡಬೇಕು. ವರ್ಷಕ್ಕೊಮ್ಮೆ ಕೊಡುವ ಹೈಕ್ ಖುಷಿ ಕೊಡದಿದ್ದರೆ ಕೆಲಸ ತೊರೆದು ಮತ್ತೊಂದು ಕಂಪೆನಿ ಸೇರಬೇಕು ಇಷ್ಟೆಲ್ಲಾ ಮಾಡಿದ್ರೂ ಕನಸಿನ ಕೆಲಸ, ಕೈತುಂಬಾ ಕೆಲಸ ಸಿಗೋದು ಕಷ್ಟ ಸಾಧ್ಯ. ಆದ್ರೆ ಈ ದ್ವೀಪ ರಾಷ್ಟ್ರದಲ್ಲಿ ಸಿಗುವ ಸಂಬಳ, ಸಿಬ್ಬಂದಿಗೆ ಸಿಗುವ ಸವಲತ್ತು ನೋಡಿದ್ರೆ ಪರಮಾಶ್ಚರ್ಯವಾಗುತ್ತೆ ಇಂಥ ಕೆಲಸ ಇರೋದು ಸ್ಕಾಟ್‌ಲ್ಯಾಂಡ್ ನಲ್ಲಿ.

ವರ್ಷಕ್ಕೆ 1.5 ಕೋಟಿ ಸಂಬಳ ವಾರಕ್ಕೆ 40 ಗಂಟೆ ಕೆಲಸ:
ಪ್ರತಿನಿತ್ಯ 9-10 ತಾಸು ಕೆಲಸ ಮಾಡಬೇಕೆಂಬ ನಿಯಮ ಇಲ್ಲಿ ಇಲ್ವೇ ಇಲ್ಲ. ವಾರಕ್ಕೆ ಕೇವಲ 42 ಗಂಟೆ ಕೆಲಸ ಮಾಡಿದ್ರೆ ಸಾಕು, ಕೈತುಂಬಾ ಝಣ ಝಣ ಕಾಂಚಾಣ ಎಣಿಸಿಬಹುದು. ಅಷ್ಟೇ ಅಲ್ಲ ಸುಲಭ ಕೆಲಸ, ಕೈತುಂಬ ಸಂಬಳದ ಜೊತೆಗೆ, ಸ್ಟೇ ಫಂಡ್ ಮತ್ತಿತರ ಸೌಲಭ್ಯಗಳನ್ನೂ ಈ ನೌಕರರಿಗೆ ನೀಡಲಾಗುತ್ತೆ. ಅಷ್ಟಕ್ಕೂ ಈ ಉದ್ಯೋಗಿಗಳ ಸಂಬಳ ಎಷ್ಟು ಗೊತ್ತಾ ?! ವರ್ಷಕ್ಕೆ ಬರೋಬ್ಬರಿ 1.5 ಕೋಟಿ.
ಸ್ಕಾಟ್‌ಲ್ಯಾಂಡ್ ಅತ್ಯಾಕರ್ಷಕ ಪ್ರವಾಸಿ ತಾಣ .ಬೇಸಿಗೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ಕೊಡ್ತಾರೆ. ಉಯಿಸ್ಟ್ ಮತ್ತು ಪೆನ್ನುಕುಲಾ ಎಂಬ ಎರಡು ದ್ವೀಪಗಳು ಇಲ್ಲಿವೆ. ಇಲ್ಲಿ ಕೆಲಸ ವಿರ್ಚಹಿಸುವ ವೈದ್ಯರ ಸಂಬಳ ಇಡೀ ವಿಶ್ವವನ್ನ ಅಚ್ಚರಿಗೆ ದೂಡಿದೆ. ಈ ಬಾರಿ ನಡೆದ ವೈದ್ಯರ ನೇಮಕಾತಿ ಸಂದರ್ಭದಲ್ಲಿ ಒಬ್ಬೊಬ್ಬ ವೈದ್ಯರಿಗೆ ಬರೋಬ್ಬರಿ ವಾರ್ಷಿಕ 15 ಕೋಟಿ ಸಂಭಾವನೆಗೆ ನೇಮಕ ಮಾಡಿಕೊಳ್ಳಲಾಗಿದೆ. ವಿಶ್ವದ ಇನ್ಯಾವುದೇ ಭಾಗದಲ್ಲೂ ಇಂಗ್ಲೆಂಡ್ ಕೂಡ ಸೇರಿದ ಹಾಗೆ, ವೈದ್ಯರಿಗೆ ಈ ವೇತನ ಸಿಗೋದಿಲ್ಲ. ವಾರಕ್ಕೆ 42 ಗಂಟೆ ಕೆಲಸ. ವರ್ಷಕ್ಕೆ 1.5 ಕೋಟಿ ಸಂಬಳ ಅಂದ್ರೆ ಅಬ್ಬಬ್ಬಾ !
ಇಲ್ಲಿ ಜನಸಂಖ್ಯೆ ಬಹಳ ಕಡಿಮೆ ಇರೋದ್ರಿಂದ, ಬಹುತೇಕ ವಿದೇಶಿಗರೇ ಇಲ್ಲಿ ಕೆಲಸ ನಿರ್ವಹಿಸೋದು. ಇಲ್ಲಿ ಕೆಲಕ್ಕೆ ಅರ್ಜಿ ಹಾಕಬಹುದು. ಈ ದ್ವೀಪಗಳನ್ನ ಕೆಲಸ ಮಾಡಲು ಪ್ರಮುಖವಾಗಿ ಎರಡು ವಿಷಯಗಳ ತಿಳಿದಿರಬೇಕು. ಒಂದು ಗ್ರಾಮೀಣ ಭಾಗದ ಔಷಧಗಳ ಬಗ್ಗೆ ಅರಿವಿರಬೇಕು. ಮತ್ತೊಂದು ಕೋಸ್ಟಲ್ ರೀಜನ್ ಅಂದ್ರೆ ಕಡಲ ತೀರಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಇಷ್ಟು ತಿಳಿದಿದ್ದರೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಕೆಲಸಕ್ಕೆ ಪ್ರಯತ್ನ ಪಡಬಹುದು.

ಏನೇ ಆಗಲಿ, ಭೂಮಿ ಮೇಲೆ ಇಂಥದ್ದೊಂದು ಕೆಲಸ ಇದ್ಯಲ್ಲಾ ಎಂದು ತಿಳಿದೇ ಹಲವರು ಪುಳಕಿತರಾಗಿದ್ದಾರೆ. ಇದು ಪ್ರತಿಯೊಬ್ಬರ ಶ್ರೀಂ ಜಾಬ್ ಎಂದೇ ಹೇಳಬಹುದು. ಎಲ್ಲರಿಗೂ ಇಂಥ ಕೆಲಸ ದಕ್ಕೋದಿಲ್ಲ. ಇಂಥ ಕೆಲಸ ಸಿಕ್ಕವರೂ ಪರಮ ಪಣ್ಯವಂತರೇ ಆಗಿರಬೇಕಷ್ಟೆ.


Click it and Unblock the Notifications