ಮರ್ಜರ್ ಅಂಡ್ ಅಕ್ವಿಸಿಷನ್ ಸರಳಗೊಳಿಸಲು ಸೆಬಿ ಅಸ್ತು !

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯ (ಸೆಬಿ ) ನಿನ್ನೆ ಅಂದರೆ 28/09/2021 , ಮಂಗಳವಾರ ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯಲ್ಲಿ ವಿಲೀನವಾಗುವುದು (ಮರ್ಜರ್ ) , ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯ ಮೇಲೆ ಹಿಡಿತವನ್ನ ಹೊಂದುವ ಅಥವಾ ಕಂಟ್ರೋಲಿಂಗ್ ರೈಟ್ಸ್ ಪಡೆದುಕೊಳ್ಳುವ ಪ್ರಕ್ರಿಯೆಯನ್ನ ಸರಾಗಗೊಳಿಸಲು ಹಸಿರು ನಿಶಾನೆ ತೋರಿದೆ. ಲಿಸ್ಟೆಡ್ ಅಥವಾ ನೋಂದಾಯಿತ ಸಂಸ್ಥೆಗಳಿಗೆ ಇದರಿಂದ ಬಹಳ ಅನುಕೂಲವಾಗುತ್ತದೆ. ಇಂಡಿಯನ್ ಸ್ಟಾರ್ಟ್ ಅಪ್ ಅಥವಾ ನವೋದ್ದಿಮೆಗಳು ಇಲ್ಲೇ ನೋಂದಾಯಿತವಾಗಲು ಅನುಕೊಲವಾಗುವಂತೆ ನವೋದ್ದಿಮೆಗಳ ಪ್ರಮೋಟರ್ಸ್ ಗೆ ಸುಪೀರಿಯರ್ ವೋಟಿಂಗ್ ರೈಟ್ ಮೇಲಿದ್ದ ನಿಯಮಾವಳಿಗಳನ್ನ ಸಡಿಲಗೊಳಿಸಲಾಗಿದೆ.

ಇದರ ಜೊತೆಗೆ ಗೋಲ್ಡ್ ಮಾತು ಸೋಶಿಯಲ್ ಸ್ಟಾಕ್ ಎಕ್ಸ್ಚೇಂಜ್ ಗಳನ್ನ ಭಾರತದಲ್ಲಿ ನಿರ್ಮಿಸಲು ಬೇಕಾಗಿರುವ ರೂಪುರೇಶೆಯನ್ನ ಕೂಡ ಸೆಬಿ ಪರಿಷ್ಕರಿಸಿ ಒಪ್ಪಿಗೆಯನ್ನ ನೀಡಿದೆ. ಇದರಿಂದ ರಿಟೇಲ್ ಇನ್ವೆಸ್ಟರ್ಸ್ , ಬ್ಯಾಂಕ್ಸ್ , ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ ಮತ್ತು ಆಭರಣ ವ್ಯಾಪಾರಿಗಳು ಬೇಕೆಂದ ಕ್ಷಣ ( ಆನ್ ದಿ ಸ್ಪಾಟ್ ) ಹೊಸ ಪರಿಕರದ ಸಹಾಯದಿಂದ ಟ್ರೇಡ್ ಮಾಡಲು ಸಾಧ್ಯವಾಗಿದೆ. ಈ ಹೊಸ ಇನ್ಸ್ಟ್ರುಮೆಂಟ್ ಇಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ ಎನ್ನುವ ಹೆಸರನ್ನ ಹೊಂದಿದ್ದು ಇದನ್ನ ಸೆಕ್ಯುರಿಟೀಸ್ ಎಂದು ಪರಿಗಣಿಸಲಾಗುತ್ತದೆ .

ಮರ್ಜರ್ ಅಂಡ್ ಅಕ್ವಿಸಿಷನ್ ಸರಳಗೊಳಿಸಲು ಸೆಬಿ ಅಸ್ತು !

ಎಲ್ಲಾ ಸ್ಟಾಕ್ ಎಕ್ಸ್ಚೇಂಜ್ ಗಳು ಕೂಡ ಈ ಹೊಸ ಇನ್ಸ್ಟ್ರುಮೆಂಟ್ ಗಳನ್ನ ಬೇರೆಯದೇ ಆದ ಸೆಗ್ಮೆಂಟ್ ಎಂದು ಪರಿಗಣಿಸಿ ಶುರು ಮಾಡಲು ಅವಕಾಶವನ್ನ ನೀಡಲಾಗಿದೆ.

ಇವೆಲ್ಲವುಗಳಿಂದ ಫಾರಿನ್ ಅಮಾಲ್ಗಮೇಶನ್ ಕೂಡ ಬಹಳಷ್ಟು ಸರಾಗವಾಗಲಿದೆ. ಒಟ್ಟಿನಲ್ಲಿ ಯಾವುದಾದರೂ ಸಂಸ್ಥೆಗಳನ್ನ ತಮ್ಮ ಸಂಸ್ಥೆಯಲ್ಲಿ ವಿಲೀನ ಗೊಳಿಸಿಕೊಳ್ಳಲು ಬಯಸುವರು , ಬೇರೆ ಸಂಸ್ಥೆಯ ತನ್ನದಾಗಿಸಿ ಕೊಳ್ಳುವರಿಗೆ ಇದ್ದ ದೊಡ್ಡ ಅಡ್ಡಗೋಡೆಯೊಂದು ಇದರಿಂದ ಇಲ್ಲವಾಗಿದೆ . ಸಾಕಷ್ಟು ಸರಾಗವಾಗಿ ಡಿ ಲಿಸ್ಟಿಂಗ್ ಮತ್ತು ಆಫರ್ ಎರಡನ್ನೂ ಒಂದೇ ಸಮಯದಲ್ಲಿ ಜಾರಿಗೊಳಿಸುವ ಅವಕಾಶ ಕೂಡ ಇದರಿಂದ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+