ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಪ್ರಮುಖವಾಗಿ ಹತ್ತು ಸಂಸ್ಥೆಗಳ ಮೇಲೆ ದಂಡವನ್ನು ವಿಧಿಸಿದೆ. ಒಟ್ಟಾಗಿ 50 ಲಕ್ಷ ರೂಪಾಯಿ ದಂಡವನ್ನು ಸೆಬಿ ವಿಧಿಸಿದೆ. ಸೆಬಿ ಹತ್ತು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಪ್ರತಿಯೊಂದು ಘಟಕಗಳ ಮೇಲೆ ತಲಾ ಐದು ಲಕ್ಷ ರೂಪಾಯಿಯಂತೆ ಒಟ್ಟು 50 ಲಕ್ಷ ರೂಪಾಯಿ ದಂಡವನ್ನು ಸೆಬಿ ವಿಧಿಸಿದೆ.
ಒರೊಪ್ಲಸ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಬಾಬಾ ಐರನ್ ಇಂಡಸ್ಟ್ರೀಸ್, ಅಟ್ಲಾಂಟಿಕ್ ಇನ್ವೆಸ್ಟ್ ಅಡ್ವೈಸರಿ, ಅವಿನಾಶ್ ವಿ ಮೆಹ್ತಾ ಎಚ್‌ಯುಎಲ್, ನವನೀತ್ ಅಗರ್ವಾಲ್ ಮತ್ತು ಸನ್ಸ್ ಎಚ್‌ಯುಎಫ್, ನೀರಜ್ ಗಾಂಧಿ ಎಚ್‌ಯುಎಫ್, ಅಥ್ವಾನಿ ಶ್ರೀಚಂದ್, ಅವಿರಾಲ್ ಗುಪ್ತಾ, ಆಯುಷಿ ಅಗರ್ವಾಲ್ ಮತ್ತು ಸಲೋನಿ ರುರಿಯಾ ಅವರ ಸಂಸ್ಥೆಗಳ ಮೇಲೆ ದಂಡವನ್ನು ಸೆಬಿ ವಿಧಿಸಿದೆ. ಕಾರಣವನ್ನು ತಿಳಿಯೋಣ ಮುಂದೆ ಓದಿ...

ಹತ್ತು ಸಂಸ್ಥೆಗಳ ಮೇಲೆ ಸೆಬಿ ದಂಡ ವಿಧಿಸಿದ್ದು ಯಾಕೆ?
ಅಕ್ರಮ ವ್ಯಾಪಾರ ಪದ್ಧತಿಗಳನ್ನು ಹತ್ತಿಕ್ಕುವ ಕ್ರಮದಲ್ಲಿ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹತ್ತು ಘಟಕಗಳಿಗೆ ಒಟ್ಟು 50 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಈ ಸಂಸ್ಥೆಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಬಿಎಸ್‌ಇ) ಅಕ್ರಮ ಸ್ಟಾಕ್ ಆಯ್ಕೆಗಳ ವಿಭಾಗದಲ್ಲಿ ತೊಡಗಿದೆ ಎಂಬುವುದು ಸಾಬೀತಾಗಿದ್ದು ಅದಕ್ಕಾಗಿ ಸೆಬಿ ದಂಡವನ್ನು ವಿಧಿಸಿದೆ.
ಈ ಘಟಕಗಳ ವ್ಯಾಪಾರ ಚಟುವಟಿಕೆಯನ್ನು ತನಿಖೆ ಮಾಡಿದ ಬಳಿಕ ಸೆಬಿಯು ದಂಡವನ್ನು ವಿಧಿಸುವ ನಿರ್ಧಾರವನ್ನು ಮಾಡಿದೆ. ನಿರ್ದಿಷ್ಟವಾಗಿ ಏಪ್ರಿಲ್ 2014 ಮತ್ತು ಸೆಪ್ಟೆಂಬರ್ 2015 ರ ನಡುವಿನ ಅವಧಿಯ ತನಿಖೆಯನ್ನು ನಡೆಸಲಾಗಿದೆ. ನಿಯಂತ್ರಕವು ಬಿಎಸ್‌ಇಯಲ್ಲಿ ಸ್ಟಾಕ್ ಆಯ್ಕೆಗಳ ವಿಭಾಗದಲ್ಲಿ ಗಮನಾರ್ಹ ಸಂಖ್ಯೆಯ ರಿವರ್ಸಲ್ ವಹಿವಾಟುಗಳನ್ನು ಕಂಡುಹಿಡಿದಿದೆ.
ಸೆಬಿ ತನ್ನ ಆದೇಶದಲ್ಲಿ ಘಟಕಗಳು ಮೋಸದ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ (PFUTP) ನಿಷೇಧದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ರಿವರ್ಸಲ್ ಟ್ರೇಡ್‌ಗಳು, ಸೆಬಿ ಪ್ರಕಾರ ಈ ಘಟಕಗಳು ಮೋಸಗೊಳಿಸುವ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿಕೊಂಡಿದೆ. ಈ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ಸೆಬಿ ಹತ್ತು ಸಂಸ್ಥೆಗಳ ಮೇಲೆ ದಂಡ ವಿಧಿಸಿದೆ.
ಇನ್ನು ಪ್ರತ್ಯೇಕ ಪ್ರಕರಣವೊಂದರಲ್ಲಿ ಅಲೈಡ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಹಣಕಾಸು ಸೇವೆಗಳ ನೋಂದಣಿ ಪ್ರಮಾಣಪತ್ರವನ್ನು ಸೆಬಿ ರದ್ದುಗೊಳಿಸಿದೆ. ಕಂಪನಿಯು ನಿಯಂತ್ರಕ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣದಿಂದಾಗಿ ಈ ನೋಂದಣಿ ಪ್ರಮಾಣಪತ್ರವನ್ನು ಸೆಬಿ ರದ್ದುಗೊಳಿಸಿದೆ. ಅಲೈಡ್ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ನ ನೋಂದಾಯಿತ ಸದಸ್ಯರಾಗಿದ್ದಾರೆ. ಸೆಬಿ ಈ ಹಿಂದೆ ಇತರ ಸಂಸ್ಥೆಗಳಿಗೆ ದಂಡವನ್ನು ವಿಧಿಸಿದೆ.
ಸೆಬಿಗೆ ಮಾಹಿತಿ ನೀಡಿದರೆ 20 ಲಕ್ಷ ರೂ.ವರೆಗೆ ರಿವಾರ್ಡ್
ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು ಹೊಸ ರಿವಾರ್ಡ್ ನೀಡುವ ಆಫರ್ ಅನ್ನು ನೀಡಿದೆ. ಡಿಫಾಲ್ಟರ್‌ಗಳ (ಸಾಲ ಮರುಪಾವತಿ ಮಾಡದವರ) ಬಗ್ಗೆ ಮಾಹಿತಿಯನ್ನು ನೀಡಿದರೆ ಸೆಬಿಯು ಭಾರೀ ರಿವಾರ್ಡ್ ಅನ್ನು ನೀಡಲಿದೆ. ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ಹೊಸ ಯೋಜನೆ ಪ್ರಕಾರವಾಗಿ ಡಿಫಾಲ್ಟರ್‌ಗಳ ಬಗ್ಗೆ ಮಾಹಿತಿ ನೀಡಿದವರು 20 ಲಕ್ಷ ರೂಪಾಯಿವರೆಗೆ ರಿವಾರ್ಡ್ ಪಡೆಯಬಹುದಾಗಿದೆ.
ಸೆಬಿಯು ತಪ್ಪಿಸಿಕೊಂಡಿರುವ ಡಿಫಾಲ್ಟರ್‌ಗಳಿಂದ ದಂಡವನ್ನು ಪಡೆಯಬೇಕಾಗಿದೆ. ಇದಕ್ಕಾಗಿ ಸೆಬಿಗೆ ಮಾಹಿತಿ ನೀಡಿವರಿಗೆ ಎರಡು ಹಂತದ ರಿವಾರ್ಡ್ ಅನ್ನು ನೀಡಲಾಗುತ್ತದೆ. ಒಂದು ಮಧ್ಯಂತರ ರಿವಾರ್ಡ್ ಮತ್ತೊಂದು ಅಂತಿಮ ರಿವಾರ್ಡ್ ಆಗಿದೆ. ಡಿಫಾಲ್ಟರ್‌ಗಳ ಬಗ್ಗೆ ಮಾಹಿತಿ ನೀಡಿದರೆ ಮಧ್ಯಂತರ ರಿವಾರ್ಡ್ ಲಭ್ಯವಾಗಲಿದೆ. ಇದು ಡಿಫಾಲ್ಟರ್‌ಗಳ ಒಟ್ಟು ಆಸ್ತಿ ಮೌಲ್ಯದ ಶೇಕಡ 2.5ರಷ್ಟು ಅಥವಾ 5 ಲಕ್ಷ ರೂಪಾಯಿ, ಯಾವುದು ಕಡಿಮೆಯೋ ಆ ಮೊತ್ತ ಲಭ್ಯವಾಗಲಿದೆ.


Click it and Unblock the Notifications