ನವದೆಹಲಿ, ಮಾರ್ಚ್ 14: ಲಾಭಾಂಶ ಪಾವತಿಯಲ್ಲಿ ವಿಳಂಬ ಮಾಡಿದ್ದಕ್ಕಾಗಿ ಸ್ಕಾಟಿಷ್ ಎಕ್ಸ್‌ಪ್ಲೋರರ್ ಕೇರ್ನ್ ಗೆ 77.62 ಕೋಟಿ ರೂಪಾಯಿ ಪಾವತಿಸುವಂತೆ ಗಣಿ ಉದ್ಯಮಿ ಅನಿಲ್ ಅಗರ್ವಾಲ್ ಅವರ ವೇದಾಂತ ಲಿಮಿಟೆಡ್‌ಗೆ ಮಾರುಕಟ್ಟೆ ನಿಯಂತ್ರಕ "ಸೆಬಿ" ಮಂಗಳವಾರ ಆದೇಶಿಸಿದೆ. ಮಾತ್ರವಲ್ಲದೇ ಅವರ ಸಹೋದರ ನವೀನ್ ಮತ್ತು ಮಗಳು ಪ್ರಿಯಾ ಸೇರಿದಂತೆ ಸಂಸ್ಥೆಯ ಸಂಪೂರ್ಣ ಮಂಡಳಿಯನ್ನು ಬಂಡವಾಳ ಮಾರುಕಟ್ಟೆಗೆ ಪ್ರವೇಶಿಸದಂತೆ ನಿರ್ಬಂಧಿಸಿದೆ.
ವೇದಾಂತವು 2011 ರಲ್ಲಿ ಕೇರ್ನ್ ಎನರ್ಜಿ PLC ಯ ಬಹುಪಾಲು ಷೇರುಗಳನ್ನು ತನ್ನ ಭಾರತೀಯ ಅಂಗವಾದ ಕೇರ್ನ್ ಇಂಡಿಯಾ ಲಿಮಿಟೆಡ್‌ನಲ್ಲಿ ಖರೀದಿಸಿತ್ತು. ಆದರೆ ಕೇರ್ನ್ ಸಂಸ್ಥೆಯೂ, ಕೇರ್ನ್ ಇಂಡಿಯಾದಲ್ಲಿ ಕೊಂಚ ಪಾಲನ್ನು ಹಿಡಿದಿಟ್ಟುಕೊಂಡಿತ್ತು. ಬಳಿಕ ಅದನ್ನು ಈ ಸಂಸ್ಥೆಯನ್ನು ಮೂಲ ಮತ್ತು ಮುಂಬೈ-ಪಟ್ಟಿಮಾಡಿದ ವೇದಾಂತ ಲಿಮಿಟೆಡ್ ನೊಂದಿಗೆ ವಿಲೀನಗೊಳಿಸಲಾಯಿತು.

ಆದರೆ ಲಾಭಾಂಶವನ್ನು ಪಾವತಿಸುವಲ್ಲಿ ವಿಳಂಬ ಮಾಡಿದ ಕಾರಣಕ್ಕಾಗಿ ಸೆಬಿಯು ವೇದಾಂತದ ಕೆಲವು ಪ್ರಸ್ತುತ ಮತ್ತು ಮಾಜಿ ಉನ್ನತ ಕಾರ್ಯನಿರ್ವಾಹಕರನ್ನು ಮಾರುಕಟ್ಟೆಯಿಂದ 1-2 ತಿಂಗಳ ಕಾಲ ನಿಷೇಧಿಸಿದೆ. ಮಾತ್ರವಲ್ಲದೇ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 76 ಪುಟಗಳ ಆದೇಶದಲ್ಲಿ ವೇದಾಂತವು 45 ದಿನಗಳಲ್ಲಿ ಪಾವತಿಯನ್ನು ಮಾಡಬೇಕು ಅಥವಾ ಮುಂದಿನ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
2014 ರಲ್ಲಿ, ಆದಾಯ ತೆರಿಗೆ ಇಲಾಖೆಯು 2006 ರ ರೀಆರ್ಗನೈಜೇಷನ್ ಮತ್ತು ಕೇರ್ನ್ ಇಂಡಿಯಾದ ಪಟ್ಟಿಯ ಮೇಲೆ ಸ್ಕಾಟಿಷ್ ಎಕ್ಸ್‌ಪ್ಲೋರರ್‌ನ ಮೇಲೆ ರೂ 10,247 ಕೋಟಿ ತೆರಿಗೆ ಬೇಡಿಕೆ ಇಟ್ಟಿತ್ತು.ತೆರಿಗೆ ಮತ್ತು ಹೂಡಿಕೆ ವಿಚಾರವಾಗಿ ಕೇರ್ನ್ ಎನರ್ಜಿ ಮತ್ತು ಭಾರತ ಸರ್ಕಾರದ ವಿವಾದ ಉಲ್ಲೇಖಿಸಿ ವೇದಾಂತವು ಲಾಭಾಂಶವನ್ನು ಪಾವತಿಸುವುದನ್ನು ನಿಲ್ಲಿಸಿತು. ಕೊನೆಗೆ ತೆರಿಗೆ ಮತ್ತು ಹೂಡಿಕೆ ಲಾಭಾಂಶ ಪಾವತಿಯನ್ನು ನಿಲ್ಲಿಸುವ ಕುರಿತು ಸೆಬಿಯನ್ನು ಸಂಪರ್ಕಿಸಿತು.
ಜನವರಿ 2014 ಮತ್ತು ಜೂನ್ 2017 ರ ನಡುವೆ ಯುಕೆ ಸಂಸ್ಥೆಗೆ ಪಾವತಿಸಬೇಕಾದ ಲಾಭಾಂಶವನ್ನು ತಡೆಹಿಡಿಯುವ ಮೂಲಕ ವೇದಾಂತ ಕಾನೂನನ್ನು ಉಲ್ಲಂಘಿಸಿದೆ ಎಂದು ಇದೇ ಸೆಬಿ ತನ್ನ ಆದೇಶದಲ್ಲಿ ಹೇಳಿದೆ. "ಕೇರ್ನ್ ಯುಕೆ ಹೋಲ್ಡಿಂಗ್ಸ್‌ಗೆ (ಕೈರ್ನ್ ಎನರ್ಜಿಯ ಮೂಲ ಸಂಸ್ಥೆ) ರೂ 77,62,55,052 ವಾರ್ಷಿಕ ಲಾಭಾಂಶದ ವಿಳಂಬ ಪಾವತಿಗೆ 18 ಪ್ರತಿಶತ ದರದಲ್ಲಿ ಸರಳ ಬಡ್ಡಿ, ಬಾಕಿ ಮತ್ತು ಈ ಆದೇಶದ ದಿನಾಂಕದಿಂದ 45 ದಿನಗಳಲ್ಲಿ CUHL ಗೆ (ಸಂಸ್ಥೆಯಿಂದ) ಪಾವತಿಸಬೇಕು. ನಿಯಂತ್ರಕವು ಕೇರ್ನ್ ಇಂಡಿಯಾದ (ಈಗ ವೇದಾಂತ ಲಿಮಿಟೆಡ್) ಅಧ್ಯಕ್ಷರಾಗಿದ್ದ ನವೀನ್ ಅಗರ್ವಾಲ್ ಮತ್ತು ಇತರ ಮೂವರು ಉನ್ನತ ಕಾರ್ಯನಿರ್ವಾಹಕರನ್ನು ಎರಡು ತಿಂಗಳವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ.


Click it and Unblock the Notifications