ತುಮಕೂರು ಜಿಲ್ಲೆಯ ಅಭಿವೃದ್ದಿ ಪರ್ವ ಶುರುವಾಗಿದೆ. ಈಗಾಗಲೇ ನಮ್ಮ ಮೊಟ್ರೋ ತುಮಕೂರಿಗೆ ಬರಬೇಕೆಂಬ ಕಾರ್ಯಸಾಧ್ಯತಾ ವರದಿ ರಾಜ್ಯ ಸರ್ಕಾರದ ಕೈ ಸೇರಿದೆ. ಇದರ ಜೊತೆಯಲ್ಲಿ ಕೆಲವು ತಿಂಗಳ ಹಿಂದೆ ತುಮಕೂರಿಗೆ ಏರ್ಪೋರ್ಟ್ ಬರಬೇಕು ಎಂದು ಜಿಲ್ಲೆಯ ಸಚಿವರು, ಸಂಸದರು ಹಾಗೂ ಶಾಸಕರು ಪಟ್ಟು ಹಿಡಿದಿದ್ದರು. ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಕೇಂದ್ರದ ಕೈ ಸೇರಿದ್ದು ಆಯ್ತು. ಕೇಂದ್ರ ವಿಮಾನ ಪ್ರಾಧಿಕಾರದ ಅಧಿಕಾರಗಳು ಬಂದು ಸ್ಥಳವನ್ನು ಪರಿಶೀಲನೆ ಮಾಡಿ ಹೋಗಿದ್ದು ಆಯ್ತು. ಆದರೆ, ನಿರ್ಮಾಣ ಸ್ಥಳ ಮಾತ್ರ ಇನ್ನೂ ಫೈನಲ್ ಆಗಿಲ್ಲ. ಭಾರತ- ಪಾಕ್ ಕದನ ವಿರಾಮದ ನಡುವೆ ಈ ವಿಚಾರ ಕೂಡ ಸೈಲೆಂಟ್ ಆಗಿಯೇ ಉಳಿದುಕೊಂಡಿದೆ. ಹಾಗಿದ್ರೆ, ತುಮಕೂರಿಗೆ ವಿಮಾನ ನಿಲ್ದಾಣ ಬರುತ್ತಾ? ಅಥವಾ ನಮ್ಮ ಮೊಟ್ರೋ ಬರುತ್ತಾ? ನಿಜಕ್ಕೂ ಏನಾಗ್ತಿದೆ? ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಮಾಹಿತಿ.
ಹೌದು, ತುಮಕೂರಿಗೆ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಎರಡು ಬರಬೇಕೆಂಬುವುದು ಸ್ಥಳೀಯರ ಆಸೆ ಆದರೆ ಈ ಎರಡು ಯೋಜನೆಗಳನ್ನು ಅಭಿವೃದ್ದಿಪಡಿಸುವುದ ಕೇಂದ್ರ ಸರ್ಕಾರದ ಕೈಯಲ್ಲಿ ಇದೆ.

ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕಥೆ ಎಲ್ಲಿಗೆ ನಿಂತಿದೆ..?
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಐದು ಜಾಗಗಳನ್ನು ಗುರುತಿಸಿ ರಾಜ್ಯ ಸರ್ಕಾಕ್ಕೆ ಕಾರ್ಯಸಾಧ್ಯತೆಗಾಗಿ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿತ್ತು. ಅವುಗಳಲ್ಲಿ ತುಮಕೂರು, ನೆಲಮಂಗಲ, ಬಿಡದಿ, ಹೇರೋಹಳ್ಳಿ, ಜಿಗಣಿ ಹಾಗೂ ಕುಣಿಗಲ್‌ನ ಯಾವುದಾದರೂ ಒಂದು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆದಿತ್ತು. ಅದರಲ್ಲಿ ರಾಜ್ಯ ಸರ್ಕಾರ 3 ಸ್ಥಳಗಳು ಮಾತ್ರ ಫೈನಲ್ ಮಾಡಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾಪವನ್ನು ಕಳುಹಿಸಲಾಗಿತ್ತು.
ನಂತರ ಕನಕಪುರ ರಸ್ತೆ ಹಾರೋಹಳ್ಳಿ ಬಳಿ ಎರಡು ಸ್ಥಳಗಳು ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯ ಒಂದು ಸ್ಥಳ. ಈ ಸ್ಥಳಗಳನ್ನು ಸೂಕ್ತ ಪರಿಶೀಲನೆ ಮತ್ತು ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳ ಯಾವುದು ಅಂದರೆ ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ, ನೆಲಮಂಗಲ-ಕುಣಿಗಲ್ ರಸ್ತೆಯೊಂದಿಗೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಾರ್ಚ್ 5 ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಪೂರ್ವ-ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಈ ಸ್ಥಳಗಳನ್ನು ಪ್ರಸ್ತಾಪಿಸಿದೆ ಎಂದು ವರದಿಗಳು ಸಹ ಆಗಿದ್ದವು.
ಪ್ರಸ್ತಾವನೆಯ ಪ್ರಕಾರ ವಿಮಾನ ನಿಲ್ದಾಣದ ಸ್ಥಳ ಕನಕಪುರ ರಸ್ತೆಯ ಎರಡು ಸ್ಥಳ ಮತ್ತು ನೆಲಮಂಗಲ-ಕುಣಿಗಲ್ ನಡುವಿನ ರಸ್ತೆಯಲ್ಲಿ ಒಂದು ಜಾಗವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಕನಕಪುರ ರಸ್ತೆಯ ಒಂದು ಜಾಗ 4,800 ಎಕರೆ ಇದ್ದರೆ ಇನ್ನೊಂದು ಜಾಗ 5,000 ಎಕರೆ ಇದೆ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಜಾಗ 5,200 ಎಕರೆ ಇದೆ.ಅದರೆ ಎಲ್ಲಿ ವಿಮಾಣ ನಿಲ್ದಾಣ ಮಾಡಬೇಕು ಎಂಬ ಕುತೂಹಲ ಕೂಡ ಇತ್ತು. ಇದೆಲ್ಲಾ ಆದರ ಒಂದು ತಿಂಗಳಿಗೆ ಕೇಂದ್ರದಿಂದ ಮೂಲಸೌಕರ್ಯ ಕಾರ್ಯಸಾಧ್ಯತಾ ವರದಿಗಾಗಿ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆಯನ್ನು ಮಾಡಿದ್ದರು ಆದರೆ ಅಂತಿಮವಾಗಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುತ್ತೆ ಎಂಬುವುದನ್ನು ಬಹಿರಂಗಪಡಿಸಿಲ್ಲ.
ವಿಮಾನ ನಿಲ್ದಾಣ ನಮ್ಮ ಊರಿಗೆ ಬರಬೇಕು ಎಂದು ಸಚಿವರ ನಡುವೆ ಕಿತ್ತಾಟ
2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಮೊದಲು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport) ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ ಮತ್ತೊಂದು ಕಡೆ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ, ಇದು ಆದ ನಂತರ ಟಿ,ಬಿ ಜಯಚಂದ್ರ ಶಿರಾ ಬಾಗಕ್ಕೆ ಬರಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದರು. ಇನ್ನೂ ಕೇಂದ್ರ ಸಚಿವ ವಿ. ಸೋಮಣ್ಣ ಕೂಡ ತುಮಕೂರಿಗೆ ವಿಮಾನ ನಿಲ್ದಾಣ ಬರಬೇಕು ಎಂದು ಸರ್ಕಾರಕ್ಕೆ ಹೇಳುತ್ತಿದ್ದರು ಆಂದರೆ ಸರ್ಕಾರ ಇನ್ನೂ ಯಾರ ಒತ್ತಡಕ್ಕೂ ಮಣಿಯದೇ ತಟ್ಟಸ್ಥವಾಗಿಯೇ ಇದೆ. ಎಲ್ಲಿ ವಿಮಾನ ನಿಲ್ದಾಣ ಮಾಡಡುತ್ತಾರೇ ಎಂಬುವುದು ಕುತೂಹಲ.. ತುಮಕೂರಿನ ಜಿಲ್ಲೆಗೆ ವಿಮಾನ ನಿಲ್ದಾಣ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿರೆ ಬೆಂಗಳೂರಿನಂತೆ ತುಮಕೂರು ಸಹ ವೇಗವಾಗಿ ಬೆಳೆಯುತ್ತದೆ. ತುಮಕೂರಿಗೆ ವಿಮಾನ ನಿಲ್ದಾಣ ಬರಲ್ಲೇ ಎಂದು ಸಾರ್ವಜನಿಕರು ಕೂಡ ಆಸೆಯನ್ನು ಪಟ್ಟಿದ್ದಾರೆ.
ನಮ್ಮ ಮೆಟ್ರೋ ತುಮಕೂರಿಗೆ
ತುಮಕೂರಿನ ದೊಡ್ಡ ಕನಸು ಮೆಟ್ರೋ ತುಮಕೂರಿನವರೆಗೂ ಬರುವುದು. ಈಗಾಗಲೇ ಬೆಂಗಳೂರು ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ರಾಜ್ಯ ಸರ್ಕಾರಕ್ಕೆ ಕರಡು ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಕೆ ಮಾಡಿದೆ ಆದರೆ ಕೇಂದ್ರದ ಅನುಮೋದನೆ ಮಾತ್ರ ಬಾಕಿ ಇದೆ. ಅನುಮೋದನೆ ಸಿಕ್ಕರೆ ನ್ಮಮ ಮೆಟ್ರೋ ತುಮಕೂರಿಗೆ ಬರುತ್ತದೆ. ಒಟ್ಟು 16 ನಿಲ್ದಾಣಗಳನ್ನು ಈ ತುಮಕೂರಿನ ಹಸಿರು ಮಾರ್ಗ ಹೊಂದಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ (ಸಿಲ್ಕ್ ಇನ್ಸ್ಟಿಟ್ಯೂಟ್) ಮಾದಾವರದವರೆಗೂ ಈಗ ರೈಲು ಸಂಚಾರ ನಡೆಸುತ್ತಿದೆ.ಈ ಹಸಿರು ಮಾರ್ಗವನ್ನೇ ಮಾದಾವರದಿಂದ ತುಮಕೂರಿಗೆ ವಿಸ್ತರಣೆ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿ ಈ ಬಗ್ಗೆ 2024 25 ಬಜೆಟ್‌ನಲ್ಲಿಯೂ ಘೋಷಣೆಯನ್ನು ಸಹ ಮಾಡಿತ್ತು. ಇದು ಆದ ನಂತರ ಕಾರ್ಯ ಸಾಧ್ಯತಾ ವರದಿ ನೀಡಲು ಖಾಸಗಿ ಸಂಸ್ಥೆಗೆ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ಗೆ ಟೆಂಡರ್ ನೀಡಿತ್ತು. ಆ ವರದಿ ಸಿದ್ಧವಾಗಿ ಈಗ ರಾಜ್ಯ ಸರ್ಕಾರದ ಕೈ ಸೇರಿದೆ.ಇದೀಗ ಸರ್ಕಾರ ಶೀಘ್ರದಲ್ಲೇ ತುಮಕೂರುವರೆಗೆ ಮೆಟ್ರೋ ಕಾರ್ಯಸಾಧ್ಯತಾ ಅಧ್ಯಯನ ಬಗ್ಗೆ ಚರ್ಚಿಸಿ ಅನುಮೋದನೆ ನೀಡುವ ಸಂಭವವಿದೆ. ಅನುಮೋದನೆ ದೊರೆತರೆ,ಇದು ಕರ್ನಾಟಕದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಲಿದೆ.
ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿ,ಅಂದಾಜು 20,650 ಕೋಟಿ ರೂ. ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಂಟಿ ನಿಧಿಯೊಂದಿಗೆ ವಿಶೇಷ ಉದ್ದೇಶದ ವಾಹನ ಮಾದರಿ, ಅಂದಾಜು 18,670 ಕೋಟಿ ರೂ ಇದೆ. ಕರಡು ವರದಿಯು ಯೋಜನೆಯ ತಾಂತ್ರಿಕ ಕಾರ್ಯಸಾಧ್ಯತೆಯನ್ನು ದೃಢಪಡಿಸುತ್ತದೆ. 2032 ರ ವೇಳೆಗೆ, ಈ ಕಾರಿಡಾರ್ 2.8 ಲಕ್ಷ ದೈನಂದಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ, 2061 ರ ವೇಳೆಗೆ ಪ್ರಯಾಣಿಕರ ಸಂಖ್ಯೆ 5 ಲಕ್ಷವನ್ನು ತಲುಪುವ ನಿರೀಕ್ಷೆಯಿದೆ.
ತುಮಕೂರಿಗೆ ಮೆಟ್ರೋಕ್ಕೆ ಇನ್ನೂ ಕೇಂದ್ರದ ಅನುಮೋದನೆ ಸಿಗಬೇಕು.ಮತ್ತು ಸರ್ಕಾರ ಕಾಮಗಾರಿಗೆ ಟೆಂಡರ್ ಕೂಡ ಕರೆಯಬೇಕು. ಆಗ ನಮ್ಮ ಮೆಟ್ರೋ ತುಮಕೂರಿಗೆ ಬರುತ್ತದೆ.
ಒಟ್ಟಾರೆ ತುಮಕೂರಿಗೆ ಎರಡನೇ ವಿಮಾನ ನಿಲ್ದಾಣ ಹಾಗೂ ಮೆಟ್ರೋ ಬರುವುದರಿಂದ ಹೆಚ್ಚಿನ ಕೈಗಾರಿಕೆಗಳು ಸ್ಥಾಪಿತವಾಗುತ್ತೇವೆ. ಹೂಡಿಕೆದಾರು ಕೂಡ ಹೂಡಿಕೆ ಮಾಡಲು ಬರುತ್ಥಾರೆ. ರಿಯಲ್ ಎಸ್ಕೇಟ್ ಕೂಡ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಆದಾಯ ಕೂಡ ಬರುತ್ತದೆ ಉದ್ಯೋಗದ ಸೃಷ್ಟಿಗೂ ಸಹ ದಾರಿ ಮಾಡಿಕೊಂಡುತ್ತದೆ.


Click it and Unblock the Notifications