2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport) ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ. ಮತ್ತೊಂದು ಕಡೆ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಈಗಲೇ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಮೋದಿ ಅಂಗಳ ತಲುಪಿದೆ. ಅದರೂ ಸಹ ಎರಡನೇ ವಿಮಾನ ನಿಲ್ದಾಣ ಶಿರಾ ಭಾಗಕ್ಕೆ ತರಬೇಕೆಂಬುದು ನನ್ನ ಬಯಕೆಯಂದು ಹಿರಿಯ ಶಾಸಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು,ಎರಡನೇ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಮೂರು ಸ್ಥಳ ಗುರುತಿಸಲಾಗಿದ್ದು, ಎರಡು ಹಾರೋಹಳ್ಳಿ ಬಳಿಯ ಕನಕಪುರ ರಸ್ತೆಯಲ್ಲಿ ಮತ್ತು ಒಂದು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದೆ.ಈ ನಡುವೆಯೂ ಎರಡನೇ ವಿಮಾನ ನಿಲ್ದಾಣ ನಮ್ಮ ಊರಿಗೆ ಬರಬೇಕು ಎಂದು ಕೂಗು ಕೇಳಿಬರುತ್ತಲೇ ಇದೆ.

ನಾನು ಶಿರಾ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನನ್ನ ಶಕ್ತಿ ಮೀರಿ ಅನುದಾನ ತರುತ್ತೇನೆ. ಶಿರಾ ಭಾಗಕ್ಕೆ ವಿಮಾನ ನಿಲ್ದಾಣ ತರಬೇಕೆಂಬುದು ನನ್ನ ಆಸೆ.ನಾನು ಒಂದು ಬಾರಿ ಗುರಿ ಇಟ್ಟರೆ ಸಾಧಿಸುವ ತನಕ ಬಿಡೋ ಮಾತೇ ಇಲ್ಲ ಎಂದು ಹಿರಿಯ ಶಾಸಕ ಟಿ ಬಿ ಜಯಚಂದ್ರ ಈ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶಿರಾ ತಾಲೂಕಿನ ಮುದ್ದರಂಗನಹಳ್ಳಿ ಬಳಿಯ ಅಮರಾಪುರ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಒಂದು ವಿಮಾನ ನಿಲ್ದಾಣದಿಂದ ಇನ್ನೋದು ವಿಮಾನ ನಿಲ್ದಾಣಕ್ಕೆ 150 ಕಿಲೋ ಮೀಟರ್ ಹತ್ತರವಿರಬೇಕು ಎಂಬ ಕಾನೂನು ಇದೆ. ಆದರೆ ಇದನೆಲ್ಲಾ ಅಧಿಕಾರಿಗಳು ನಾಯಕರು ಎಲ್ಲರು ಮರೆಮಾಚಿದ್ದಾರೆ. 150 ಕಿಲೋ ಮೀಟರ್ ಅಂತ ಬಂದಾಗ ಅದು ಅವರ ಹೇಳಿದ ರೀತಿಯಲ್ಲಿ ಬರುವುದಿಲ್ಲ ನೀವು ಯಾವುದೇ ಕಡೆಹೋದರೂ ಅಥವಾ ಮಧ್ಯ ಕರ್ನಾಟಕ ಲೆಕ್ಕಾಚಾರದಂತೆ ಹೋದರೆ ಶಿರಾ ಬಾರ್ಡರ್ ಹತ್ತಿರನೇ ಆಗಬೇಕು. ಆದ್ದರಿಂದ ಎರಡನೇ ವಿಮಾನ ನಿಲ್ದಾಣ ಶಿರಾಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಶಿರಾದಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಬಹಳಷ್ಟು ಜನಕ್ಕೆ ಅನುಕೂಲವಾಗುತ್ತದೆ. ಬೀದರ್ ಬೆಳಗಾಂ, ದಾರವಾಡ, ಶಿವಮೊಗ್ಗ ಜಿಲ್ಲೆಯಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದಾಗಿ ವಿಮಾನ ನಿಲ್ದಾಣ ಅಂತಿವಾಗಿ ಶಿರಾದ ಬಳಿಯೇ ಆಗಬೇಕು. ಏರ್ಪೋರ್ಟ್ಸ್ ಅಥಾರಿಟಿ ಅವರು ಬರುವುದಕ್ಕೆ ತಯಾರಿಯಾದರೆ 6ಸಾವಿರ ಎಕರೆಯ ಜಮೀನುನನ್ನು ನಾವು ಶಿರಾದಲ್ಲಿ ಕೊಡುವುದಕ್ಕೆ ಸಿದ್ದರಾಗಿದ್ದೇವೆ.ನಾವು ಜಮೀನನನ್ನು ಸಹ ಗುರುತು ಮಾಡಿಕೊಂಡಿದ್ದೇವೆ ಈಗಲೇ ಸರ್ಕಾರ ಮನವಿಯನ್ನು ಸಹ ಮಾಡಿದ್ದೇವೆ ಜಮೀನ ಎಲ್ಲಿ ನೀಡಲಾಗುತ್ತದೆ ಎಂದು ಕಾಗದ ಸಹ ಬರೆದಿದ್ದೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ ಜಯಚಂದ್ರ ಈ ಹಿಂದೆ ಮಾತನಾಡಿದ್ದರು.
2ನೇ ವಿಮಾಣ ನಿಲ್ದಾಣವನ್ನು ನಿರ್ಮಾಣ ಮಾಡಲು ಸುಮಾರು 7 ರಿಂದ 8 ವರ್ಷಗಳು ಬೇಕಾಗಬಹುದು. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2033 ರವರೆಗೆ 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣ ನಿರ್ಮಾಣವಾಗಬಾರದು ಎಂಬ ವಿಶೇಷ ಷರತ್ತನ್ನು ಹೊಂದಿದೆ.
2030 ರ ವೇಳೆಗೆ 100 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ. ಈ ಮುನ್ಸೂಚನೆಯನ್ನು ಗಮನಿಸಿದರೆ, ಎರಡನೇ ವಿಮಾನ ನಿಲ್ದಾಣವನ್ನು ಮುಂಚಿತವಾಗಿ ಯೋಜಿಸುವ ತುರ್ತು ಅಗತ್ಯದ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಹೇಳಿದ್ದರೆ. ಈ ಯೋಜನೆ ಕಾರ್ಯರೂಪಕ್ಕೆ ಬರಲು ಏಳರಿಂದ ಎಂಟು ವರ್ಷಗಳು ತೆಗೆದುಕೊಳ್ಳಬಹುದು ಎಂದು ಅಂದಾಜಿಸಿದ್ದಾರೆ.


Click it and Unblock the Notifications