ಸೋಮವಾರ ಸುಮಾರು 4000 ಪಾಯಿಂಟ್ಸ್‌ವರೆಗೂ ಭಾರೀ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ ಆರಂಭದಲ್ಲಿ ಚೇತರಿಕೆ ಕಂಡು ಅಷ್ಟೇ ಪ್ರಮಾಣದಲ್ಲಿ ಇಳಿಮುಖಗೊಂಡಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭದಲ್ಲಿ 360 ಪಾಯಿಂಟ್ಸ್ ಚೇತರಿಕೆ ಕಂಡಿತ್ತು. ಆದರೆ ನಂತರ ಹೂಡಿಕೆದಾರರು ಹೆಚ್ಚಿನ ಮಾರಾಟಕ್ಕೆ ಮುಂದಾಗಿದ್ದು, 181 ಪಾಯಿಂಟ್ಸ್ ಇಳಿಕೆಗೊಂಡು 25,799 ಪಾಯಿಂಟ್ಸ್‌ಗೆ ತಲುಪಿದೆ. ಇನ್ನೂ ನಿಫ್ಟಿ ಕೂಡ 0.60 ಪರ್ಸೆಂಟ್ ಇಳಿಕೆಯಾಗಿದ್ದು 7564 ಪಾಯಿಂಟ್ಸ್‌ಗೆ ತಲುಪಿದೆ.

ಬ್ಯಾಂಕಿಂಗ್ ಷೇರುಗಳೆಲ್ಲಾ ಬಹುತೇಕ ನೆಲಕಚ್ಚುತ್ತಿದ್ದು, ಬಹುತೇಕ ಎಲ್ಲಾ ಕಂಪನಿಯ ಷೇರುಗಳು ಇಳಿಮುಖದತ್ತ ಸಾಗಿವೆ. ಇದರ ನಡುವೆ ಇನ್ಫೋಸಿಸ್, ಅದಾನಿ ಪೋರ್ಟ್ಸ್, ಹೆಚ್‌ಯುಎಲ್, ಬ್ರಿಟಾನಿಯಾ ಸನ್‌ಫಾರ್ಮಾ, ಸಿಪ್ಲಾ, ಟಿಸಿಎಸ್ ಹಾಗೂ ಟೆಕ್ ಮಹೀಂದ್ರಾ ಕಂಪನಿಯ ಷೇರುಗಳು 4 ಪರ್ಸೆಂಟ್‌ಗಿಂತ ಹೆಚ್ಚಿನ ಏರಿಕೆ ದಾಖಲಿಸಿವೆ
ನಷ್ಟ ಅನುಭವಿಸಿದ ಷೇರುಗಳು:
ಇಂಡಸ್‌ಲ್ಯಾಂಡ್ ಬ್ಯಾಂಕ್, ಯೆಸ್ ಬ್ಯಾಂಕ್, ಬಜಾಜ್ ಫಿನ್ಸರ್ವ್, ಹೀರೋ ಮೋಟೊಕಾರ್ಪ್, ಭಾರತಿ ಇನ್ಫಾಟ್ರೆಲ್, ಬಿಪಿಸಿಎಲ್ , ಲಾರ್ಸನ್, ಕೋಟಕ್ ಮಹೀಂದ್ರಾ ಷೇರುಗಳು 3 ಪರ್ಸೆಂಟ್‌ಗೂ ಅಧಿಕ ನಷ್ಟ ಅನುಭವಿಸಿವೆ.


Click it and Unblock the Notifications