For Quick Alerts
ALLOW NOTIFICATIONS  
For Daily Alerts

ಹೊಸ ದಾಖಲೆಯತ್ತ ಸಾಗುತ್ತಿದೆ ಸೆನ್ಸೆಕ್ಸ್: 16,700 ಹಂತದತ್ತ ನಿಫ್ಟಿ

|

ಭಾರತೀಯ ಷೇರುಪೇಟೆ ಸೋಮವಾರ ಸಾಕಷ್ಟು ಏರಿಳಿತಗಳ ನಡುವೆ ದಿನದ ವಹಿವಾಟು ಅಂತ್ಯದಲ್ಲಿ ಹಸಿರು ಬಣ್ಣದಲ್ಲಿ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 226 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 16500 ಪಾಯಿಂಟ್ಸ್ ಸಮೀಪದಲ್ಲಿ ಉಳಿದಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 226.47 ಪಾಯಿಂಟ್‌ಗಳು ಅಥವಾ ಶೇಕಡಾ 0.41 ಏರಿಕೆಯೊಂದಿಗೆ 55,555.79 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 46 ಪಾಯಿಂಟ್ಸ್‌ ಅಥವಾ ಶೇಕಡಾ 0.28ರಷ್ಟು ಹೆಚ್ಚಾಗಿ 16,496.50 ಪಾಯಿಂಟ್ಸ್‌ ಮುಟ್ಟಿದೆ.

ಇದಲ್ಲದೇ, ಒಟ್ಟು 3,393 ಕಂಪನಿಗಳು ಇಂದು ಬಿಎಸ್‌ಇಯಲ್ಲಿ ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಸುಮಾರು 786 ಷೇರುಗಳು ಏರಿಕೆಗೊಂಡರೆ ಮತ್ತು 2,464 ಷೇರುಗಳು ಕುಸಿದವು. 143 ಕಂಪನಿಗಳ ಷೇರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಎಚ್‌ಸಿಎಲ್ ಟೆಕ್‌ನ ಷೇರುಗಳು 46 ರೂಪಾಯಿ ಏರಿಕೆಯೊಂದಿಗೆ 1,163.10 ರೂಪಾಯಿಗೆ ಕೊನೆಗೊಂಡಿತು. ನೆಸ್ಲೆ ಷೇರುಗಳು 450 ರೂಪಾಯಿಗಳಷ್ಟು ಏರಿಕೆಯೊಂದಿಗೆ 20,021.05 ರೂ.ನಲ್ಲಿ ಕೊನೆಗೊಂಡಿತು. ಟಿಸಿಎಸ್ ನ ಷೇರುಗಳು 76 ರೂಪಾಯಿಗಳಷ್ಟು ಏರಿಕೆಯೊಂದಿಗೆ 3,637.40 ಕ್ಕೆ ಕೊನೆಗೊಂಡಿತು. ಬಜಾಜ್ ಫಿನ್‌ಸರ್ವ್‌ನ ಷೇರುಗಳು 293 ರೂಪಾಯಿಗಳಷ್ಟು ಏರಿಕೆಯೊಂದಿಗೆ 15,271.90 ಕ್ಕೆ ಕೊನೆಗೊಂಡಿತು. ಭಾರ್ತಿ ಏರ್‌ಟೆಲ್‌ನ ಷೇರು 92 ರೂಪಾಯಿ ಏರಿಕೆಯೊಂದಿಗೆ 622.65 ರೂಪಾಯಿಗೆ ಕೊನೆಗೊಂಡಿತು.

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಗ್ರೇಸಿಯಂ ಷೇರು ಸುಮಾರು 44 ರೂ. ಕುಸಿದು 440.65 ಕೊನೆಗೊಂಡಿತು, ಅದಾನಿ ಪೋರ್ಟ್ಸ್ ನ ಷೇರುಗಳು 19 ರೂಪಾಯಿಗಳಷ್ಟು ಇಳಿಕೆಯಾಗಿ 668.30 ರೂಪಾಯಿಗೆ ಕೊನೆಗೊಂಡಿದ್ದು, ಮಹೀಂದ್ರಾ & ಮಹೀಂದ್ರಾ ಷೇರುಗಳುಸುಮಾರು 20 ರೂ. ಇಳಿಕೆಗೊಂಡು ರೂ. 765.90 ಕ್ಕೆ ತಲುಪಿದೆ. ಬಜಾಜ್ ಆಟೋ ಷೇರು ಸುಮಾರು 83 ರೂ. ಕುಸಿದು 3,668.25 ಕ್ಕೆ ಕೊನೆಗೊಂಡಿತು. ಈಚರ್ ಮೋಟಾರ್ಸ್ ನ ಷೇರುಗಳು 55 ರೂಪಾಯಿ ಇಳಿಕೆಯಾಗಿ 2,544.00 ರೂಗಳಲ್ಲಿ ಕೊನೆಗೊಂಡಿತು.

ಶೇಕಡಾ 1.5 ರಷ್ಟು ಕುಸಿದಿದೆ
 

ಶೇಕಡಾ 1.5 ರಷ್ಟು ಕುಸಿದಿದೆ

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.90ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 1.5 ರಷ್ಟು ಕುಸಿದಿದೆ. ಇನ್ನು ವಲಯಗಳಲ್ಲಿ, ನಿಫ್ಟಿ ಐಟಿ ಸೂಚ್ಯಂಕವು ತಲಾ 1.7 ಪ್ರತಿಶತವನ್ನು ಗಳಿಸಿದರೆ, ಲೋಹ, ಆಟೋ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇಕಡಾ 0.5 ರಿಂದ 1.5ರಷ್ಟು ಕಳೆದುಕೊಂಡಿವೆ.

ಬಿಎಸ್‌ಇಯಲ್ಲಿ, ಐಟಿ ಸೂಚ್ಯಂಕವು ಶೇಕಡಾ 1ಕ್ಕಿಂತ ಹೆಚ್ಚು ಮತ್ತು ತೈಲ ಮತ್ತು ಅನಿಲ ಸೂಚ್ಯಂಕವು ಶೇಕಡಾ 0.5 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಆಟೋ, ಕ್ಯಾಪಿಟಲ್ ಗೂಡ್ಸ್, ಹೆಲ್ತ್‌ಕೇರ್, ಮೆಟಲ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 0.5 ರಿಂದ 1ರಷ್ಟು ಇಳಿಕೆಯಾಗಿದೆ.

ವೈಯಕ್ತಿಕ ಸ್ಟಾಕ್‌ಗಳಲ್ಲಿ, ಕ್ಯಾಡಿಲಾ ಹೆಲ್ತ್‌ಕೇರ್, ಎಸ್‌ಎಐಎಲ್ ಮತ್ತು ಎಸ್‌ಕಾರ್ಟ್ಸ್‌ನಲ್ಲಿ ಶೇ. 300 ಕ್ಕಿಂತ ಹೆಚ್ಚಿನ ಪ್ರಮಾಣದ ಏರಿಕೆ ಕಂಡುಬಂದಿದೆ.

ಮತ್ತೊಂದೆಡೆ, ಇಂದು ಸಂಜೆ ಡಾಲರ್ ಎದುರು ರೂಪಾಯಿ 18 ಪೈಸೆ ಬಲಗೊಂಡು ರೂ 74.20 ಕ್ಕೆ ಕೊನೆಗೊಂಡಿತು.

 

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?

ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

English summary

Sensex 226 Points Up: Nifty End Higher Led By IT Stocks

Sensex was up 226.47 points, or 0.41 percent, at 55,555.79, and the Nifty was up 46 points, or 0.28 percent, at 16,496.50.
Story first published: Monday, August 23, 2021, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X