ಭಾರತದ ಷೇರುಪೇಟೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ 45 ನಿಮಿಷಗಳ ವ್ಯವಹಾರ ಸ್ಥಗಿತ ಮಾಡಲಾಗಿದೆ. ಇಂದು ಸೆನ್ಸೆಕ್ಸ್ ಆರಂಭದಲ್ಲೇ 2700 ಪಾಯಿಂಟ್ಸ್ ಕುಸಿತ ಕಂಡರೆ, ನಿಫ್ಟಿ 8 ಸಾವಿರ ಗಡಿಯಿಂದ ಕೆಳಗಿಳಿದಿತ್ತು.
ಆರಂಭದಲ್ಲೇ ಭಾರೀ ಕುಸಿತದ ಜೊತೆಗೆ ಇಳಿಯುತ್ತಲೇ ಸಾಗಿದ್ದ ಸೆನ್ಸೆಕ್ಸ್ 10 ಪರ್ಸೆಂಟ್ ಇಳಿಕೆ ಕಂಡಿತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 3,500 ಪಾಯಿಂಟ್ಸ್ ಇಳಿಕೆ ಕಂಡು 26,265.49 ಪಾಯಿಂಟ್ಸ್‌ಗೆ ತಲುಪಿದೆ. ಇನ್ನು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 11.81 ಪರ್ಸೆಂಟ್ ಇಳಿಕೆಯಾಗಿದ್ದು, 1033 ಪಾಯಿಂಟ್ಸ್ ಕುಸಿತವಾಗಿದೆ. ನಿಫ್ಟಿಯು 7,712 ಪಾಯಿಂಟ್ಸ್ ಇಳಿಕೆಗೊಂಡು ಭಾರೀ ನಷ್ಟ ಕಂಡಿದೆ.