ಭಾರತೀಯ ಷೇರುಪೇಟೆ ಸೋಮವಾರ ಭರ್ಜರಿ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,800 ಪಾಯಿಂಟ್ಸ್ ಗಡಿದಾಟಿದೆ.
ಬಿಎಸ್‌ಇ ಸೆನ್ಸೆಕ್ಸ್ ಬೆಳಿಗ್ಗೆ 10.45ರ ಸುಮಾರಿಗೆ 504 ಪಾಯಿಂಟ್ಸ್ ಅಥವಾ ಶೇಕಡಾ 1.02ರಷ್ಟು ಏರಿಕೆಗೊಂಡು 49229 ಪಾಯಿಂಟ್ಸ್ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 133 ಪಾಯಿಂಟ್ಸ್ ಅಥವಾ ಶೇಕಡಾ 0.90ರಷ್ಟು ಹೆಚ್ಚಾಗಿ 14810 ಪಾಯಿಂಟ್ಸ್ ಮುಟ್ಟಿದೆ.

ಏರಿಕೆಗೊಂಡ ಷೇರುಗಳು:
ಯುಪಿಎಲ್‌ನ ಷೇರುಗಳು ಸುಮಾರು 16 ರೂ.ಗಳ ಲಾಭದೊಂದಿಗೆ 759.60 ರೂ., ಐಟಿಸಿ ಷೇರು ಸುಮಾರು 4 ರೂ.ಗಳ ಏರಿಕೆ ಕಂಡು 216.10 ರೂ., ಒಎನ್‌ಜಿಸಿ ಷೇರುಗಳು ಸುಮಾರು 2 ರೂ.ಗಳ ಏರಿಕೆ ಕಂಡು 114.50 ರೂ., ಎಸ್‌ಬಿಐ ಷೇರು ಸುಮಾರು 5 ರೂ.ಗಳಷ್ಟು ಏರಿಕೆ ಕಂಡು 365.00 ರೂ., ಲಾರ್ಸೆನ್‌ನ ಷೇರು ಸುಮಾರು 21 ರೂ.ಗಳಿಂದ 1,436.10 ರೂ. ಏರಿಕೆಗೊಂಡಿದೆ.
ಇಳಿಕೆಗೊಂಡ ಷೇರುಗಳು:
ಸನ್ ಫಾರ್ಮಾ ಷೇರುಗಳು 3 ರೂ.ಗಳ ಕುಸಿತ ಕಂಡು 688.05 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 4 ರೂ.ಗಳ ಕುಸಿತ ಕಂಡು 702.70 ರೂ., ಏಷ್ಯನ್ ಪೇಂಟ್ಸ್ ಷೇರುಗಳು ಸುಮಾರು 13 ರೂ.ನಿಂದ ಇಳಿದು 2,761.85 ರೂಗಳಿಗೆ ತಲುಪಿದೆ. ಟಾಟಾ ಸ್ಟೀಲ್ ಷೇರುಗಳು ಸುಮಾರು 7 ರೂ.ಗಳ ಕುಸಿತ ಕಂಡು 1,125.55 ರೂ., ಸಿಪ್ಲಾ ಷೇರುಗಳು ಸುಮಾರು 7 ರೂ.ಗಳ ಕುಸಿತ ಕಂಡು 897.15 ರೂ. ಮುಟ್ಟಿದೆ.


Click it and Unblock the Notifications