ಭಾರತೀಯ ಷೇರುಪೇಟೆಯು ಮಂಗಳವಾರ ದಾಖಲೆಯ ಜಿಗಿತ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಗರಿಷ್ಠ ಮಟ್ಟದ ಗಡಿದಾಟಿದೆ. ಸೆನ್ಸೆಕ್ಸ್ 397 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 120 ಪಾಯಿಂಟ್ಸ್ ಜಿಗಿತಗೊಂಡಿದೆ.
ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.76 ರಷ್ಟು ಅಥವಾ 397 ಪಾಯಿಂಟ್ಸ್ ಏರಿಕೆಗೊಂಡು 52,769.73 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.76ರಷ್ಟು ಅಥವಾ 120 ಪಾಯಿಂಟ್ಸ್ ಜಿಗಿತಗೊಂಡು 15,812.35 ಪಾಯಿಂಟ್ಸ್ ತಲುಪಿದೆ.

ಬಿಎಸ್‌ಟಿ ಮಿಡ್‌ಕ್ಯಾಪ್ ಇಂಡೆಕ್ಸ್ ಶೇಕಡಾ 2ರಷ್ಟು ಹೆಚ್ಚಾಗಿದ್ದು, ಸ್ಮಾಲ್‌ಕ್ಯಾಪ್ ಇಂಡೆಕ್ಸ್ 120 ಪಾಯಿಂಟ್ಸ್ ಅಥವಾ ಶೇ. 0.46ರಷ್ಟು ಏರಿಕೆಗೊಂಡಿದೆ. ಐಟಿ, ಟೆಕ್ ಮತ್ತು ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಎಲ್ಲ ವಲಯವು ಹಸಿರು ಬಣ್ಣದಲ್ಲಿ ಕೊನೆಗೊಂಡಿತು, ಬ್ಯಾಂಕಿಂಗ್ ಮತ್ತು ಹಣಕಾಸು ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಏರಿಕೆಯಾಗಿದೆ.
ಏರಿಕೆಗೊಂಡ ಷೇರುಗಳು:
ಐಸಿಐಸಿಐ ಬ್ಯಾಂಕಿನ ಷೇರುಗಳು 19 ರೂ.ಗಳ ಏರಿಕೆ ಕಂಡು 664.95 ರೂ., ಎಚ್‌ಡಿಎಫ್‌ಸಿಯ ಷೇರು 68 ರೂ.ಗಳ ಏರಿಕೆ ಕಂಡು 2,544.90 ರೂ., ಗ್ರೇಸಿಯಂ ಷೇರುಗಳು 41 ರೂ.ಗಳ ಏರಿಕೆ ಕಂಡು 1,576.65 ರೂ., ಆಕ್ಸಿಸ್ ಬ್ಯಾಂಕಿನ ಷೇರುಗಳು 17 ರೂ.ಗಳ ಏರಿಕೆ ಕಂಡು 770.75 ರೂ., ಸನ್ ಫಾರ್ಮಾ ಷೇರು 14 ರೂ.ಗಳ ಏರಿಕೆ ಕಂಡು 683.00 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಅದಾನಿ ಪೋರ್ಟ್ಸ್ ಷೇರುಗಳು 14 ರೂ.ಗಳ ಇಳಿಕೆ ಕಂಡು 704.00 ರೂ., ಎಚ್‌ಸಿಎಲ್ ಟೆಕ್ ಷೇರುಗಳು 12 ರೂ.ಗಳ ಇಳಿಕೆ ಕಂಡು 967.95 ರೂ., ಡಾ. ರೆಡ್ಡೀಸ್ ಲ್ಯಾಬ್‌ನ ಷೇರುಗಳು 57 ರೂ. ಕುಸಿದು 5,437.10 ರೂ.ಗೆ ಕೊನೆಗೊಂಡಿವೆ. ಟೆಕ್ ಮಹೀಂದ್ರಾ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 1,050.15 ರೂ., ಮಾರುತಿ ಸುಜುಕಿಯ ಷೇರು ಸುಮಾರು 40 ರೂ. ಕುಸಿದು 7,430.35 ರೂ.ಗೆ ತಲುಪಿದೆ.


Click it and Unblock the Notifications