ಭಾರತೀಯ ಷೇರುಪೇಟೆ ಮಂಗಳವಾರ ಸಾಕಷ್ಟು ಏರಿಳಿತಗಳ ನಡುವೆ ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 42.07 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 45.70 ಪಾಯಿಂಟ್ಸ್ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.09ರಷ್ಟು ಅಥವಾ 42.07 ಪಾಯಿಂಟ್ ಹೆಚ್ಚಳಗೊಂಡು 49,201.39 ಪಾಯಿಂಟ್ ತಲುಪಿದೆ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 45.70 ಪಾಯಿಂಟ್ ಅಥವಾ ಶೇಕಡಾ 0.31ರಷ್ಟು ತಲುಪಿದೆ. ಇಂದು 1,654 ಷೇರುಗಳು ಏರಿಕೆಗೊಂಡಿದ್ದು, 1,176 ಷೇರುಗಳು ಕುಸಿದವು, ಮತ್ತು 179 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಎನ್‌ಎಸ್‌ಇನಲ್ಲಿ ಅದಾನಿ ಪೋರ್ಟ್ಸ್, ಟಾಟಾ ಕನ್ಸೂಮರ್, ಏಷ್ಯನ್ ಪೇಂಟ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದವರಲ್ಲಿ, ಪವರ್ ಗ್ರಿಡ್ ಕಾರ್ಪ್, ಈಚರ್ ಮೋಟಾರ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ನಷ್ಟ ಅನುಭವಿಸಿದೆ.
ಲೋಹ ಮತ್ತು ಔಷಧ ಸೂಚ್ಯಂಕಗಳು ಶೇಕಡಾ 1 ರಷ್ಟು ಏರಿಕೆಯಾದರೆ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ 0.8-1 ರಷ್ಟು ಏರಿಕೆಯಾಗಿದೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ 12 ಪೈಸೆ ಇಳಿಕೆ ಕಂಡು 73.42 ಕ್ಕೆ ತಲುಪಿದೆ.


Click it and Unblock the Notifications