For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್‌ 63 ಪಾಯಿಂಟ್ಸ್‌ ಇಳಿಕೆ

|

ಭಾರತೀಯ ಷೇರುಪೇಟೆ ಸೋಮವಾರ ಆರಂಭಿಕ ಕುಸಿತದ ಬಳಿಕ ಚೇತರಿಸಿಕೊಂಡಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ ಸಮತಟ್ಟಾಗಿ ವಹಿವಾಟು ಕೊನೆಗೊಳಿಸಿತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 63 ಪಾಯಿಂಟ್ಸ್‌ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೇವಲ 3 ಪಾಯಿಂಟ್ಸ್‌ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತು.

ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.13ರಷ್ಟು ಅಥವಾ 63.84ರಷ್ಟು ಇಳಿಕೆಗೊಂಡು 48,718.52 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.02ರಷ್ಟು ಅಥವಾ 3.05ರಷ್ಟು ಏರಿಕೆಗೊಂಡು 14,634.15 ಪಾಯಿಂಟ್ಸ್‌ ಮುಟ್ಟಿದೆ.

Closing Bell: ಸೆನ್ಸೆಕ್ಸ್‌ 63 ಪಾಯಿಂಟ್ಸ್‌ ಇಳಿಕೆ

ಇಂದು ವಹಿವಾಟು ಅಂತ್ಯಕ್ಕೆ ಸುಮಾರು 1803 ಷೇರುಗಳು ಏರಿಕೆಗೊಂಡರೆ, 1184 ಷೇರುಗಳು ಕುಸಿದವು, ಮತ್ತು 162 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟೈಟಾನ್ ಕಂಪನಿ, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಬಿಪಿಸಿಎಲ್ ನಿಫ್ಟಿಯಲ್ಲಿ ಹೆಚ್ಚು ನಷ್ಟಗೊಂಡ ಷೇರುಗಳಾಗಿವೆ. ಎಸ್‌ಬಿಐ ಲೈಫ್ ಇನ್ಶುರೆನ್ಸ್, ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಮತ್ತು ಎಚ್‌ಯುಎಲ್ ಏರಿಕೆಗೊಂಡಿವೆ.

ಮೆಟಲ್ ಸೂಚ್ಯಂಕವು 2 ಪ್ರತಿಶತ ಮತ್ತು ಎಫ್ಎಂಸಿಜಿ ಸೂಚ್ಯಂಕವು 1 ಪ್ರತಿಶತದಷ್ಟು ಏರಿಕೆಯಾಗಿದೆ, ಆದರೆ ಬ್ಯಾಂಕಿಂಗ್ ಮತ್ತು ಇಂಧನ ಷೇರುಗಳ ಮಾರಾಟವು ಕಂಡುಬಂದಿದೆ.

English summary

Sensex And Nifty End Flat In Highly Volatile Market

Sensex was down 63.84 points or 0.13% at 48718.52, and the Nifty was up 3.10 points or 0.02% at 14634.20.
Story first published: Monday, May 3, 2021, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X