ಭಾರತೀಯ ಷೇರುಪೇಟೆ ಬುಧವಾರ ಸಾಕಷ್ಟು ಏರಿಳಿತಗಳ ನಡುವೆ ನಷ್ಟದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 67 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 27 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 66.95 ಪಾಯಿಂಟ್ಸ್ ಅಥವಾ ಶೇಕಡಾ 0.13ರಷ್ಟು ಕುಸಿದು 52482.71 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 27 ಪಾಯಿಂಟ್ಸ್ ಅಥವಾ ಶೇಕಡಾ 0.17ರಷ್ಟು ಇಳಿಕೆಗೊಂಡು 15721.50 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಅಂತ್ಯಕ್ಕೆ 1503 ಷೇರುಗಳು ಏರಿಕೆಗೊಂಡರೆ, 1455 ಷೇರುಗಳು ಕುಸಿದವು ಮತ್ತು 97 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಶ್ರೀ ಸಿಮೆಂಟ್ಸ್, ಬಜಾಜ್ ಫಿನ್‌ಸರ್ವ್, ಪವರ್ ಗ್ರಿಡ್ ಕಾರ್ಪ್, ಐಸಿಐಸಿಐ ಬ್ಯಾಂಕ್ ಮತ್ತು ಯುಪಿಎಲ್ ನಿಫ್ಟಿಯಲ್ಲಿ ಹೆಚ್ಚು ನಷ್ಟಗೊಂಡ ಷೇರುಗಳಾಗಿದ್ದು, ಕೋಲ್ ಇಂಡಿಯಾ, ಡಿವಿಸ್ ಲ್ಯಾಬ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಎಸ್‌ಬಿಐ ಲೈಫ್ ಇನ್ಸರೆನ್ಸ್ ಏರಿಕೆಗೊಂಡ ಷೇರುಗಳಾಗಿವೆ.
ಐಟಿ ಹೊರತುಪಡಿಸಿ, ಇತರ ಎಲ್ಲಾ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿದ್ದು, ನಿಫ್ಟಿ ಬ್ಯಾಂಕ್ ಸೂಚ್ಯಂಕವು ಶೇಕಡಾ 0.7 ರಷ್ಟು ಕುಸಿದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸಮತಟ್ಟಾಗಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 0.5 ರಷ್ಟು ಏರಿಕೆ ಕಂಡಿದೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲತೆಯ ಮಧ್ಯೆ ಭಾರತೀಯ ರೂಪಾಯಿ 9 ಡಾಲರ್ ಇಳಿಕೆಯಾಗಿ ಪ್ರತಿ ಡಾಲರ್‌ಗೆ 74.32 ಕ್ಕೆ ತಲುಪಿದೆ.


Click it and Unblock the Notifications