ಭಾರತೀಯ ಷೇರುಪೇಟೆ ಗುರುವಾರ ಸಕಾರಾತ್ಮಕ ಸೂಚನೆ ನಡುವೆ ದಿನದ ಅಂತ್ಯಕ್ಕೆ ಸಮತಟ್ಟಾಗಿ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 32 ಪಾಯಿಂಟ್ಸ್ ಹೆಚ್ಚಳಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 30 ಪಾಯಿಂಟ್ಸ್ ಏರಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 32.10 ಪಾಯಿಂಟ್ಸ್ ಅಥವಾ ಶೇಕಡಾ 0.06ರಷ್ಟು ಹೆಚ್ಚಾಗಿ 49,765.94 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 30.40 ಪಾಯಿಂಟ್ಸ್ ಅಥವಾ ಶೇಕಡಾ 0.20ರಷ್ಟು ಏರಿಕೆಗೊಂಡು 14,894.90 ಪಾಯಿಂಟ್ಸ್ ದಾಖಲಾಗಿದೆ.

ಇಂದು ಸುಮಾರು 1,376 ಷೇರುಗಳು ಏರಿಕೆಗೊಂಡರೆ, 1,505 ಷೇರುಗಳು ಕುಸಿದಿವೆ ಮತ್ತು 176 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎನ್‌ಎಸ್‌ಇನಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಲಾಭ ಗಳಿಸಿದ ಷೇರುಗಳಾಗಿದ್ದು, ಹೀರೋ ಮೊಟೊಕಾರ್ಪ್, ಈಚರ್ ಮೋಟಾರ್ಸ್, ಬಜಾಜ್ ಆಟೋ, ಎಚ್‌ಡಿಎಫ್‌ಸಿ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ನಷ್ಟ ಅನುಭವಿಸಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ 32 ಪೈಸೆ ಹೆಚ್ಚಳಗೊಂಡು ಪ್ರತಿ ಡಾಲರ್‌ಗೆ 74.04 ಕ್ಕೆ ತಲುಪಿದೆ.


Click it and Unblock the Notifications