ಭಾರತೀಯ ಷೇರುಪೇಟೆ ಶುಕ್ರವಾರ ಸಾಕಷ್ಟು ಏರಿಳಿತಗಳ ನಡುವೆ ದಿನದ ವಹಿವಾಟು ಅಂತ್ಯಕ್ಕೆ ಇಳಿಕೆಗೊಂಡಿದೆ. ರೆಪೋ ಹಾಗೂ ರಿವರ್ಸ್ ರೆಪೋದರವನ್ನು ಆರ್‌ಬಿಐ ಯಥಾಸ್ಥಿತಿ ಕಾಯ್ದುಕೊಂಡ ನಂತರ ಸೂಚ್ಯಂಕಗಳು ಸ್ವಲ್ಪ ಕಡಿಮೆಯಾಗಿವೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 132.38 ಪಾಯಿಂಟ್ಸ್ ಅಥವಾ ಶೇಕಡಾ 0.25ರಷ್ಟು ಇಳಿಕೆಗೊಂಡು 52,100.05 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 20.10 ಪಾಯಿಟ್ಸ್ ಅಥವಾ ಶೇಕಡಾ 0.13ರಷ್ಟು ಕುಸಿದು 15,670.30 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ 1832 ಷೇರುಗಳು ಏರಿಕೆಗೊಂಡರೆ, 1279 ಷೇರುಗಳು ಕುಸಿದವು, ಮತ್ತು 138 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನಿಫ್ಟಿಯಲ್ಲಿ ನೆಸ್ಲೆ, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಟಾಟಾ ಮೋಟಾರ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ಕೋಲ್ ಇಂಡಿಯಾ ಮತ್ತು ಒಎನ್‌ಜಿಸಿ ಏರಿಕೆ ದಾಖಲಿಸಿದೆ.
ಬ್ಯಾಂಕ್ ಮತ್ತು ಎಫ್‌ಎಂಸಿಜಿ ಹೊರತುಪಡಿಸಿ, ಇತರ ಎಲ್ಲ ವಲಯ ಸೂಚ್ಯಂಕಗಳು ಹೆಚ್ಚಿನ ಮಟ್ಟದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.5 ಪ್ರತಿಶತಕ್ಕಿಂತ ಹೆಚ್ಚಾಗಿದೆ.


Click it and Unblock the Notifications