For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 271 ಪಾಯಿಂಟ್ಸ್ ಕುಸಿತ, ನಿಫ್ಟಿ 102 ಪಾಯಿಂಟ್ಸ್ ಇಳಿಕೆ

|

ಭಾರತೀಯ ಷೇರುಪೇಟೆ ಬುಧವಾರ ಕುಸಿತಕ್ಕೆ ಸಾಕ್ಷಿಯಾಗಿದ್ದು, ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 271 ಪಾಯಿಂಟ್ಸ್ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 102 ಪಾಯಿಂಟ್ಸ್ ಇಳಿಕೆಗೊಂಡಿದೆ.

 

ಚಿನ್ನದ ಬೆಲೆ ಇಳಿಕೆ: ಒಂದು ತಿಂಗಳ ಕನಿಷ್ಠ ಮಟ್ಟದ ಸಮೀಪಚಿನ್ನದ ಬೆಲೆ ಇಳಿಕೆ: ಒಂದು ತಿಂಗಳ ಕನಿಷ್ಠ ಮಟ್ಟದ ಸಮೀಪ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.51ರಷ್ಟು ಅಥವಾ 271 ಪಾಯಿಂಟ್ಸ್‌ ಇಳಿಕೆಗೊಂಡು 52,501.98 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.64ರಷ್ಟು ಅಥವಾ 102 ಪಾಯಿಂಟ್ಸ್ ಕುಸಿದು 15,767.55 ಪಾಯಿಂಟ್ಸ್‌ ಮುಟ್ಟಿದೆ.

 
ಸೆನ್ಸೆಕ್ಸ್ 271 ಪಾಯಿಂಟ್ಸ್ ಕುಸಿತ, ನಿಫ್ಟಿ 102 ಪಾಯಿಂಟ್ಸ್ ಇಳಿಕೆ

ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 0.95 ಶೇಕಡಾ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ 0.68 ರಷ್ಟು ಕುಸಿದಿದೆ. ಬಿಎಸ್ಇ ಮೆಟಲ್ ಸೂಚ್ಯಂಕವು ಶೇಕಡಾ 2.58 ರಷ್ಟು ಕುಸಿದಿದ್ದು, ವಲಯ ಸೂಚ್ಯಂಕಗಳಲ್ಲಿ ಅಗ್ರ ನಷ್ಟದಲ್ಲಿದೆ.

ಬಿಎಸ್‌ಇ ಮೂಲ ವಸ್ತುಗಳಾದ ಇಂಧನ, ಕೈಗಾರಿಕೆಗಳು, ಟೆಲಿಕಾಂ, ಬಂಡವಾಳ ಸರಕುಗಳು, ವಿದ್ಯುತ್‌ ಮತ್ತು ರಿಯಾಲ್ಟಿ ಸೂಚ್ಯಂಕಗಳು ತಲಾ ಶೇ. 1ರಷ್ಟು ಕುಸಿದಿದೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 73.32 ಕ್ಕೆ ತಲುಪಿದೆ.

English summary

Sensex And Nifty Fall Over Half Percent Each

Sensex index fell 271 points, or 0.51 percent, to close at 52,501.98 while the Nifty ended 102 points, or 0.64 percent, lower at 15,767.55.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X