ಭಾರತೀಯ ಷೇರುಪೇಟೆ ಬುಧವಾರ ಸಾಕಷ್ಟು ಏರಿಳಿತಗಳ ನಂತರ ಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 194 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 61 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 193.58 ಪಾಯಿಂಟ್ಸ್ ಅಥವಾ ಶೇಕಡಾ 0.39ರಷ್ಟು ಹೆಚ್ಚಾಗಿ 53054.76 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 61.4 ಪಾಯಿಂಟ್ಸ್ ಅಥವಾ ಶೇಕಡಾ 0.39 ಪಾಯಿಂಟ್ಸ್ ಏರಿಕೆಗೊಂಡು 15879.65 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ 1737 ಷೇರುಗಳು ಏರಿಕೆಗೊಂಡರೆ, 1372 ಷೇರುಗಳು ಕುಸಿದವು ಮತ್ತು 136 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫಿನ್‌ಸರ್ವ್, ಹಿಂಡಾಲ್ಕೊ ಮತ್ತು ಯುಪಿಎಲ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಟೈಟಾನ್ ಕಂಪನಿ, ಒಎನ್‌ಜಿಸಿ, ಮಾರುತಿ ಸುಜುಕಿ, ಎಸ್‌ಬಿಐ ಲೈಫ್ಸ್ ಇನ್ಸುರೆನ್ಸ್ ಮತ್ತು ಶ್ರೀ ಸಿಮೆಂಟ್ಸ್ ನಷ್ಟ ಅನುಭವಿಸಿವೆ.
ರಿಯಾಲ್ಟಿ ಮತ್ತು ಮೆಟಲ್ ಸೂಚ್ಯಂಕಗಳು ತಲಾ 2 ಪ್ರತಿಶತದಷ್ಟು ಏರಿಕೆಯಾಗಿದ್ದು, ಆಟೋ ಮತ್ತು ತೈಲ ಮತ್ತು ಅನಿಲ ಷೇರುಗಳಲ್ಲಿ ಮಾರಾಟ ಕಂಡುಬಂದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಕಂಡುಬರುವ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಇಂಟ್ರಾಡೇ ನಷ್ಟವನ್ನು ಅಳಿಸಿಹಾಕಿತು ಮತ್ತು ಪ್ರತಿ ಡಾಲರ್‌ಗೆ 74.61 ರೂಪಾಯಿ ತಲುಪಿ ಸ್ವಲ್ಪ ಕಡಿಮೆಯಾಗಿದೆ.


Click it and Unblock the Notifications