For Quick Alerts
ALLOW NOTIFICATIONS  
For Daily Alerts

ಹೊಸ ವರ್ಷದ ಮೊದಲ ದಿನದ ಆರಂಭ ಹೊಸ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಜನವರಿ 1, 2021ರ ಶುಕ್ರವಾರದಂದು ಹೊಸ ಎತ್ತರಕ್ಕೆ ಏರುವ ಮೂಲಕ ಹೊಸ ವರ್ಷದ ಮೊದಲ ದಿನದ ವಹಿವಾಟನ್ನು ಆರಂಭಿಸಿವೆ. ಬೆಳಗ್ಗೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 47,916.56 ಪಾಯಿಂಟ್ ಮುಟ್ಟಿ, ಇನ್ನೇನು 48 ಸಾವಿರ ಪಾಯಿಂಟ್ ಕಡೆಗೆ ತನ್ನ ಓಟದ ಗುರಿ ನೆಟ್ಟಂತಿದೆ.

ಇತ್ತ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,028.90 ಪಾಯಿಂಟ್ ಮುಟ್ಟಿತು. ಇದು ಬೆಳಗ್ಗಿನ ವಹಿವಾಟಿನ ವಿವರ ಮಾತ್ರ. ಮಾರುಕಟ್ಟೆಯು ಮಧ್ಯಾಹ್ನ 3.30ರ ತನಕ ಇರುತ್ತದಾದ್ದರಿಂದ ಇನ್ನೂ ಏನೆಲ್ಲ ದಾಖಲೆಗಳು ಆಗಬಹುದು. ಆರಂಭದ ಗಳಿಕೆಯಲ್ಲಿ ನಿಫ್ಟಿ ಟಾಪ್ ಗೇಯ್ನರ್ಸ್ ಆಗಿ ಕಾಣಿಸಿಕೊಂಡಿದ್ದು ಮಹೀಂದ್ರಾ ಅಂಡ್ ಮಹೀಂದ್ರಾ, ಯುಪಿಎಲ್, ಟಿಸಿಎಸ್, ಎಸ್ ಬಿಐ ಮತ್ತು ಲಾರ್ಸನ್.

ಹೊಸ ವರ್ಷದ ಮೊದಲ ದಿನದ ಆರಂಭ ಹೊಸ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

ಇನ್ನು ಇಳಿಕೆ ಕಂಡ ಷೇರುಗಳು ಯಾವುವು ಅಂತ್ರ ನೋಡಿದರೆ, ಸನ್ ಫಾರ್ಮಾ, ಹಿಂಡಾಲ್ಕೋ, ಎಸ್ ಬಿಐ ಲೈಫ್ ಇನ್ಷೂರೆನ್ಸ್, ಡಿವೀಸ್ ಲ್ಯಾಬ್ಸ್, ಟೈಟಾನ್ ಕಂಪೆನಿ ಕಾಣಿಸುತ್ತವೆ. ಮೊದಲೇ ಹೇಳಿದಂತೆ ಇದು ದಿನದ ಆರಂಭದ ವಹಿವಾಟಿನ ಮಾಹಿತಿ ಮಾತ್ರ. ದಿನದ ಕೊನೆಗೆ ಏನಾಗುತ್ತದೋ ಕಾದು ನೋಡಬೇಕಾಗುತ್ತದೆ.

English summary

Sensex And Nifty Record High On First Day Of New Year 2021

Indian stock market index sensex and nifty hit record high on January 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X