ಬಲವಾದ ಜಾಗತಿಕ ಸೂಚನೆಗಳ ನಡುವೆ ಭಾರತದ ಷೇರುಪೇಟೆ ಗುರುವಾರ ಸಮತಟ್ಟಾದ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 10.57 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 1.10 ಪಾಯಿಂಟ್ಸ್ ಕುಸಿದಿದೆ.
ಬೆಳಿಗ್ಗೆ 9.18ರ ಸುಮಾರಿಗೆ ಸೆನ್ಸೆಕ್ಸ್ 10.57 ಪಾಯಿಂಟ್ಸ್ ಅಥವಾ ಶೇ. 0.02ರಷ್ಟು ಕುಸಿದು 52472.14 ಪಾಯಿಂಟ್ಸ್ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 1.10 ಪಾಯಿಂಟ್ಸ್ ಅಥವಾ ಶೇಕಡಾ 0.01ರಷ್ಟು ಇಳಿಕೆಗೊಂಡು 15720.40 ಪಾಯಿಂಟ್ಸ್ ತಲುಪಿದೆ.
ದಿನದ ವಹಿವಾಟು ಆರಂಭಗೊಂಡಾಗ 1376 ಷೇರುಗಳು ಏರಿಕೆಗೊಂಡರೆ, 728 ಷೇರುಗಳು ಕುಸಿದವು ಮತ್ತು 76 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಮಹೀಂದ್ರಾ ಮತ್ತು ಮಹೀಂದ್ರಾ ಷೇರು 12 ರೂ.ಗಳ ಲಾಭದೊಂದಿಗೆ 789.90 ರೂಗಳಲ್ಲಿ ತೆರೆಯಿತು., ಏಷ್ಯನ್ ಪೇಂಟ್ಸ್‌ನ ಷೇರುಗಳು 28 ರೂ.ಗಳ ಏರಿಕೆ ಕಂಡು 3,020.55 ರೂ., ಈಚರ್ ಮೋಟಾರ್ಸ್‌ನ ಷೇರುಗಳು 21 ರೂ.ಗಳ ಏರಿಕೆ ಕಂಡು 2,692.55 ರೂ., ಭಾರ್ತಿ ಏರ್‌ಟೆಲ್‌ನ ಷೇರು 4 ರೂಗಳ ಲಾಭದೊಂದಿಗೆ 529.55 ರೂಗಳಲ್ಲಿ ಪ್ರಾರಂಭವಾಯಿತು. ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 2 ರೂ.ಗಳ ಲಾಭದೊಂದಿಗೆ 341.80 ರೂ. ತಲುಪಿದೆ
ಇಳಿಕೆಗೊಂಡ ಷೇರುಗಳು:
ಇನ್ಫೋಸಿಸ್ ಷೇರುಗಳು ಸುಮಾರು 14 ರೂ.ಗಳಷ್ಟು ಇಳಿಕೆಯಾಗಿ 1,566.60 ರೂ., ಇಂಡಸ್‌ಇಂಡ್ ಬ್ಯಾಂಕಿನ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 1,010.95 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 1,164.30 ರೂ., ವಿಪ್ರೊ ಷೇರುಗಳು ಸುಮಾರು 1 ರೂ.ಗಳಷ್ಟು ಇಳಿಕೆಯಾಗಿ 544.40 ರೂ., ಬಜಾಜ್ ಫೈನಾನ್ಸ್‌ನ ಷೇರುಗಳು ಸುಮಾರು 10 ರೂ.ಗಳಷ್ಟು ಇಳಿಕೆಯಾಗಿ 6,005.50 ರೂ. ಮುಟ್ಟಿದೆ.


Click it and Unblock the Notifications