ಭಾರತೀಯ ಷೇರುಪೇಟೆಯು ಸೋಮವಾರ ಸಾಕಷ್ಟು ಏರಿಳಿತಗಳ ನಡುವೆ ಇಳಿಮುಖದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 86 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಸಮತಟ್ಟಾಗಿ ವಹಿವಾಟು ಕೊನೆಗೊಳಿಸಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.17ರಷ್ಟು ಅಥವಾ 86.95 ಪಾಯಿಂಟ್ಸ್ ಇಳಿಕೆಗೊಂಡು 49,771.29 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 7.60 ಪಾಯಿಂಟ್ಸ್ ಅಥವಾ ಶೇಕಡಾ 0.05% ಇಳಿಕೆಗೊಂಡು 14,736.40 ಪಾಯಿಂಟ್ಸ್ ಮುಟ್ಟಿದೆ. 1570 ಷೇರುಗಳು ಏರಿಕೆಗೊಂಡರೆ, 1427 ಷೇರುಗಳು ಕುಸಿತಗೊಂಡಿವೆ ಮತ್ತು 223 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಟಿಸಿಎಸ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಸನ್‌ಫಾರ್ಮಾ ಏರಿಕೆ ಸಾಧಿಸಿದೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 14 ಪೈಸೆ ಹೆಚ್ಚಳದಿಂದ ಪ್ರತಿ ಡಾಲರ್‌ಗೆ 72.37 ಕ್ಕೆ ತಲುಪಿದೆ. ಇಂದು ಪ್ರತಿ ಡಾಲರ್‌ಗೆ 72.33-72.51 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.


Click it and Unblock the Notifications