ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ, ನಿಫ್ಟಿ 104 ಪಾಯಿಂಟ್ಸ್ ಇಳಿಕೆ

ಕೇಂದ್ರ ಬಜೆಟ್ ಬಳಿಕ ತೀವ್ರ ಏರುಮುಖದಲ್ಲಿ ಸಾಗಿದ್ದ ಭಾರತೀಯ ಷೇರುಪೇಟೆ ಬುಧವಾರ ಕುಸಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 104 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.77ರಷ್ಟು ಅಥವಾ 400.34 ಪಾಯಿಂಟ್ಸ್ ಇಳಿಕೆಗೊಂಡು 51,703 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 104.55 ಪಾಯಿಂಟ್ಸ್ ಅಥವಾ ಶೇಕಡಾ 0.68ರಷ್ಟು ಕುಸಿದು 15,208.90 ಪಾಯಿಂಟ್ಸ್‌ ಮುಟ್ಟಿದೆ.

ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ, ನಿಫ್ಟಿ 104 ಪಾಯಿಂಟ್ಸ್ ಇಳಿಕೆ

ನೆಸ್ಲೆ, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಮಾರುತಿ ಸುಜುಕಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಹೀರೋ ಮೊಟೊಕಾರ್ಪ್, ಅದಾನಿ ಪೋರ್ಟ್ಸ್, ಎಸ್‌ಬಿಐ, ಪವರ್ ಗ್ರಿಡ್ ಕಾರ್ಪ್ ಮತ್ತು ಎನ್‌ಟಿಪಿಸಿ ಲಾಭಗಳಿಸಿವೆ.

ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಸುಮಾರು 6 ಪ್ರತಿಶತದಷ್ಟು ಹೆಚ್ಚಾಗಿದೆ. ಆದರೆ ಕೆಲವು ಪವರ್, ಇನ್ಫ್ರಾ ಮತ್ತು ಆಟೋ ವಲಯಗಳಲ್ಲಿ ಹೆಚ್ಚಿನ ಖರೀದಿ ಕಂಡುಬಂದಿದ್ದು, ಐಟಿ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+