ಭಾರತೀಯ ಷೇರುಪೇಟೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದು 52,000 ಗಡಿ ದಾಟಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 600 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 150ಕ್ಕೂ ಹೆಚ್ಚು ಪಾಯಿಂಟ್ಸ್ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶೇಕಡಾ 1.10ರಷ್ಟು ಅಥವಾ 565.91 ಪಾಯಿಂಟ್ಸ್ ಹೆಚ್ಚಳಗೊಂಡು 52,113.47 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.94ರಷ್ಟು ಅಥವಾ 142.65 ಪಾಯಿಂಟ್ಸ್ ಹೆಚ್ಚಾಗಿ 15,305.95 ಪಾಯಿಂಟ್ಸ್ ಮುಟ್ಟಿದೆ.

ಅಪೊಲೊ ಹಾಸ್ಪಿಟಲ್, ಮದರ್‌ಸನ್ ಸುಮಿ, ಅದಾನಿ ಎಂಟರ್‌ಪ್ರೈಸಸ್, ಎಂ&ಎಂ ಫೈನಾನ್ಷಿಯಲ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್, ಎಲ್‌ಐಸಿ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಪವರ್ ಫೈನಾನ್ಸ್ ನಿಫ್ಟಿಯಲ್ಲಿ ಪ್ರಮುಖವಾಗಿ ಲಾಭಗಳಿಸಿದ ಷೇರುಗಳಾಗಿದ್ದು, ಎಸ್‌ಬಿಐ ಲೈಫ್ ಇನ್ಸುರೆನ್ಸ್, ಹೆಚ್‌ಡಿಎಪ್‌ಸಿ ಲೈಫ್, ಟಿಸಿಎಸ್, ಡಾ. ರೆಡ್ಡಿ ಲ್ಯಾಬ್ಸ್, ಗ್ರೇಸಿಯಂ, ಏಷ್ಯನ್ ಪೈಂಟ್ಸ್, ಕೋಲ್ ಇಂಡಿಯಾ ಪ್ರಮುಖವಾಗಿ ನಷ್ಟ ಕಂಡ ಷೇರುಗಳಾಗಿವೆ.
ಹಿಂದಿನ ವಹಿವಾಟಿನ ದಿನದಂದು ಸೆನ್ಸೆಕ್ಸ್ 37.13 ಪಾಯಿಂಟ್‌ಗಳನ್ನು (ಶೇಕಡಾ 0.07 ) ಅಥವಾ 51,568.65 ಪಾಯಿಂಟ್ಸ್ ಹಾಗೂ ಅದೇ ಸಮಯದಲ್ಲಿ, ನಿಫ್ಟಿ 12 ಅಂಕಗಳನ್ನು ಅಥವಾ ಶೇಕಡಾ 0.08ರಷ್ಟು ಹೆಚ್ಚಾಗಿ 15,185.30 ಕ್ಕೆ ತಲುಪಿದೆ.


Click it and Unblock the Notifications