ಶುಕ್ರವಾರ ಆರಂಭದಲ್ಲೇ ಷೇರುಪೇಟೆ ತಲ್ಲಣಗೊಂಡಿದೆ. ಸೆನ್ಸೆಕ್ಸ್ ಭಾರೀ ಕುಸಿತ ಕಂಡಿದ್ದು ಮಾರುಕಟ್ಟೆ ಆರಂಭದಲ್ಲೇ 1,400 ಪಾಯಿಂಟ್ಸ್ ಇಳಿಕೆ ಕಂಡಿದೆ. ನಿಫ್ಟಿ 350 ಪಾಯಿಂಟ್ಸ್ ಇಳಿದಿದೆ.
ದೇಶದಲ್ಲಿ ಕೊರೊನೊವೈರಸ್ ಹರಡುವಿಕೆಯ ಭೀತಿ ಹಾಗೂ ಯೆಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ಹೇರಿಕೆ ಹಿನ್ನೆಲೆಯಲ್ಲಿ ಷೇರುಮಾರುಕಟ್ಟೆ ಆರಂಭದಲ್ಲೇ ಸಂಪೂರ್ಣ ಶೇಕ್ ಆಗಿದೆ. ಸೆನ್ಸೆಕ್ಸ್ ಗುರುವಾರ 38,470.61 ಅಂಶಗಳಿಗೆ ಕೊನೆಗೊಂಡಿತ್ತು. ನಿಫ್ಟಿ 11.269 ಪಾಯಿಂಟ್ಸ್ ಗಳಿಸಿತ್ತು. ಆದರೆ ಶುಕ್ರವಾರ ಸೆನ್ಸೆಕ್ಸ್ 2.6 ಪರ್ಸೆಂಟ್ ಹಾಗೂ ನಿಫ್ಟಿ 2.74 ಪರ್ಸೆಂಟ್ ಕುಸಿತ ಕಂಡಿದೆ.

ಈ ಕುಸಿತದಿಂದಾಗಿ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 37,500 ಅಂಶಗಳಿಗೆ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 10,950 ಪಾಯಿಂಟ್ಸ್‌ಗೆ ಮುಟ್ಟಿದೆ.
ಇನ್ನು ಆರ್‌ಬಿಐ ನಿರ್ಬಂಧಕ್ಕೆ ಒಳಪಟ್ಟ ಯೆಸ್ ಬ್ಯಾಂಕ್ ಷೇರುಗಳಂತೂ ಭಾರೀ ಕುಸಿತ ಕಂಡಿದ್ದು, ಬರೋಬ್ಬರಿ 29 ಪರ್ಸೆಂಟ್ ಇಳಿಕೆಯಾಗಿದೆ. ಗುರುವಾರ 36.80 ರುಪಾಯಿ ಇದ್ದ ಯೆಸ್ ಬ್ಯಾಂಕ್ ಷೇರಿನ ಮೌಲ್ಯ ಪ್ರಸ್ತುತ 25.80 ರುಪಾಯಿಗೆ ತಲುಪಿದೆ.
ನಷ್ಟ ಅನುಭವಿಸಿದ ಷೇರುಗಳು:
ಯೆಸ್ ಬ್ಯಾಂಕ್ , ಇಂಡಸ್‌ಲ್ಯಾಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಎಸ್‌ಬಿಐ, ಜೀ ಎಂಟರ್‌ಟೈನ್‌ಮೆಂಟ್, ಟಾಟಾ ಸ್ಟೀಲ್


Click it and Unblock the Notifications