For Quick Alerts
ALLOW NOTIFICATIONS  
For Daily Alerts

ಷೇರು ಪೇಟೆ ತತ್ತರ: ಆರಂಭಿಕ ವಹಿವಾಟಿನಲ್ಲಿ 1,100 ಕುಸಿದ ಸೆನ್ಸೆಕ್ಸ್

|

ಜಾಗತಿಕ ಮಾರುಕಟ್ಟೆಗಳ ದುರ್ಬಲ ಸೂಚನೆಗಳ ನಡುವೆ ಭಾರತೀಯ ಷೇರುಗಳ ಗುರುವಾರ ಆರಂಭಿಕ ವಹಿವಾಟಿನಲ್ಲೇ ತೀವ್ರವಾಗಿ ಕುಸಿತ ಕಂಡಿದೆ. ಏರುತ್ತಿರುವ ಜಾಗತಿಕ ಹಣದುಬ್ಬರ, ಚೀನಾದಲ್ಲಿ ಲಾಕ್‌ಡೌನ್‌ ಹಾಗೂ ಉಕ್ರೇನ್ ಯುದ್ಧದ ನಡುವೆ ಷೇರು ಮಾರುಕಟ್ಟೆಯು ಪಾತಾಳಕ್ಕೆ ಇಳಿದಿದೆ.

 

30-ಷೇರು ಬಿಎಸ್‌ಇ ಸೆನ್ಸೆಕ್ಸ್ 1,106 ಪಾಯಿಂಟ್‌ಗಳು ಅಥವಾ ಶೇಕಡಾ 2.04 ರಷ್ಟು ಕುಸಿದು 53,103 ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 314 ಪಾಯಿಂಟ್ ಅಥವಾ 1.94 ರಷ್ಟು ಕುಸಿದು 15,926 ಕ್ಕೆ ಕುಸಿದು ವಹಿವಾಟು ಆರಂಭ ಮಾಡಿದೆ.

 

ಮತ್ತೆ ಷೇರು ಮಾರುಕಟ್ಟೆ ಕುಸಿತ: ಕೆಳಕ್ಕಿಳಿದ ನಿಫ್ಟಿ, ಸೆನ್ಸೆಕ್ಸ್ಮತ್ತೆ ಷೇರು ಮಾರುಕಟ್ಟೆ ಕುಸಿತ: ಕೆಳಕ್ಕಿಳಿದ ನಿಫ್ಟಿ, ಸೆನ್ಸೆಕ್ಸ್

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2.38 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 2.80 ರಷ್ಟು ಕುಸಿದಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಆರಂಭಿಕವಾಗಿಯೇ ನಷ್ಟ ಕಂಡಿದೆ. ನಿಫ್ಟಿ ಐಟಿ ಮತ್ತು ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡಾ 3.25 ಮತ್ತು 3.01 ರಷ್ಟು ಕುಸಿದಿದೆ.

ಷೇರು ಪೇಟೆ ತತ್ತರ: ಆರಂಭಿಕ ವಹಿವಾಟಿನಲ್ಲಿ 1,100 ಕುಸಿದ ಸೆನ್ಸೆಕ್ಸ್

ಯಾರು ಟಾಪರ್, ಯಾರು ಲೂಸರ್?

ಪ್ರಮುಖವಾಗಿ ಟೆಕ್ ಮಹೀಂದ್ರಾ ಭಾರೀ ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಟೆಕ್ ಮಹೀಂದ್ರಾ ಷೇರುಗಳು ಶೇಕಡಾ 3.72 ರಷ್ಟು ಕುಸಿದು ರೂಪಾಯಿ 1,128.40 ಕ್ಕೆ ತಲುಪಿದೆ. ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್ ಮತ್ತು ವಿಪ್ರೋ ಸಹ ಆರಂಭಿಕವಾಗಿ ಹಿಂದುಳಿದಿವೆ.

ಬಿಎಸ್‌ಇಯಲ್ಲಿ 2,147 ಷೇರುಗಳು ಕುಸಿತ ಕಂಡರೆ 459 ಷೇರುಗಳು ಮುನ್ನಡೆ ಸಾಧಿಸಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟೆಕ್‌ಎಂ, ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್, ವಿಪ್ರೋ, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಎಸ್‌ಬಿಐ, ಟಿಸಿಎಸ್, ಎಚ್‌ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಕುಸಿತ ಕಂಡಿರುವ ಪ್ರಮುಖ ಷೇರುಗಳು ಆಗಿದೆ.

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ನಿನ್ನೆ 876.25 ರೂಪಾಯಿಗೆ ವಹಿವಾಟು ಅಂತ್ಯ ಮಾಡಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಕುಸಿತ ಕಂಡಿದೆ. 1.44 ಶೇಕಡ ಕುಸಿತ ಕಂಡು ರೂಪಾಯಿ 863.65 ಕ್ಕೆ ತಲುಪಿದೆ. ಎಲ್‌ಐಸಿ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ನೀರಸ ಚೊಚ್ಚಲ ಪ್ರವೇಶವನ್ನು ಮಾಡಿದೆ. 8.62 ಶೇಕಡಾ ರಿಯಾಯಿತಿಯಲ್ಲಿ ಪಟ್ಟಿಮಾಡಿದೆ. ನಿನ್ನೆ ಕೊಂಚ ಏರಿಕೆ ಕಂಡಿತ್ತು. ಆದರೆ ಇಂದು ಇಳಿದಿದೆ.

English summary

Sensex Crashes 1,100 Points, Nifty Settles Below 15,950

Sensex Dives Over 1,100 Points On Weak Global Cues, Nifty Below 15,950.
Story first published: Thursday, May 19, 2022, 10:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X