ಭಾರತೀಯ ಷೇರು ಮಾರುಕಟ್ಟೆ ಗುರುವಾರ ಮತ್ತೆ ಕುಸಿತ ಕಂಡಿದ್ದು, ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟಿನ ಕೊನೆಯಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದೆ. ಮುಖ್ಯವಾಗಿ ಬ್ಯಾಂಕಿಂಗ್, ಹಣಕಾಸು ಮತ್ತು ಲೋಹದ ಷೇರುಗಳು ಪಾತಾಳಕ್ಕೆ ಇಳಿದಿದೆ. ಇನ್ನು ಸೂಚ್ಯಂಕಗಳು ಇಂದು ಸತತ ಐದನೇ ಅವಧಿಗೆ ಇಳಿದಿದೆ.
ಹೂಡಿಕೆದಾರರು ಏಪ್ರಿಲ್‌ನ ಚಿಲ್ಲರೆ ಹಣದುಬ್ಬರದಿಂದಾಗಿ ಚಿಂತಿತರಾಗಿದ್ದಾರೆ. ಇದು 18 ತಿಂಗಳ ಗರಿಷ್ಠ ಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ. ಈ ಹಣದುಬ್ಬರದ ನಡುವೆ ಹೂಡಿಕೆ ಕುಸಿತ ಕಾಣುತ್ತಿದೆ. ಯುಎಸ್ ಗ್ರಾಹಕ ಬೆಲೆ ಸೂಚ್ಯಂಕವು ಒಂದು ವರ್ಷದ ಹಿಂದಿನಿಂದ ಶೇಕಡಾ 8.3 ರಷ್ಟು ಏರಿಕೆಯಾಗಿದೆ. ಆದರೆ ಮಾರ್ಚ್‌ನಲ್ಲಿ ಶೇಕಡ 8.5 ಆಗಿತ್ತು. ಆದರೆ 40 ವರ್ಷಗಳಲ್ಲಿ ಅತ್ಯಧಿಕ ಮಟ್ಟಕ್ಕೆ ಹತ್ತಿರದಲ್ಲಿದೆ.
ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರವು ಅಂಕಿಅಂಶವನ್ನು ಸಂಜೆ 5:30 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ, ಡಾಲರ್ ಎದುರು ಭಾರತೀಯ ರೂಪಾಯಿ ಹೊಸ ದಾಖಲೆಯ ಕುಸಿತ ಕಂಡಿದೆ.

ಎಷ್ಟು ಕುಸಿತ ಕಂಡಿದೆ?
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,158 ಪಾಯಿಂಟ್‌ಗಳು ಅಥವಾ ಶೇಕಡಾ 0.51 ರಷ್ಟು ಕುಸಿದು 54,088 ಕ್ಕೆ ವಹಿವಾಟು ಕೊನೆ ಮಾಡಿದೆ. ಎನ್‌ಎಸ್‌ಇ ನಿಫ್ಟಿ 359 ಪಾಯಿಂಟ್ ಅಥವಾ 2.22 ರಷ್ಟು ಕುಸಿದು 15,808 ಕ್ಕೆ ಸ್ಥಿರವಾಯಿತು. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2.33 ರಷ್ಟು ಕುಸಿದಿದೆ. ಸ್ಮಾಲ್ ಕ್ಯಾಪ್ ಶೇಕಡಾ 1.87 ರಷ್ಟು ಕುಸಿದು ದುರ್ಬಲವಾಗಿ ವಹಿವಾಟು ಅಂತ್ಯ ಮಾಡಿದೆ.
ಯಾವೆಲ್ಲಾ ಷೇರುಗಳು ಕುಸಿತ, ಯಾವುದು ಏರಿಕೆ?
ವಿಪ್ರೋ, ಹೆಚ್‌ಸಿಎಲ್ ಟೆಕ್ ಹೊರತುಪಡಿಸಿ ಬಹುತೇಕ ಎಲ್ಲಾ ಷೇರುಗಳು ಭಾರೀ ಕುಸಿತ ಕಂಡಿದೆ. ಟಿಸಿಎಸ್, ಸನ್ ಫಾರ್ಮಾ, ಐಟಿಸಿ, ಹಿಂದೂಲಿವರ್, ಇನ್ಫಿ, ಮಾರುತಿ, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಟೈಟಾನ್, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಪೈನಾನ್ಸ್ ಕುಸಿತ ಕಂಡಿದೆ.
ಆರಂಭಿಕ ವಹಿವಾಟು ಹೇಗಿತ್ತು?
ಷೇರು ಮಾರುಕಟ್ಟೆ ಸೂಚ್ಯಂಕಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಬೆಳಗಿನ ವಹಿವಾಟಿನಲ್ಲಿ ಶೇಕಡಾ ಒಂದಕ್ಕಿಂತ ಕೆಳಕ್ಕೆ ಕುಸಿತ ಕಂಡಿದೆ. ನಿರಂತರವಾಗಿ ಷೇರು ಮಾರುಕಟ್ಟೆಯು ತಲ್ಲಣಿಸುತ್ತಿದೆ. ಇದರಿಂದಾಗಿ ಹೂಡಿಕೆದಾರರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಕುಸಿತ ಕಂಡಿದೆ. ನಿಫ್ಟಿ ಶೇಕಡ 1.81 ಅಥವಾ 293.40 ಅಂಕಗಳು ಕೆಳಕ್ಕೆ ಇಳಿದಿದ್ದು, 16,167.10ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎಸ್ ಆಂಡ್ ಪಿ ಬಿಎಸ್‌ಇ ಸೆನ್ಸೆಕ್ಸ ಶೇಕಡ 1.80 ಅಥವಾ 971.42 ಅಂಕಗಳು ಕುಸಿದು, 53,116.97 ಕ್ಕೆ ತಲುಪಿದೆ.
ನಿಫ್ಟಿಯ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸೂಚ್ಯಂಕವು ಶೇಕಡಾ 3.2 ರಷ್ಟು ಕುಸಿದಿದೆ. ಇನ್ನು ನಿಫ್ಟಿಯ ಮೆಟಲ್, ಫೈನಾನ್ಸ್ ಮತ್ತು ಆಟೋ ಸೂಚ್ಯಂಕಗಳು ಸುಮಾರು 2 ಪ್ರತಿಶತದಷ್ಟು ಕುಸಿದವು. ಬುಧವಾರದಂದು ಷೇರು ಮಾರುಕಟ್ಟೆಗಳು ಎರಡು ತಿಂಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಇದಾದ ಬಳಿಕೆ ಸತತ ನಾಲ್ಕನೇ ದಿನ ಷೇರು ಮಾರುಕಟ್ಟೆ ತಲ್ಲಣಿಸಿದೆ. ಸೂಚ್ಯಂಕಗಳು ಶೇಕಡಾ 1.5 ರಷ್ಟು ಕುಸಿದಿದೆ. ಇದು ಕಳೆದ ಮಾರ್ಚ್ 9ರ ಬಳಿಕ ಮೊದಲ ಬಾರಿಗೆ ಇಷ್ಟು ಕೆಳಕ್ಕೆ ಇಳಿದಿದೆ.


Click it and Unblock the Notifications