ಐಟಿ ಷೇರು ಕುಸಿತ: ಸತತ ಮೂರನೇ ದಿನ ಸೆನ್ಸೆಕ್ಸ್, ನಿಫ್ಟಿ ಇಳಿಕೆ

ಮಾಹಿತಿ ತಂತ್ರಜ್ಞಾನದ ಷೇರುಗಳಲ್ಲಿನ ಭಾರೀ ಕುಸಿತದ ಕಾರಣದಿಂದಾಗಿ ಸತತ ಮೂರನೇ ದಿನ ವಹಿವಾಟಿನ ಅಂತ್ಯದ ವೇಳೆಗೆ ಷೇರು ಪೇಟೆಯಲ್ಲಿ ಕುಸಿತ ಕಂಡು ಬಂದಿದೆ. ಹೂಡಿಕೆದಾರರು ಯುಎಸ್ ಫೆಡರಲ್ ರಿಸರ್ವ್‌ನ ಇತ್ತೀಚಿನ ನೀತಿ ಸಭೆಯಿಂದ ಪ್ರಭಾವಿತರಾಗಿದ್ದಾರೆ.

ದರ ಏರಿಕೆಯು ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಅಲುಗಾಡಿಸಬಹುದು ಎಂದು ಹೂಡಿಕೆದಾರರು ಆತಂಕಗೊಂಡಿದ್ದಾರೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯು ಕೂಡಾ ಪರಿಣಾಮಕ್ಕೆ ಒಳಗಾಗಿದ್ದು, ನಿರಂತರವಾಗಿ ಕುಸಿತ ಕಾಣುತ್ತಿದೆ. ಆರಂಭಿಕವಾಗಿ ಕೊಂಚ ಚೇತರಿಸಿಕೊಂಡರೂ, ವಹಿವಾಟಿನ ಅಂತ್ಯದ ವೇಳೆಗೆ ಕುಸಿಯುತ್ತಿದೆ.

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 303 ಪಾಯಿಂಟ್‌ಗಳು ಅಥವಾ 0.56 ಶೇಕಡಾ ಕುಸಿದು 53,749 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 99 ಪಾಯಿಂಟ್ ಅಥವಾ 0.62 ರಷ್ಟು ಕುಸಿದು 16,026 ಕ್ಕೆ ಸ್ಥಿರವಾಯಿತು. ಇಂದಿನ ಸೆಷನ್‌ನಲ್ಲಿ ಸೆನ್ಸೆಕ್ಸ್ 696 ಅಂಕಗಳು ಏರಿಳಿತ ಕಂಡಿದೆ.

ಐಟಿ ಷೇರು ಕುಸಿತ: ಸತತ ಮೂರನೇ ದಿನ ಸೆನ್ಸೆಕ್ಸ್, ನಿಫ್ಟಿ ಇಳಿಕೆ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2.45 ರಷ್ಟು ಕುಸಿಯಿತು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 3.46 ರಷ್ಟು ಕುಸಿದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ 15 ಸೆಕ್ಟರ್ ಗೇಜ್‌ಗಳಲ್ಲಿ 11 ನಷ್ಟವನ್ನು ಕಂಡಿದೆ. ನಿಫ್ಟಿ ಐಟಿ, ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡಾ 3.38, ಶೇಕಡಾ 1.32 ಮತ್ತು ಶೇಕಡಾ 1.16 ರಷ್ಟು ಕುಸಿದಿದೆ.

ಯಾವ ಷೇರಿಗೆ ಲಾಭ, ಯಾವ ಷೇರಿಗೆ ನಷ್ಟ?

ಏಷ್ಯನ್ ಪೇಂಟ್ಸ್ ನಿಫ್ಟಿಯಲ್ಲಿ ಭಾರೀ ನಷ್ಟವನ್ನು ಕಂಡಿದೆ. ಸ್ಟಾಕ್ ಶೇಕಡಾ 8.03 ರಷ್ಟು ಕುಸಿದು ರೂಪಾಯಿ 2,839 ಕ್ಕೆ ತಲುಪಿದೆ. ಅದಾನಿ ಪೋರ್ಟ್ಸ್, ದಿವಿಸ್ ಲ್ಯಾಬ್ಸ್, ಯುಪಿಎಲ್ ಮತ್ತು ಟೆಕ್ ಮಹೀಂದ್ರಾ ಕೂಡ ಹಿಂದುಳಿದಿವೆ. 715 ಷೇರುಗಳು ಲಾಭ ಗಳಿಸಿದರೆ, ಬಿಎಸ್‌ಇಯಲ್ಲಿ 2,612 ಷೇರುಗಳು ಕೆಳಕ್ಕಿಳಿದಿದೆ.

30-ಷೇರು ಬಿಎಸ್‌ಇ ಸೂಚ್ಯಂಕದಲ್ಲಿ, ಏಷ್ಯನ್ ಪೇಂಟ್ಸ್, ಟಿಸಿಎಸ್, ಟೆಕ್‌ಎಂ, ವಿಪ್ರೋ, ಎಲ್ & ಟಿ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಎಸ್‌ಬಿಐ, ಎಂ & ಎಂ, ಟೈಟಾನ್, ಪವರ್‌ಗ್ರಿಡ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ಸ್ ಭಾರೀ ನಷ್ಟವನ್ನು ಕಂಡಿದೆ. ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ, ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್, ಐಟಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭವನ್ನು ಕಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+