ಇಂದು (ಜುಲೈ 12) ರಿಟೇಲ್ ಹಣದುಬ್ಬರದ ಡೇಟಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ನಡುವೆ ಭಾರತದ ಷೇರು ಮಾರುಕಟ್ಟೆಯು ತತ್ತರಿಸಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಕುಸಿತ ಕಂಡಿದೆ. ಸತತ ಎಳನೇ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಸುಮಾರು ಶೇಕಡ 6ಕ್ಕಿಂತ ಅಧಿಕವಾಗಿಯೇ ಉಳಿಯುವ ಸಾಧ್ಯತೆ ಇದೆ.
ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ. ಈಗ ಹಣದುಬ್ಬರವು ಮತ್ತೆ ಏರಿಕೆಯಾದರೆ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುವ ನಿರೀಕ್ಷೆ ಇದೆ. ಇವೆಲ್ಲವೂ ಕೂಡಾ ಹೂಡಿಕೆದಾರರ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಹೂಡಿಕೆದಾರರು ಹೂಡಿಕೆಯಿಂದ ತಾತ್ಕಾಲಿಕವಾಗಿ ಹಿಂಜರಿದಿದ್ದಾರೆ.
30 ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ 509 ಅಂಕ ಅಥವಾ ಶೇಕಡ 0.94ರಷ್ಟು ಕುಸಿದು 53,887ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 158 ಅಂಕ ಅಥವಾ ಶೇಕಡ 0.97ರಷ್ಟು ಇಳಿಕೆಯಾಗಿ 16,058ಕ್ಕೆ ವಹಿವಾಟು ಅಂತ್ಯ ಮಾಡಿದೆ. ಯಾವ ಷೇರು ಏರಿದೆ, ಯಾವುದು ಇಳಿದಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ನಿಫ್ಟಿ ಮಿಡ್‌ಕ್ಯಾಪ್ 100, ಸ್ಮಾಲ್ ಕ್ಯಾಪ್
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.45ರಷ್ಟು ಹಾಗೂ ಸ್ಮಾಲ್ ಕ್ಯಾಪ್ ಶೇಕಡ 0.42ರಷ್ಟು ಕುಸಿತ ಕಂಡಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 14 ನಷ್ಟವನ್ನು ಅನುಭವಿಸಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಆಟೋ, ನಿಫ್ಟಿ ಐಟಿ, ನಿಫ್ಟಿ ಮೆಟಲ್, ನಿಫ್ಟಿ ಎಫ್‌ಎಂಸಿಜಿ ಕ್ರಮವಾಗಿ ಶೇಕಡ 1.18, ಶೇಕಡ 1.16, ಶೇಕಡ 1.22 ಮತ್ತು ಶೇಕಡ 1.14ರಷ್ಟಿದೆ. ಇನ್ನು ಷೇರು ಮಾರುಕಟ್ಟೆಯಲ್ಲಿ 1,481 ಷೇರುಗಳು ಲಾಭವನ್ನು ಕಂಡಿದ್ದರೆ, 1,816 ಷೇರುಗಳು ನಷ್ಟವನ್ನು ಕಂಡಿದೆ.
ಐಷರ್ ಮೋಟರ್ಸ್‌ಗೆ ಭಾರೀ ನಷ್ಟ
ಐಷರ್ ಮೋಟರ್ಸ್ ಭಾರೀ ನಷ್ಟವನ್ನು ಕಂಡಿದೆ. ಶೇಕಡ 3.34ರಷ್ಟು ಇಳಿಕೆಯಾಗಿ, 2,945.15ಕ್ಕೆ ತಲುಪಿದೆ. ಇನ್ನು ಹಿಂಡಾಲ್ಕೊ, ಇನ್ಫೋಸಿಸ್, ಬಿಪಿಸಿಎಲ್, ಗ್ರಾಸಿಮ್ ಇಂಡಸ್ಟ್ರೀಸ್ ಷೇರುಗಳು ಕೂಡಾ ಕುಸಿತ ಕಂಡಿದೆ.
ಯಾವ ಷೇರು ಏರಿಕೆ, ಯಾವುದು ಕುಸಿತ?
30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಇನ್ಫೋಸಿಸ್, ನೆಸ್ಟ್ಲೆ ಇಂಡಿಯಾ, ಎಚ್‌ಸಿಎಲ್ ಟೆಕ್, ಪವರ್ ಗ್ರಿಡ್, ಹಿಂದೂಸ್ತಾನ್ ಯೂನಿಲಿವರ್, ಎಂ&ಎಂ, ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಟೈಟಾನ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್ ಸುಮಾರು ಶೇಕಡ 2.33ರಷ್ಟು ಕುಸಿತ ಕಂಡಿದೆ. ಈ ನಡುವೆ ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಬಜಾಜ್ ಫಿನಾನ್ಸ್ ಷೇರುಗಳು ಏರಿಕೆಯಾಗಿದೆ.
ಎಲ್‌ಐಸಿ ಷೇರು ಮತ್ತೆ ಕುಸಿತ
ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಇಂದು ಮತ್ತೆ ಕುಸಿತವನ್ನು ಕಂಡಿದೆ. ಎಲ್‌ಐಸಿ ಷೇರುಗಳು ಶೇಕಡ 0.15ರಷ್ಟು ಕುಸಿದು, ರೂಪಾಯಿ 717.30ಕ್ಕೆ ತಲುಪಿದೆ.


Click it and Unblock the Notifications