For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ: ಹೂಡಿಕೆದಾರರ 3 ಲಕ್ಷ ಕೋಟಿ ಖಲ್ಲಾಸ್

|

ಕೊರೊನಾವೈರಸ್ ಆತಂಕ ಸೋಮವಾರ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಸೆನ್ಸೆಕ್ಸ್ 806 ಪಾಯಿಂಟ್ಸ್‌ ಇಳಿಕೆ ಕಂಡಿದ್ದು, ನಿಫ್ಟಿ 251.45 ಪಾಯಿಂಟ್ಸ್‌ ಕುಸಿತಕ್ಕೆ ಒಳಗಾಗಿದೆ.

 

ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ ಆರಂಭದಿಂದಲೇ ಕುಸಿತದ ಹಾದಿ ಹಿಡಿಯಿತು. 12,080 ಅಂಶಗಳಿಗೆ ಕೊನೆಗೊಂಡಿದ್ದ ಎನ್‌ಎಸ್‌ಇ 251.45 ಅಂಶಗಳು ಇಳಿಕೆ ಸಾಧಿಸಿ 11,829.40ಗೆ ಅಂಶಗಳಿಗೆ ತಲುಪಿದೆ. ಇನ್ನು ಸೆನ್ಸೆಕ್ಸ್ 806 ಅಂಶಗಳು ಕುಸಿದು 40,363.23 ಅಂಶಗಳಿಗೆ ತಲುಪಿದೆ.

 
ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ: ಹೂಡಿಕೆದಾರರ 3 ಲಕ್ಷ ಕೋಟಿ ಖಲ್ಲಾಸ್

ಹೀರೋ ಮೋಟೊಕಾರ್ಪ್, ಎಲ್‌ಆ್ಯಂಡ್‌ಟಿ, ಎನ್‌ಬಿಸಿಸಿ,ಶೋಭಾ, ಜಿಐಸಿ ಹೌಸಿಂಗ್ ಫೈನಾನ್ಸ್‌ , ಸಿಎಸ್‌ಬಿ ಬ್ಯಾಂಕ್, ಎಲ್‌ಐಸಿ, ಕೆನರಾ ಬ್ಯಾಂಕ್ ಸೇರಿದಂತೆ ರಾಷ್ಟ್ರೀಯ ಷೇರುಪೇಟೆಯ ಸುಮಾರು 200 ಷೇರುಗಳು 52 ವಾರಗಳ ಕನಿಷ್ಟ ಮಟ್ಟಕ್ಕೆ ತಲುಪಿವೆ.

ಮತ್ತೊಂದೆಡೆ ಲಕ್ಷ್ಮೀ ವಿಲಾಸ್ ಬ್ಯಾಂಕ್, ಡಿಶ್ಮನ್ ಕಾರ್ಬೋಜನ್ ಆಮ್ಸಿಸ್ ಸೇರಿದಂತೆ 247 ಷೇರುಗಳು ಸೆನ್ಸೆಕ್ಸ್‌ನಲ್ಲಿ ಕನಿಷ್ಟ ಮಟ್ಟಕ್ಕೆ ತಲುಪಿವೆ.

ಕೊರೊನಾ ವೈರಸ್‌ ದಕ್ಷಿಣ ಕೊರಿಯಾದಲ್ಲಿ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಸುಮಾರು 700 ಮಂದಿಗೆ ಸೋಂಕು ತಗುಲಿದ್ದು, ಏಳು ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ 76,963 ಸೋಂಕು ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ 2,400 ಜನರು ಸಾವಿಗೀಡಾಗಿದ್ದಾರೆ. ಕೊರೊನಾವೈರಸ್‌ನಿಂದ ಜಗತ್ತಿನ ೨ನೇ ಅತಿದೊಡ್ಡ ಆರ್ಥಿಕತೆ ಚೀನಾ ತತ್ತರಿಸಿದ್ದು, ದಕ್ಷಿಣ ಕೊರಿಯಾಗೂ ವಿಸ್ತರಿಸಿದೆ.

English summary

Sensex Crashes 806 Points Nifty Ends Below 11,850

coronavirus effect Indian share market crashed. sensex lost 806 Points Nifty Ends Below 11,850
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X