ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇದರ ಪರಿಣಾಮ ಇದೀಗ ಷೇರು ಮಾರುಕಟ್ಟೆ ಮೇಲೂ ತಟ್ಟಿದೆ.ಇಂದು ಭಾರೀ ಕುಸಿತವನ್ನು ಷೇರುಮಾರುಕಟ್ಟೆ ಕಂಡಿದೆ.
ಹೌದು, ಇಂದು ಸೆನ್ಸೆಕ್ಸ್ 1,000 ಅಂಕಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಜಾಗತಿಕವಾಗಿ ಸಕಾರಾತ್ಮಕ ಸೂಚನೆಗಳ ಸೆನ್ಸೆಕ್ಸ್‌ಹೊರತಾಗಿಯೂ, ವಿವಿಧ ವಿಭಾಗಗಳಲ್ಲಿ ಭಾರೀ ಮಾರಾಟದಿಂದಾಗಿ ಇದು ಸಂಭವಿಸಿದೆ. ಭಾರತೀಯ ಷೇರು ಮಾರುಕಟ್ಟೆ ಇಂದು ಬೆಳಗ್ಗೆ ಪಾಸಿಟಿವ್ ಆಗಿ ತೆರೆದರೂ ನಷ್ಟದ ಹಾದಿಗೆ ತಲುಪಿದೆ.

ಸೆನ್ಸೆಕ್ಸ್ ಮಧ್ಯಾಹ್ನ 12 ಗಂಟೆಗೆ 1,150 ಪಾಯಿಂಟ್‌ಗಳ ಕುಸಿತದಿಂದ 78,646 ರಲ್ಲಿ ವಹಿವಾಟು ನಡೆಸುತ್ತಿದೆ, ಮತ್ತು ಎನ್‌ಎಸ್‌ಇ ನಿಫ್ಟಿ 372 ಪಾಯಿಂಟ್‌ಗಳ ಇಳಿಕೆಯಿಂದ 23,883 ರಲ್ಲಿ ವಹಿವಾಟು ನಡೆಸುತ್ತಿದೆ. ಇದು ದಿನದ ಕನಿಷ್ಠ ಮಟ್ಟವಾಗಿದ್ದು, ಭಾರೀ ನಷ್ಟವನ್ನು ಕಂಡಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹೆಚ್ಚಿನ ನಷ್ಟವನ್ನು ಕಂಡವು ಏಕೆಂದರೆ ಎರಡೂ ಅಧಿವೇಶನದಲ್ಲಿ ಶೇ3 ಕ್ಕಿಂತ ಹೆಚ್ಚು ಕುಸಿತವನ್ನು ಕಂಡಿವೆ.
ಹೂಡಿಕೆದಾರರಿಗೆ ಒಂದೇ ದಿನ 10 ಲಕ್ಷ ಕೋಟಿ ನಷ್ಟ
ಬಿಎಸ್‌ಇಯಲ್ಲಿ ಇರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ (market capitalization) ಶುಕ್ರವಾರದ ಆರಂಭದಲ್ಲಿ ಸುಮಾರು 430 ಲಕ್ಷ ಕೋಟಿಯಷ್ಟಿತ್ತು. ಇಂದು ಮಾರುಕಟ್ಟೆ ಭಾರೀ ಕುಸಿತಕ್ಕೆ ಒಳಗಾಗಿ, ಒಟ್ಟು ಮಾರುಕಟ್ಟೆ ಬಂಡವಾಳವು 420 ಲಕ್ಷ ಕೋಟಿಕ್ಕೆ ಇಳಿಕೆಯಾಗಿದೆ.ಹೂಡಿಕೆದಾರರು ಒಂದೇ ದಿನದಲ್ಲಿ 10 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ.
ಭಾರತೀಯ ಷೇರು ಮಾರುಕಟ್ಟೆ ಇಂದು ಏಕೆ ಕುಸಿಯುತ್ತಿದೆ?
ಶುಕ್ರವಾರ (ಏಪ್ರಿಲ್ 25) ಭಾರತೀಯ ಷೇರು ಮಾರುಕಟ್ಟೆ ಭಾರೀ ಮಾರಾಟಕ್ಕೆ ಸಾಕ್ಷಿಯಾಯಿತು, ಜಪಾನ್‌ನ ನಿಕ್ಕಿ ಮತ್ತು ಕೊರಿಯಾದ ಕೋಸ್ಪಿ ಸೇರಿದಂತೆ ಪ್ರಮುಖ ಏಷ್ಯಾದ ಸಮಾನ ಷೇರುಗಳು ವಹಿವಾಟಿನ ಅವಧಿಯಲ್ಲಿ ಶೇಕಡಾ ಒಂದು ಕ್ಕಿಂತ ಹೆಚ್ಚು ಜಿಗಿದು, ವಾರವನ್ನು ಲಾಭದೊಂದಿಗೆ ಕೊನೆಗೊಳಿಸುವ ನಿರೀಕ್ಷೆಗಳು ಇದ್ದವು.
ಟ್ರಂಪ್ ಆಡಳಿತದ ಸೂಚನೆಗಳು ವ್ಯಾಪಾರ ಯುದ್ಧದ ಬಗ್ಗೆ ಕಳವಳಗಳನ್ನು ಕಡಿಮೆ ಮಾಡಿದ ನಂತರ, ನಾಸ್ಡಾಕ್‌ನಲ್ಲಿ ಸುಮಾರು ಶೇ.3 ರಷ್ಟು ಮತ್ತು ಎಸ್ & ಪಿ 500 ನಲ್ಲಿ ಶೇಕಡಾ 2 ರಷ್ಟು ಲಾಭದ ನಂತರ ಏಷ್ಯಾದ ಷೇರುಗಳು ಜಿಗಿದವು. ಟ್ರಂಪ್ ಆಡಳಿತವು ಚೀನಾದ ಮೇಲಿನ ಸುಂಕವನ್ನು ಶೇಕಡಾ 50-65 ಕ್ಕೆ ಇಳಿಸಬಹುದು ಎಂದು ವರದಿಗಳಿಂದ ಮಾರುಕಟ್ಟೆ ನಷ್ಟದ ಅನುಭವನ್ನು ಕಂಡಿದೆ.
ಇಂದು ಮಾರುಕಟ್ಟೆ ಏಕೆ ಕುಸಿತಕ್ಕೆ ಪ್ರಮುಖ ಕಾರಣಗಳು?
1.ಭಾರತ-ಪಾಕಿಸ್ತಾನ ಗಡಿ ನಿಲುವು
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತವು ಪಾಕಿಸ್ತಾನ ವಿರುದ್ಧ ತೀವ್ರ ರಾಜತಾಂತ್ರಿಕ ಕ್ರಮ ಕೈಗೊಂಡಿದೆ. ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಯ ವಿರೋಧ ಪ್ರಧಾನಿ ನರೇಂದ್ರ ಮೋದಿ ಅವರು ಅಪರಾಧಿಗಳನ್ನು "ಗುರುತಿಸಲು, ಪತ್ತೆಹಚ್ಚಲು ಮತ್ತು ಶಿಕ್ಷಿಸಲು" ಪ್ರತಿಜ್ಞೆ ಮಾಡಿರುವುದರಿಂದ ಶೀಘ್ರದಲ್ಲೇ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಬಹುದು ಹೀಗಾಗಿ ವಾರಾಂತ್ಯಕ್ಕೂ ಮೊದಲು ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯಿಂದ ಹಿಂದೆ ಸೆರಿದಿದ್ದಾರೆ ಇದರಿಂದ ಸಹ ಮಾರುಕಟ್ಟೆ ಕುಸಿತ ಕಂಡಿದೆ.
2. ಮಾರುಕಟ್ಟೆ ಅಸ್ಥಿರತೆ
ಮಾರುಕಟ್ಟೆ ಭಯ ಸೂಚ್ಯಂಕ VIX ಶೇ.6ರಷ್ಟು ಏರಿಕೆಯಾಗಿದೆ.ಇದು ಹೂಡಿಕೆದಾರರಲ್ಲಿ ಭಯ ಹಾಗೂ ಅಸಾಧ್ಯತೆಯ ಮಿತಿಯನ್ನು ತೋರಿಸುತ್ತದೆ ಇದು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿರುವುದನ್ನು ಸೂಚಿಸುತ್ತದೆ.
3. ಸ್ಮಾಲ್ ಮತ್ತು ಮಿಡ್‌ಕ್ಯಾಪ್ ಷೇರುಗಳ ಇಳಿಕೆ
BSE ಸ್ಮಾಲ್ ಕ್ಯಾಪ್ ಶೇ.2.6 ಕುಸಿತ ಕಂಡಿದೆ. ಇದರ ಜೊತೆಗೆ BSE ಮಿಡ್‌ಕ್ಯಾಪ್ ಶೇ. 2.3ರಷ್ಟು ಇಳಿಕೆಯಾಗಿದೆ. ಮೌಲ್ಯಮಾಪನ ಇನ್ನೂ ಉನ್ನತ ಮಟ್ಟದಲ್ಲಿದೆ ಎಂಬ ನಿರೀಕ್ಷೆಯಿಂದ ಈ ಸೆಕ್ಟರ್‌ಗಳಲ್ಲಿ ಮಾರಾಟ ಒತ್ತಡ ಹೆಚ್ಚಾಗಿರುವುದರಿಂದ ಷೇರುಗಳು ಕುಸಿತವನ್ನು ಕಂಡಿವೆ.
4. ಜಾಗತಿಕ ಭೀತಿಗಳು: ಟ್ರಂಪ್ ತೆರಿಗೆ ನೀತಿ
ಅಮೆರಿಕದ ಟ್ಯಾರಿಫ್ ಭೀತಿ, ಚೀನಾ-USA ವ್ಯಾಪಾರ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಗಳ ಮೇಲೆ ಕಪ್ಪು ನೆರಳು ಬೀರಿದೆ,ಹೂಡಿಕೆ ಮಾಡಲು ಹೀದೇಟು ಆಗಿದ್ದಾರೆ. ಇದರಿಂದ ಸಹ ಷೇರುಮಾರುಕಟ್ಟೆ ನಷ್ಟವನ್ನು ಕಂಡಿದೆ.
5. ಕಂಪನಿಗಳ ತ್ರೈಮಾಸಿಕ ಫಲಿತಾಂಶದ ನಿರೀಕ್ಷೆ
ರಿಲಯನ್ಸ್, ಮಾರುತಿ ಮುಂತಾದ ಪ್ರಮುಖ ಕಂಪನಿಗಳ Q4 ಫಲಿತಾಂಶದ ನಿರೀಕ್ಷೆಯಲ್ಲಿ ಮಾರುಕಟ್ಟೆ ಇರುವುದರಿಂದ ಇದು ಸಹ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ನಷ್ಟ ಅನುಭವಿಸಿದ ಷೇರುಗಳು
ಆಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್‌ಗಳು,ಬಜಾಜ್ ಫೈನಾನ್ಸ್,ಟೆಕ್ ಮಹೀಂದ್ರಾ,ಬಜಾಜ್ ಫಿನ್‌ಸರ್ವ್,ಪವರ್ ಗ್ರಿಡ್,ಎನ್‌ಟಿಪಿಸಿ, ಟಾಟಾ ಸ್ಟೀಲ್
ಇಂದು ಏರಿಕೆಯಾದ ಷೇರು
ತ್ರೈಮಾಸಿಕ ಫಲಿತಾಂಶದ ಪರಿಣಾಮವಾಗಿ ಶೇ.6 SBI ಲೈಫ್ ಇನ್ಸೂರೆನ್ಸ್ ಏರಿಕೆಯಾಗಿದೆ


Click it and Unblock the Notifications