ಏರಿಕೆಯಾಗಿದ್ದ ಸೆನ್ಸೆಕ್ಸ್ ಕುಸಿತ: 716 ಪಾಯಿಂಟ್ಸ್‌ ಇಳಿಕೆ

ಭಾರತೀಯ ಷೇರುಪೇಟೆ ಇಂದು ಕೆಳಮುಖವಾಗಿ ವಹಿವಾಟು ಆರಂಭಿಸಿದೆ. ಇಂದು ಬಿಎಸ್‌ಇ ಸೆನ್ಸೆಕ್ಸ್ 716.04 ಪಾಯಿಂಟ್‌ಗಳ ಕುಸಿತ ಕಂಡಿದ್ದು, 50,728.61 ರ ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 15,033.40 ಮಟ್ಟದಲ್ಲಿ 212.20 ಪಾಯಿಂಟ್‌ಗಳ ನಷ್ಟದೊಂದಿಗೆ ತೆರೆಯಿತು.

ಏರಿಕೆಯಾಗಿದ್ದ ಸೆನ್ಸೆಕ್ಸ್ ಕುಸಿತ: 716 ಪಾಯಿಂಟ್ಸ್‌ ಇಳಿಕೆ

ಇಂದು, ಬಿಎಸ್ಇಯಲ್ಲಿ ಒಟ್ಟು 1,606 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 534 ಷೇರುಗಳು ಏರಿಕೆಗೊಂಡರೆ 1001 ಇಳಿಕೆಗೊಂಡವು. ಅದೇ ಸಮಯದಲ್ಲಿ, 71 ಕಂಪನಿಗಳ ಷೇರು ಬೆಲೆಗಳು ಕಡಿಮೆಯಾಗದೆ ಅಥವಾ ಹೆಚ್ಚಾಗದೆ ವಹಿವಾಟು ಆರಂಭಿಸಿದವು.

ಷೇರುಪೇಟೆಯ ಇಳಿಕೆಯ ನಡುವೆ ಒಎನ್‌ಜಿಸಿ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 116.00 ರೂ., ಇನ್ಫೋಸಿಸ್ ಷೇರುಗಳು ಸುಮಾರು 19 ರೂ.ಗಳ ಏರಿಕೆ ಕಂಡು 1,362.65 ರೂ. ವಿಪ್ರೋ ಷೇರುಗಳು ಸುಮಾರು 4 ರೂ.ಗಳ ಏರಿಕೆ ಕಂಡು 439.70 ರೂ.ಗೆ ತಲುಪಿದೆ. ಟೆಕ್ ಮಹೀಂದ್ರಾ ಷೇರು ಸುಮಾರು 8 ರೂ.ಗಳ ಲಾಭದೊಂದಿಗೆ 984.00 ರೂ. ತಲುಪಿದೆ.

ಇನ್ನು ಗುರುವಾರ ಆರಂಭಿಕ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯವು ಡಾಲರ್‌ ಎದುರು 27 ಪೈಸೆ ಕುಸಿದು 72.99 ರೂ. ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+