For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಭಾರೀ ಕುಸಿತ: 1,200 ಪಾಯಿಂಟ್ಸ್ ಇಳಿಕೆ

|

ಭಾರತೀಯ ಷೇರುಪೇಟೆಯು ಸೋಮವಾರ (ಏ. 12) ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1,200 ಪಾಯಿಂಟ್ಸ್ ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 365 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಭಾರತೀಯ ಕಾಲಮಾನ ಬೆಳಿಗ್ಗೆ 9.50ರ ಸುಮಾರಿಗೆ ಶೇಕಡಾ 2.31ರಷ್ಟು ಅಥವಾ 1,139 ಪಾಯಿಂಟ್ಸ್‌ ಇಳಿಕೆಗೊಂಡು 48,452 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 2.28ರಷ್ಟು ಅಥವಾ 346 ಪಾಯಿಂಟ್ಸ್‌ ಇಳಿಕೆಗೊಂಡು 14,499 ಪಾಯಿಂಟ್ಸ್‌ಗೆ ಕುಸಿದಿದೆ.

ಸೆನ್ಸೆಕ್ಸ್ ಭಾರೀ ಕುಸಿತ: 1,200 ಪಾಯಿಂಟ್ಸ್ ಇಳಿಕೆ

ಇಂದು ಮಾರುಕಟ್ಟೆ ವಹಿವಾಟು ಆರಂಭದಲ್ಲಿ 386 ಷೇರುಗಳು ಏರಿಕೆಗೊಂಡರೆ, 1,181 ಷೇರುಗಳು ಕುಸಿತಕ್ಕೆ ಸಾಕ್ಷಿಯಾದವು ಮತ್ತು 76 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಆರಂಭಿಕ ವಹಿವಾಟಿನಲ್ಲಿ ಇಂಡಸ್ಇಂಡ್ ಬ್ಯಾಂಕಿನ ಷೇರುಗಳು 866.05 ರೂ.ಗೆ ಪ್ರಾರಂಭವಾದವು, ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 243 ರೂ.ಗಳನ್ನು ಕಳೆದುಕೊಂಡು 4,629.30 ರೂ., ಟಾಟಾ ಮೋಟಾರ್ಸ್ ಷೇರುಗಳು 13 ರೂ.ಗಳ ಕುಸಿತದೊಂದಿಗೆ 304.85 ರೂ., ಎಸ್‌ಬಿಐ ಷೇರು ಸುಮಾರು 15 ರೂ.ಗಳ ಕುಸಿತ ಕಂಡು 338.20 ರೂ., ಟಾಟಾ ಸ್ಟೀಲ್ ಷೇರುಗಳು ರೂ. 869.00 ಕ್ಕೆ ಪ್ರಾರಂಭವಾಯಿತು, ಇದು ಸುಮಾರು 31 ರೂ. ಕುಸಿತ ಕಂಡಿತು

English summary

Sensex Down 1200 Points: Nifty Below 14,500 Level

Sensex was down 1,139 points or 2.31% at 48,452, and the Nifty was down 346 points or 2.28% at 14,499
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X