For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್‌ 1,100 ಪಾಯಿಂಟ್ಸ್‌ ಕುಸಿತ: ನಿಫ್ಟಿ 332 ಪಾಯಿಂಟ್ಸ್ ಇಳಿಕೆ

|

ಭಾರತದಲ್ಲಿ ಕೋವಿಡ್-19 ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆ ಒಂದೆಡೆಯಾದ್ರೆ, ಭಾರತೀಯ ಷೇರುಪೇಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1,300 ಪಾಯಿಂಟ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 389 ಪಾಯಿಂಟ್ಸ್ ಕುಸಿದಿದೆ.

ಭಾರತೀಯ ಕಾಲಮಾನ 10.28ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 1,147 ಪಾಯಿಂಟ್ಸ್‌ ಅಥವಾ ಶೇಕಡಾ 2.35ರಷ್ಟು ಕುಸಿತಗೊಂಡು 47,684 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 332.05 ಪಾಯಿಂಟ್ಸ್‌ ಅಥವಾ ಶೇಕಡಾ 2.27ರಷ್ಟು ಇಳಿಕೆಗೊಂಡು 14,285.80 ಪಾಯಿಂಟ್ಸ್‌ಗೆ ತಲುಪಿದೆ.

ಷೇರುಪೇಟೆ: ಸೆನ್ಸೆಕ್ಸ್‌ 1,100 ಪಾಯಿಂಟ್ಸ್‌ ಕುಸಿತ

ಇಂದು ಸುಮಾರು 465 ಷೇರುಗಳು ಏರಿಕೆಗೊಂಡರೆ, 2001 ಷೇರುಗಳು ಕುಸಿದವು, ಮತ್ತು 124 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇನ್ನು ಆರಂಭಿಕ ವಹಿವಾಟಿನಲ್ಲಿ ಸೋಮವಾರ ಭಾರತೀಯ ರೂಪಾಯಿ ಕುಸಿದಿದೆ. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಇದು ಹಿಂದಿನ 74.35 ಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 43 ಪೈಸೆ ಇಳಿಕೆಗೊಂಡು 74.78 ರೂಪಾಯಿಗೆ ತಲುಪಿದೆ.

English summary

Sensex Down 1300 Points: Nifty Slip Over 2 Percent

Sensex was down 1,168.60 points or 2.39% at 47663.43, and the Nifty was down 337.40 points or 2.31% at 14280.50.
Story first published: Monday, April 19, 2021, 10:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X