ಭಾರತೀಯ ಷೇರುಪೇಟೆ ಶುಕ್ರವಾರ ಇಳಿಮುಖದೊಂದಿಗೆ ಪ್ರಾರಂಭಗೊಂಡು ದಿನದ ವಹಿವಾಟು ಕೆಂಪು ಬಣ್ಣದಲ್ಲೇ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 154 ಪಾಯಿಂಟ್ಸ್ ಕುಸಿತಗೊಂಡರೆ, ನಿಫ್ಟಿ 38 ಪಾಯಿಂಟ್ಸ್ ಇಳಿಕೆಗೊಂಡಿದೆ.
ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಭೀತಿ ಹಾಗೂ ಲಾಭದ ಬುಕ್ಕಿಂಗ್‌ನಿಂದಾಗಿ ಸೆನ್ಸೆಕ್ಸ್ ಶೇಕಡಾ 0.31ರಷ್ಟು ಅಥವಾ 154.89 ಪಾಯಿಂಟ್ ಕುಸಿದು 49,591.32 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.26ರಷ್ಟು ಅಥವಾ 38.90 ಪಾಯಿಂಟ್ಸ್ ಇಳಿಕೆಗೊಂಡು 14,834.90 ಕ್ಕೆ ತಲುಪಿದೆ.

ಇಂದು ಸುಮಾರು 1647 ಷೇರುಗಳು ಏರಿಕೆಗೊಂಡರೆ, 1,212 ಷೇರುಗಳು ಕುಸಿದಿವೆ ಮತ್ತು 163 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎನ್‌ಎಸ್‌ಇನಲ್ಲಿ ಸಿಪ್ಲಾ, ಸನ್ ಫಾರ್ಮಾ, ಎಚ್‌ಯುಎಲ್, ಟೆಕ್ ಮಹೀಂದ್ರಾ ಮತ್ತು ವಿಪ್ರೊ ಪ್ರಮುಖವಾಗಿ ಲಾಭಗಳಿಸಿದ ಷೇರುಗಳಾಗಿದ್ದು, ಬಜಾಜ್ ಫೈನಾನ್ಸ್, ಯುಪಿಎಲ್, ಟಾಟಾ ಸ್ಟ್ರೀಲ್, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ ನಷ್ಟಗೊಂಡ ಪ್ರಮುಖ ಷೇರುಗಳು.


Click it and Unblock the Notifications