ಭಾರತೀಯ ಷೇರುಪೇಟೆಯಲ್ಲಿ ಸೋಮವಾರ ಕರಡಿ ಕುಣಿತ ಜೋರಾಗಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಂಖ್ಯೆಗಳು ಹೂಡಿಕೆದಾರರನ್ನು ಲಾಭದ ಬುಕ್ಕಿಂಗ್ ಕಡೆಗೆ ಕರೆದೊಯ್ದಿದ್ದು, ದುರ್ಬಲ ಜಾಗತಿಕ ಸೂಚನೆಗಳ ಹೊರತಾಗಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1,700 ಪಾಯಿಂಟ್ಸ್ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 500ಕ್ಕೂ ಹೆಚ್ಚು ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 3.44ರಷ್ಟು ಅಥವಾ 1707.94 ಪಾಯಿಂಟ್ಸ್ ಇಳಿಕೆಗೊಂಡು 47883.38 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 3.53ರಷ್ಟು ಅಥವಾ 14,310.80 ಪಾಯಿಂಟ್ಸ್‌ಗೆ ಇಳಿಕೆಗೊಂಡಿದೆ.

ಇಂದು ವಹಿವಾಟು ಮುಕ್ತಾಯಕ್ಕೆ 493 ಷೇರುಗಳು ಏರಿಕೆಗೊಂಡರೆ, ಬರೋಬ್ಬರಿ 2,433 ಷೇರುಗಳು ಕುಸಿತಗೊಂಡಿವೆ ಮತ್ತು 171 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಯುಪಿಎಲ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಡಾ. ರೆಡ್ಡಿ ಲ್ಯಾಬ್ಸ್, ಸಿಪ್ಲಾ, ಡಿವಿಎಸ್ ಲ್ಯಾಬ್ಸ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಏರಿಕೆಗೊಂಡಿದೆ.
ಇನ್ನು ಏಪ್ರಿಲ್ 14 ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಲಾಕ್‌ಡೌನ್ ಹೇರಲು ಮಹಾರಾಷ್ಟ್ರ ಸರ್ಕಾರ ಪರಿಗಣಿಸಲಿರುವುದರಿಂದ ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ರೂಪಾಯಿ ಪ್ರತಿ ಡಾಲರ್‌ಗೆ 31 ಪೈಸೆ ಇಳಿಕೆಗೊಂಡು 75.05 ಕ್ಕೆ ತಲುಪಿದೆ.


Click it and Unblock the Notifications