ಭಾರತೀಯ ಷೇರುಪೇಟೆ ಮಂಗಳವಾರ (ಜೂನ್ 29) ಸಾಕಷ್ಟು ಏರಿಳಿತಗಳ ನಡುವೆ ಕುಸಿತದೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 185 ಪಾಯಿಂಟ್ಸ್ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 66 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 185.93 ಪಾಯಿಂಟ್ಸ್ ಅಥವಾ ಶೇಕಡಾ 0.33ರಷ್ಟು ಇಳಿಕೆಗೊಂಡು 52,549.66 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 66.20 ಪಾಯಿಂಟ್ಸ್ ಅಥವಾ ಶೇಕಡಾ 0.42ರಷ್ಟು ಕುಸಿದು 15748.50 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ 1440 ಷೇರುಗಳು ಏರಿಕೆಗೊಂಡರೆ, 1536 ಷೇರುಗಳು ಕುಸಿದವು, ಮತ್ತು 87 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಐಒಸಿ, ಒಎನ್‌ಜಿಸಿ, ಹಿಂಡಾಲ್ಕೊ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಪವರ್ ಗ್ರಿಡ್ ಕಾರ್ಪ್, ಸಿಪ್ಲಾ, ಎಚ್‌ಯುಎಲ್, ಎನ್‌ಟಿಪಿಸಿ ಮತ್ತು ಡಿವಿಸ್ ಲ್ಯಾಬ್‌ಗಳು ಹೆಚ್ಚಿನ ಲಾಭ ಗಳಿಸಿವೆ.
ಎಫ್‌ಎಂಸಿಜಿ ಮತ್ತು ಫಾರ್ಮಾ ಹೊರತುಪಡಿಸಿ, ಇತರ ಎಲ್ಲಾ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ನಿಫ್ಟಿ ಬ್ಯಾಂಕ್, ಮೆಟಲ್, ಆಟೋ ಮತ್ತು ಪಿಎಸ್‌ಯು ಬ್ಯಾಂಕ್ ತಲಾ 1 ಪ್ರತಿಶತದಷ್ಟು ಕುಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಶೇ 0.4 ರಷ್ಟು ಕಡಿಮೆಯಾಗಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಸಮತಟ್ಟಾಗಿದೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 74.23 ಕ್ಕೆ ತಲುಪಿದೆ. ಇದು ಹಿಂದಿನ 74.19 ರ ವಿರುದ್ಧ ಡಾಲರ್‌ಗೆ 9 ಪೈಸೆ ಇಳಿಕೆಯಾಗಿ 74.28 ಕ್ಕೆ ಇಳಿಯಿತು ಮತ್ತು 74.19-74.29 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.


Click it and Unblock the Notifications